ರೇಪಿಸ್ಟ್ ಗಳನ್ನು ಎನ್ ಕೌಂಟರ್ ಮಾಡಬೇಕೆಂದ ಕಂಗನಾ

ಮುಂಬೈ: ತನ್ನ ನಟನೆಯಲ್ಲಿ ಎಷ್ಟು ಪ್ರಖ್ಯಾತಿಯೋ ಅಷ್ಟೇ ತಾನೇ ತಕರಾರುಗಳನ್ನು ಮೈ ಮೇಲೆ ಎಳೆದುಕೊಳ್ಳುವಲ್ಲು ಬಾಲಿವುಡ್ ನಟಿ ಕಂಗನಾ ರನಾವತ್ ಅಷ್ಟೇ ಪ್ರಸಿದ್ಧಿ ಪಡೆದಿದ್ದಾಳೆ. ಇತ್ತಿಚೆಗೆ ಶಿವಸೇನೆಯ ಆಕ್ರೋಶಕ್ಕೆ ಗುರಿಯಾಗಿರುವ ಕಂಗನಾ ಇಂದು ಗನ್ ಫೈಯರ್ ಸ್ಟೇಟ್ ಮೆಂಟ್ ಒಂದನ್ನು ನೀಡಿದ್ದಾರೆ.

ಉತ್ತರ ಪ್ರದೇಶದ ಹಸ್ರಾತ್ ನಲ್ಲಿ 19 ವರ್ಷದ ಮಹಿಳೆ ಮೇಲೆ ಗ್ಯಾಂಗ್ ರೇಪ್ ಎಸಗಿರುವದನ್ನು ಖಂಡಿಸಿರುವ ಕಂಗನಾ, ರೇಪಿಸ್ಟ್ ಗಳನ್ನು ನಡು ಬೀದಿಯಲ್ಲಿ ಗುಂಡಿಕ್ಕಿ ಕೊಲ್ಲಬೇಕು ಎಂದು ಆಗ್ರಹಿಸಿದ್ದಾರೆ. ಇದೇ ವೇಳೆ ಕಂಗನಾ ಇಂತಹ ವರ್ತನೆ ಹೊಂದಿರುವವರನ್ನು ಯಾವುದೇ ಕಾರಣಕ್ಕೂ ಕ್ಷಮಿಸಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 
 
 
 
 
 
 
 
 
 
 

Leave a Reply