ಕಿಸಾನ್ ಸಮ್ಮಾನ ನಿಧಿಯ ಅನುದಾನ ಬಿಡುಗಡೆಯಲ್ಲಿ ದೆಹಲಿಯ ಕೃಷಿ ಭವನದಿಂದ ಶೋಭಾ ಕರಂದ್ಲಾಜೆ ಭಾಗಿ

ದೆಹಲಿ : ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ, ಶೋಭಾ ಕರಂದ್ಲಾಜೆ ಇಂದು ಪಿ.ಎಂ. ಕಿಸಾನ್ ಸಮ್ಮಾನ ನಿಧಿಯ 10ನೇ ಕಂತಿನ ಅನುದಾನ ಬಿಡುಗಡೆಯ ಕಾರ್ಯಕ್ರಮದಲ್ಲಿ ತಮ್ಮ ಕಚೇರಿ, ದೆಹಲಿಯ ಕೃಷಿ ಭವನದಿಂದ ಪಾಲ್ಗೊಂಡರು.

ದೇಶದ ಬೆನ್ನೆಲುಬಾದ ರೈತರಿಗೆ ಕಿಸಾನ್ ಸಮ್ಮಾನ್ ನಿಧಿಯ 10 ನೇ ಕಂತಿನ ₹2000.00 ಗಳನ್ನು ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ DBTಯ ಮೂಲಕ, ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದರು.

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಕೃಷಿ ರಾಜ್ಯ ಸಚಿವ ಕೈಲಾಶ್ ಚೌಧರಿ ಹಾಗು ಕೃಷಿ ಮಂತ್ರಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ದೇಶದ ವಿವಿಧ ರಾಜ್ಯದ ಮುಖ್ಯಮಂತ್ರಿಗಳು, ಕೃಷಿ ಸಚಿವರು ವರ್ಚುವಲ್ ಮಾಧ್ಯಮದ ಮೂಲಕ ಈ ಸಮಾರಂಭದಲ್ಲಿ ಭಾಗವಹಿಸಿದರು. ದೇಶದ 10.47 ಕೋಟಿಗೂ ಹೆಚ್ಚಿನ ರೈತರ ಖಾತೆಗಳಿಗೆ ಒಟ್ಟು ₹20,900 ಕೋಟಿಗೂ ಅಧಿಕ ಮೊತ್ತವನ್ನು ಸನ್ಮಾನ್ಯ ಪ್ರಧಾನ ಮಂತ್ರಿಗಳು ವರ್ಗಾಯಿಸಿದ್ದಾರೆ.

 
 
 
 
 
 
 
 
 
 
 

Leave a Reply