ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ವಿಶ್ವ ಕನ್ನಡ ಬಳಗ ಹುಬ್ಬಳ್ಳಿ ಕನ್ನಡ ರಾಜ್ಯೋತ್ಸವ ಪುರಸ್ಕೃತರಿಗೆ ಸಮ್ಮಾನ 

ಕೋಟ: : ಮನೆಮನಗಳಲ್ಲಿ ಆದರಣೀಯರಾದ ಮೂರು ಕರಾವಳಿ ಭಾಗದ ರತ್ನಗಳು ಯಶಸ್ವೀ ವೇದಿಕೆಯಲ್ಲಿ ಅಭಿನಂದನೆ ಸಲ್ಲಿಸಿಕೊಳ್ಳುತ್ತಿರುವುದು ನಿಜಕ್ಕೂ ಸ್ತುತ್ಯರ್ಹ. ಯಶಸ್ವೀ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರನ್ನು ಪ್ರತೀ ವರ್ಷವೂ ಗೌರವಿಸುತ್ತಿರುವುದು ಗಮನಾರ್ಹ. 

ಇಂತಹ ಸಂಸ್ಥೆ ಸದ್ದಿಲ್ಲದೇ ಹೆಸರು ಮಾಡುತ್ತಿರುವುದು ಆಸಕ್ತ ವಲಯದಲ್ಲಿ, ದೇಶವಿದೇಶಗಳಲ್ಲಿ ಎಂಬುದು ಹೆಮ್ಮೆ ಎಂದು ಕನ್ನಡ ಸಾಹಿತ್ಯ ಪರಿಷತ್ನ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಗೌರವಾನ್ವಿತರಿಗೆ ಅಭಿನಂದನೆ ಸಲ್ಲಿಸಿ ಅಭಿನಂದನಾ ಮಾತುಗಳಲ್ಲಿ ಅಭಿಪ್ರಾಯಪಟ್ಟರು.

ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಡಿಸೆಂಬರ್, ೨೬ರಂದು ಯಶಸ್ವಿ ಕಲಾವೃಂದ ಕೊಮೆ, ತೆಕ್ಕಟ್ಟೆ ಆಶ್ರಯದಲ್ಲಿ ರೋಟರಿ ಕ್ಲಬ್ ತೆಕ್ಕಟ್ಟೆ ಇವರಿಂದ ‘ವರ್ಣ ವೈಭವ-೨೧’ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ರಾಜೋತ್ಸವ ಪುರಸ್ಕೃತರಾದ ಮಣೂರು ಮಧುಸೂದನ ಬಾಯರಿ ಹಾಗೂ ನಿವೃತ್ತ ಉಪನ್ಯಾಸಕಿ ಸಾಹಿತಿ ಪಾರ್ವತಿ ಜಿ. ಐತಾಳ್ ಮತ್ತು ವಿಶ್ವ ಕನ್ನಡ ಸಂಘ ಹುಬ್ಬಳ್ಳಿ ಕೊಡಮಾಡಿದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕು| ವೈಷ್ಣವಿ ಪುರಾಣಿಕ್ ಇವರನ್ನು ಅಭಿನಂದನಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿದರು.

ನಿರಂತರ ಚಟುವಟಿಕೆ ನಿರತವಾದ ಸಂಸ್ಥೆ ಯಶಸ್ವಿ ಕಲಾವೃಂದ. ಇಂತಹ ಸಂಸ್ಥೆ ಅಭಿನಂದಿಸುವಾಗ ರಾಜ್ಯ ಪ್ರಶಸ್ತಿ ಕೊಟ್ಟಷ್ಟು ಆನಂದವಾಗುತ್ತದೆ ಎಂದು ಸಾಹಿತಿ ಪಾರ್ವತಿ ಜಿ. ಐತಾಳ್ ಮಾತನಾಡಿದರು.

ಹಲವಾರು ಸಾಂಸ್ಕೃತಿಕ ಚಟುವಟಿಕೆಯಿಂದ ಸಾಂಸ್ಕೃತಿಕ ನಗರಿಯನ್ನಾಗಿಸಿದ ಯಶಸ್ವಿ ಸಂಸ್ಥೆ ಬೆಳ್ಳಿ ಹಬ್ಬದತ್ತ ದಾಪುಗಾಲು ಹಾಕುತ್ತಿದೆ. ಇದನ್ನು ಸಂಭ್ರಮಿಸುವ ಕಾಲಕ್ಕೆ ಶುಭವಾಗಲಿ ಎಂದು ವಿದ್ಯುತ್ ಗುತ್ತಿಗೆದಾರ ಕೋಟ ಶ್ರೀಕಾಂತ್ ಶೆಣೈ ಹಾರೈಸಿದರು.

ಅತಿಥಿಗಳಾಗಿ ನಿವೃತ್ತ ಪ್ರಾದ್ಯಾಪಕ ಶ್ರೀನಿವಾಸ ಅಡಿಗ, ರೊ. ಮಂಜುನಾಥ, ಗಣಪತಿ ಟಿ. ಶ್ರೀಯಾನ್, ಸುಧಾಕರ ಶೆಟ್ಟಿ, ಶ್ರೀಮತಿ ಶಾಂತ ಶೆಟ್ಟಿ, ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಪ್ರಾಸ್ತಾವಿಕವಾಗಿ ಹೆರಿಯ ಮಾಸ್ಟರ್ ಮಾತನಾಡಿದರು. ಸೀತಾರಾಮ ಶೆಟ್ಟಿ ಕೊಕೂರು ವಂದನಾರ್ಪಣೆ ಮಾಡಿದರು. ಬಳಿಕ ರೋಟರಿ ಕ್ಲಬ್ ತೆಕ್ಕಟ್ಟೆ ಕಲಾವಿದರಿಂದ ‘ವರ್ಣವೈಭವ-೨೧’ ಕಾರ್ಯಕ್ರಮ ರಂಗದಲ್ಲಿ ಪ್ರಸ್ತುತಿಗೊಂಡಿತು.

ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಡಿ.26ರಂದು ಯಶಸ್ವಿ ಕಲಾವೃಂದ ಕೊಮೆ, ತೆಕ್ಕಟ್ಟೆ ಆಶ್ರಯದಲ್ಲಿ ರೋಟರಿ ಕ್ಲಬ್ ತೆಕ್ಕಟ್ಟೆ ‘ವರ್ಣ ವೈಭವ-21′ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ರಾಜೋತ್ಸವ ಪುರಸ್ಕೃತ ಮಣೂರು ಮಧುಸೂದನ ಬಾಯರಿ ಹಾಗೂ ನಿವೃತ್ತ ಉಪನ್ಯಾಸಕಿ ಸಾಹಿತಿ ಪಾರ್ವತಿ ಜಿ. ಐತಾಳ್ ಮತ್ತು ವಿಶ್ವ ಕನ್ನಡ ಸಂಘ ಹುಬ್ಬಳ್ಳಿ ಕೊಡಮಾಡಿದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕು| ವೈಷ್ಣವಿ ಪುರಾಣಿಕ್ ರನ್ನು ಅಭಿನಂದಿಸಲಾಯಿತು.

 ನಿವೃತ್ತ ಪ್ರಾದ್ಯಾಪಕ ಶ್ರೀನಿವಾಸ ಅಡಿಗ, ರೊ. ಮಂಜುನಾಥ, ಗಣಪತಿ ಟಿ. ಶ್ರೀಯಾನ್, ಸುಧಾಕರ ಶೆಟ್ಟಿ, ಶ್ರೀಮತಿ ಶಾಂತ ಶೆಟ್ಟಿ, ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply