ಮಹಿಳೆಯ ಸಾಧನಾ ಶಿಖರಕ್ಕೆ ಮತ್ತೊಂದು ಹೊಸ ಗರಿ

ಯಾವುದೇ ಕ್ಷೇತ್ರದಲ್ಲಿ ಮಹಿಳೆಯರು ಸಾಧಿ​ಸಿ ​ತೋರಿಸ ​ಬಲ್ಲರು ಎಂಬುದಕ್ಕೆ ಮತ್ತೊಂದು ಉದಾಹರಣೆಯಂತೆ ತಮ್ಮ ಕಾರ್ಯ ಚಾಕಚಕ್ಯತೆಯಿಂದ ಇದೀಗ ಭಾರತೀಯ ಸೇನೆಯಲ್ಲೂ ಮಹಿಳೆಯರು ಸಾಧಿಸಲು ಸಿದ್ಧರಾಗಿದ್ದಾರೆ. ಈಗಾಗಲೆ ವನಿತೆಯರಿಗೆ ಸೇನೆಯಲ್ಲಿ ಅವಕಾಶವಿದ್ದರೂ​ ​ಸರಿಯಾದ ಮಾನ್ಯತೆ, ಶಾಶ್ವತ ನೇಮಕಾತಿಯಂತಹ ಆದ್ಯತೆಗಳು ಸಿಕ್ಕುತಿರಲ್ಲಿಲ್ಲ.

ಆದರೆ ಈಗ ಅಂತಹ ಎಲ್ಲ ಅಡ್ಡಿಗಳು ದೂರವಾಗಿದ್ದು ಮಹಿಳಾ ಸೇನಾಧಿಕಾರಿಗಳ ಹಲವು ವರ್ಷಗಳ ಆಶಯ ಈಡೇರಿದೆ. ಮಹಿಳೆಯರು ನೌಕಾಪಡೆಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ, ಪ್ರಪ್ರಥಮವಾಗಿ ಈ ಬಾರಿ ಯುದ್ಧನೌಕೆಯ ಕಾರ್ಯಾಚರಣೆಗೆ ಮಹಿಳೆಯರನ್ನು ನಿಯೋಜಿಸಲಾಗಿದೆ. ನೌಕಾಪಡೆಯ ಸಬ್ ಲೆಫ್ಟಿನೆಂಟ್ ಕುಮುದಿನಿ ತ್ಯಾಗಿ ಮತ್ತು ಸಬ್ ಲೆಫ್ಟಿನೆಂಟ್ ರಿತಿ ಸಿಂಗ್ ಸೋಮವಾರ ಯುದ್ಧನೌಕೆಯ ಕರ್ತವ್ಯಕ್ಕೆ ನಿಯೋಜನೆಗೊಂಡಿರುವುದು, ಭಾರತದ ಪಾಲಿಗೆ ಐತಿಹ್ಯ ಕ್ಷಣವೇ ಎನ್ನಬಹುದು.

ಇವರಿಬ್ಬರು ಅತ್ಯಾಧುನಿಕ ಎಂಎಚ್-60 ಆರ್ ಹೆಲಿಕಾಪ್ಟರ್ಗಳನ್ನು ನಿರ್ವಹಿಸಲಿದ್ದಾರೆ. ಇದಲ್ಲದೆ ಹೊಸದಾಗಿ ಸೇರ್ಪಡೆ ಯಾಗಿರುವ ರಫೇಲ್ ಯುದ್ಧ ವಿಮಾನಗಳನ್ನು ಹಾರಾಟ ನಡೆಸಲಿರುವ ಗೋಲ್ಡನ್ ಆರೋಸ್ ಸ್ಕಾ್ವಡ್ರನ್​ಗೆ ಮಹಿಳಾ ಪೈಲಟ್ ಸೇರಲಿದ್ದಾರೆ.ಸದ್ಯ ಇದಕ್ಕಾಗಿ ತರಬೇತಿ ಪಡೆಯುತ್ತಿರುವ ಅವರು ಅತೀ ಬೇಗನೆ ಸೇರ್ಪಡೆ ಗೊಳ್ಳಲ್ಲಿ ದ್ದಾರೆ. ವಾಯುಪಡೆಯಲ್ಲಿ ಒಟ್ಟು 1,875 ಮಹಿಳಾ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಯುದ್ಧ ವಿಮಾನ ಗಳನ್ನು ಹಾರಿಸ ಬಲ್ಲ 10 ಮಹಿಳಾ ಪೈಲೆಟ್ ಗಳು ಈಗಾಗಲೇ ವಾಯುಪಡೆಯಲ್ಲಿದ್ದು 18 ಮಹಿಳಾ ನ್ಯಾವಿಗೇಟರ್ ಗಳು ಇದ್ದಾರೆ.

ಈಗಾಗಲೇ ಭೂ ಸೇನೆಯ 10 ವಿಭಾಗಗಳಿಗೆ ಮಹಿಳಾ ಅಧಿಕಾರಿಗಳ ಸೇವೆಯನ್ನು ಪೂರ್ಣಾವಧಿಗೆ ವಿಸ್ತರಿಸಲು ನಿರ್ಧರಿಸಲಾಗಿದ್ದು,ಸೇನೆಯಲ್ಲಿ ಮಹಿಳಾ ಅಧಿಕಾರಿಗಳಿಗೆ ಪರ್ಮನೆಂಟ್ ಕಮಿಷನ್ ಒದಗಿಸುವ ಪ್ರಕ್ರಿಯೆ ಅಧಿಕೃತವಾಗಿ ಪ್ರಾರಭವಾಗಿದೆ. ಮಹಿಳಾ ಅಧಿಕಾರಿಗಳ  ಅರ್ಹತೆ , ಕಾರ್ಯ ಪರತೆ ಇಂತಹ ವಿಷಯಗಳನ್ನು ಗಮನಿಸಿ ಅವರಿಗೆ ಈ ಹುದ್ದೆ ನೀಡಲಾಗುತ್ತದೆ. ಇತ್ತೀಚೆಗೆ ಸುಪ್ರೀಂಕೋರ್ಟ್ ನೀಡಿದ ಆದೇಶದ ಮೇರೆಗೆ ಸೇನೆ ಈ ಕ್ರಮ ಕೈಗೊಂಡಿದೆ.ಇದರ ಪ್ರಕ್ರಿಯೆಗಳು ಈಗಾಗಲೇ ಆರಂಭವಾಗಿದ್ದು, ಇದಕ್ಕಾಗಿ ಪ್ರತ್ಯೇಕ ಸಮಿತಿಯು ರಚನೆಯಾಗಿದೆ.

ನೇಮಕಾತಿ ನಡೆಯಲಿರುವ ವಿಭಾಗಗಳು ಇಂತಿವೆ ಏರ್ ಡಿಫೆನ್ಸ್, ಸೇನೆಯ ವಾಯುಯಾನ, ಇಂಜಿನಿಯರಿಂಗ್ ವಿಭಾಗ, ಸಿಗ್ನಲ್ ವ್ಯವಸ್ಥೆ ವಿಭಾಗ, ಮೆಕಾನಿಕಲ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್, ಸರಕು ಸಾಗಾಣಿಕೆ, ಆರ್ವಿು ಸರ್ವೀಸ್ ಕೋರ್, ಆರ್ವಿು ಆರ್ಡಿನನ್ಸ್ ಕೋರ್, ಮತ್ತು ಸೇನೆಯ ಗುಪ್ತಚರ ದಳ.

ಭಾರತ ತನ್ನ ಗಡಿ ಪ್ರದೇಶದ ಬಿಕ್ಕಟ್ಟಿನ ಪರಿಸ್ಥಿತಿ ಮತ್ತು ಆಂತರಿಕ ಭದ್ರತೆಯ ಸವಾಲುಗಳನ್ನು ಎದುರಿಸುತ್ತಿರುವ ಕಾಲದಲ್ಲಿ ಸೇನೆಯ ಈ ಕಾರ್ಯ ಪ್ರಶಂಸನೀಯ. ಭೂಸೇನೆ, ವಾಯುಪಡೆ, ನೌಕಾಪಡೆ ಮೂರೂ ಸೇನೆಗೂ ಕ್ರಮೇಣ ಮಹಿಳಾ ಶಕ್ತಿಯ ಬಲ ಹೆಚ್ಚಾಗಲಿದೆ. ಈ ಬೆಳವಣಿಗೆ ದೇಶದ ಸೇನಾ ಇತಿಹಾಸದಲ್ಲಿ ಹೊಸ ದಾಖಲೆ ಬರೆಯಲಿ ಎನ್ನುವುದು ಸದ್ಯ ಎಲ್ಲಾ ಭಾರತೀಯರ ಆಶಯ

 
 
 
 
 
 
 
 
 
 
 

Leave a Reply