ಕಾಂಗ್ರೆಸ್ ಆಡಳಿತ ರಾಜ್ಯಗಳಲ್ಲಿ ಹೊಸ ಕೃಷಿ ಮಸೂದೆ ಜಾರಿಗೆ ತರದಂತೆ ಸೋನಿಯಾ ಸೂಚನೆ

ನವದೆಹಲಿ: ದೇಶದೆಲ್ಲೆಡೆ ರೈತರಿಂದ ವಿರೋಧ ಎದುರಿಸುತ್ತಿರುವ ಹೊಸ ಕೃಷಿ ಕಾಯ್ದೆಯ ವಿರುದ್ಧ ಕಾಂಗ್ರೆಸ್ ಪಕ್ಷವು ತಿರುಗಿ ಬಿದ್ದಿದೆ.ಹೌದು, ಈ ಮೂರು ಕೃಷಿ ಮಸೂದೆಗಳನ್ನು ಕಾಂಗ್ರೆಸ್ ಆಡಳಿತವಿರುವ ಯಾವುದೇ ರಾಜ್ಯಗಳಲ್ಲಿ ಜಾರಿಗೆ ತರದಂತೆ ಸೂಚಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಇದರ ಬದಲಾಗಿ ರೈತರಿಗೆ ಸಹಾಯಕಾರಿಯಾದ ಪರ್ಯಾಯ ಕಾನೂನುಗಳನ್ನು ರೂಪಿಸಿ, ಅದರ ಮೂಲಕ ಈ ಕಾಯ್ದೆಯನ್ನು ನಿಷ್ಫಲಗೊಳಿಸಲು ಕರೆ ನೀಡಿದ್ದಾರೆ.

ಇನ್ನು ಇದರ ಕುರಿತು ಈ ಕಾಯ್ದೆಗಳ ಬದಲಾಗಿ ಸಂವಿಧಾನದ 254(2) ವಿಧಿಯನ್ವಯ ಕಾನೂನುಗಳನ್ನು ರೂಪಿಸುವ ಸಾಧ್ಯತೆಗಳನ್ನು ಪರೀಕ್ಷಿಸಲು ಸೋನಿಯಾ ಸೂಚಿಸಿದ್ದು, ಈ ಮಸೂದೆ ರಾಜ್ಯದ ಹಕ್ಕುಗಳ ಮೇಲೆ ತಾನೆ ಅಧಿಕಾರ ಸಾಧಿಸುವ ಕೇಂದ್ರದ ಕಾನೂನುಗಳು ಆದ್ದರಿಂದ ಇಂತಹುದು ನಿರರ್ಥಕವಾಗಬೇಕು ಎಂದಿದ್ದಾರೆ 

ಇನ್ನು ಈ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಮಾತ್ರವಲ್ಲದೆ ಹೊರಗಡೆಯು ಕೃಷಿಕರ ದನಿಯನ್ನು ಅಡಗಿಸಲಾಗಿದ್ದು ಈ ಕೃಷಿ ಮಸೂದೆಗಳು ರೈತರ ಮರಣ ಶಾಸನವಾಗಿದೆ ಎಂದಿದ್ದಾರೆ

 
 
 
 
 
 
 
 
 
 
 

Leave a Reply