Janardhan Kodavoor/ Team KaravaliXpress
29.6 C
Udupi
Sunday, February 5, 2023
Sathyanatha Stores Brahmavara

​ವಿಶ್ವ ಹೃದಯ ದಿನ 2020-ವಿಶಿಷ್ಟ ಕಲಾಕೃತಿ ಅನಾವರಣ

ವಿಶ್ವ ಹೃದಯ ದಿನ 2020ರ ಅಂಗವಾಗಿ ಸಮುದಾಯ ವೈದ್ಯಕೀಯ ವಿಭಾಗ, ಕೆ.ಎಮ್.ಸಿ ಮಣಿಪಾಲ​ ಇವರ ಸಹಯೋಗದೊಂದಿಗೆ ಕಲಾವಿದ ಶ್ರೀನಾಥ್ ಮಣಿಪಾಲ್ ರಚಿಸಿದ ಹೃದಯ ಜಾಗೃತಿ ಕಲಾಕೃತಿಯನ್ನು ಸಮುದಾಯ ವೈದ್ಯಕೀಯ ವಿಭಾಗದ  ಡಾ. ಪವನ್ ಕುಮಾರ್ ಮತ್ತು ಡಾ.ಸುಮ ನಾಯರ್ ಅನಾವರಣ ಅನಾವರಣಗೊಳಿಸಿದರು.
ಕಲಾಕೃತಿಯಲ್ಲಿ ಹೃದಯದ ಆರೋಗ್ಯಕ್ಕೆ ಬೇಕಾದ ಆಹಾರ ಪದ್ಧತಿ,​ ​ಮುಖ್ಯವಾದ ಆಹಾರಗಳನ್ನು ಕಲಾಕೃತಿಯಲ್ಲಿ ಬಿಂಬಿಸಲಾಗಿದೆ. ಅದರ ಜೊತೆಯಲ್ಲಿ ದೈಹಿಕ ವ್ಯಾಯಾಮ ಮತ್ತು​ ​ಯೋಗದ ಪ್ರಾಮುಖ್ಯತೆಯನ್ನು ಕಲಾಕೃತಿಯಲ್ಲಿ ವಿಶಿಷ್ಟ, ವಿಭಿನ್ನವಾಗಿ ಬಿಂಬಿಸಲಾಗಿದೆ. ಕಲಾಕೃತಿಯ ಜೊತೆ ಯಲ್ಲಿ ಹೃದಯ ​ಜಾಗೃತಿ ಸಂದೇಶ ನೀಡುವಂತಹ ಆಕರ್ಷಕ ಬಿತ್ತಿಪತ್ರಗಳನ್ನು ಪ್ರದರ್ಶಿಸ ಲಾಗಿದೆ.

​ಈ ಸಂದರ್ಭದಲ್ಲಿ ​ಡಾ.ಅಶ್ವಿನಿ ಕುಮಾರ್, ಡಾ.ವಿನೋಧ್,​ ಡಾ.ಮುರಳಿಧರ್ ಕುಲಕರ್ಣಿ, ಡಾ.ರಂಜಿತಾ ಶೆಟ್ಟಿ, ಡಾ.ಚೈ​​ತ್ರಾ​, ​ಡಾ.ಈಶ್ವರಿ, ಡಾ. ಅಖಿಲಾ ಮುಂತಾದವರು ಉಪಸ್ಥಿತರಿದ್ದರು.ಈ ಕಲಾಕೃತಿಯು ಕೆ.ಎಮ್.ಸಿ ಗ್ರೀನ್ಸ್ ​ಆವರಣದಲ್ಲಿ ಒಂದು ವಾರಗಳ ಕಾಲ ಪ್ರದರ್ಶನದಲ್ಲಿರುತ್ತದೆ.​

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!