5 G ನೆಟ್ವರ್ಕ್ ವಿರೋಧ ~ಖ್ಯಾತ ನಟಿ ಜೂಹಿ ಚಾವ್ಲಾ ದೆಹಲಿ ಹೈಕೋರ್ಟ್ ಮೊರೆ

ದೇಶದಲ್ಲಿ 5 ಜಿ ಇಂಟರ್ನೆಟ್ ನೆಟ್ವರ್ಕ್ ಗೆ ಈಗ ಸ್ಟಾರ್ ಸೆಲೆಬ್ರಿಟಿ ಗಳಿಂದ ವಿರೋಧ, ಹೌದು ಬಾಲಿವುಡ್ ಖ್ಯಾತ ನಟಿ ಜೂಹಿ ಚಾವ್ಲಾ 5 ಜಿ ದೇಶಾದ್ಯಂತ ಆರಂಭವಾಗಬಾರದು, ಇವುಗಳಿಂದ ಬರುವ ತರಂಗ ಹಾಗೂ ವಿಶೇಷ ವಿಕಿರಣಗಳು ಬಹಳ ಹಾನಿಕಾರಕ ಇದರಿಂದ ಮನುಷ್ಯನ ದೇಹ, ಪ್ರಾಣಿ ಪಕ್ಷಿಗಳ ಹಾಗೂ ಪರಿಸರದ ಮೇಲೆ ವರ್ಷದ 365 ದಿನ ನೇರ ಪರಿಣಾಮ ಮಾಡಬಹುದು ಎಂದು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಜೂನ್ 2 ರಂದು ಈ ಬಗ್ಗೆ ವಿಚಾರಣೆ ನಡೆಯಲಿದೆ. ಈ ನಡುವೆ ನಟಿಯ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಪರ ವಿರೋಧ ಕಂಡುಬರುತ್ತಿದೆ, ಸಾಕಷ್ಟು ಟ್ರೋಲ್ ಗಳು ಮಾಡಲಾಗತ್ತಿದೆ.

 
 
 
 
 
 
 
 
 
 
 

Leave a Reply