ರಾಮ ಜನ್ಮಭೂಮಿಯಲ್ಲಿ ಧಾರ್ಮಿಕ ವಿಧಿ ವಿಧಾನ

ರಾಮ ಜನ್ಮಭೂಮಿಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಆಗಸ್ಟ್ 5 ರಂದು ನಡೆಯಲಿರುವ ಭೂಮಿ ಪೂಜೆಯ ಪ್ರಯುಕ್ತ ಮೂರು ದಿನಗಳ ಕಾಲ ನಡೆಯುವ ಧಾರ್ಮಿಕ ವಿಧಿ ವಿಧಾನಗಳು ಇಂದು ಗೌರಿ ಗಣೇಶ ಪೂಜೆಯೊಂದಿಗೆ ಆರಂಭವಾಗಿದೆ.

ಮುಂಜಾನೆಯ ಪರ್ವ ಕಾಲದಲ್ಲಿ ವೈದಿಕರು ಧಾರ್ಮಿಕ ವಿಧಿವಿಧಾನಗಳನ್ನು ಆರಂಭಿಸಿದ್ದಾರೆ. ಅಯೋಧ್ಯೆ ಯಲ್ಲಿ ತ್ರೇತಾ ಯುಗದ ವಾತಾವರಣವು ನಿರ್ಮಾಣವಾದಂತಿದೆ. ಎಲ್ಲಿ ನೋಡಿದರೂ ಅಲಂಕಾರ ಮತ್ತು ಮಂತ್ರಪಠನೆಯ ಧ್ವನಿಯು ಪ್ರತಿಧ್ವನಿಸುತ್ತಿದೆ. ಬುಧವಾರ ಪ್ರಧಾನಿ ನರೇಂದ್ರ ಮೋದಿಯವರು ಭೂಮಿ ಪೂಜೆಯನ್ನು ನೆರವೇರಿಸಲಿದ್ದಾರೆ.

ಅಂದು karavalixpress.com ಐತಿಹಾಸಿಕ ಕಾರ್ಯಕ್ರಮದ ನೇರಪ್ರಸಾರ ಮಾಡಲಿದೆ.​ ​ 

 
 
 
 
 
 
 
 
 
 
 

Leave a Reply