ನಾಡೋಜ ಡಾ ಜಿ ಶಂಕರ್ ರವರ ನೇತೃತ್ವದಲ್ಲಿ  ಫ್ರoನ್ಟ್ ಲೈನ್ ವಾರಿಯರ್ಸ್ ಸೇವೆ.

ಕೊರೊನ  ಸೋಂಕು ಸಮುದಾಯಕ್ಕೆ ಹರಡುವ ಭೀತಿಯ ಸಂದರ್ಭದಲ್ಲಿ ಜಿಲ್ಲಾಡಳಿತದೊಂದಿಗೆ ಕೈಜೋಡಿಸಲು ನಾಡೋಜ ಡಾ ಜಿ ಶಂಕರ್ ರವರ ನೇತೃತ್ವದಲ್ಲಿ  ಫ್ರoನ್ಟ್ ಲೈನ್ ವಾರಿಯರ್ಸ್ ಸೇವೆ.
ಜಿಲ್ಲೆಯಲ್ಲಿ ಕೊರೊನ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪರಿಸ್ಥಿತಿ ನಿಬಾಯಿಸಲು  ಜಿಲ್ಲಾಡಳಿತದೊಂದಿಗೆ  ಫ್ರoಟ್  ಲೈನ್ ವಾರಿಯರ್ಸ್ ಆಗಿ ಸೇವೆ ಸಲ್ಲಿಸಲು ನಾಡೋಜ ಡಾ ಜಿ ಶಂಕರ್ ರವರ ಮಾರ್ಗದರ್ಶನದಲ್ಲಿ ಮೊಗವೀರ ಯುವ ಸಂಘಟನೆಯ ಸುಮಾರು 100 ಮಂದಿ ಸ್ವಯಂ ಸೇವಕರು ಸಜ್ಜಾಗಿದ್ದಾರೆ.
ದಿನದ 24 ಗಂಟೆ ಈ ಸ್ವಯಂ ಸೇವಕರು ಜಿಲ್ಲೆ ಯಾದ್ಯಂತ ಸೇವೆ ಸಲ್ಲಿಸಲು ತಯಾರಾಗಿದ್ದು,  ಕೊರೊನ ರೋಗಿಗಳನ್ನು ಅಂಬುಲೆನ್ಸ್ ಗೆ ಶಿಫ್ಟ್ ಮಾಡುವುದು, ಮೃತಪಟ್ಟಲ್ಲಿ ಜಿಲ್ಲಾಡಳಿತದ ಮಾರ್ಗ ದರ್ಶನದೊಂದಿಗೆ ಅವರವರ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನೆರವೇರಿಸುವಲ್ಲಿ ಈ ಸ್ವಯಂ ಸೇವಕ ಯುವಕರ ತಂಡ ಕಾರ್ಯ ಪ್ರವೃತ್ತವಾಗುತ್ತದೆ. 
 ಆರೋಗ್ಯವಂತ ಯುವಕರ ತಂಡ ಇದಾಗಿದ್ದು, ನಿಗದಿತ ಸಮಯಗಳ ಕಾಲ ಮನೆಯಿಂದ ಹೊರಗುಳಿದು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸುವಲ್ಲಿ ಕಾರ್ಯಪ್ರವೃತ್ತರಾಗಿರುತ್ತಾರೆ. ಎಲ್ಲಾ ಸ್ವಯಂ ಸೇವಕರಿಗೆ  ಪ್ರಥಮವಾಗಿ ತಮ್ಮನ್ನು ತಾವು ಸೋಂಕಿನಿಂದ ರಕ್ಷಣೆಮಾಡಿಕೊಂಡು ಕೊರೊನ ರೋಗಿಗಳ ಸೇವೆ ಮಾಡುವಲ್ಲಿ ಸಂಪೂರ್ಣ ತರಬೇತಿಯನ್ನು ಜಿಲ್ಲಾಡಳಿತ ನೀಡುತ್ತಿದೆ ಎಂದು ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷರಾದ ಶಿವರಾಮ್ ಕೆ ಎಮ್ ತಿಳಿಸಿದ್ದಾರೆ.
ಸಮಾಜ ಸೇವೆಯಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಮೊಗವೀರ ಯುವ ಸಂಘಟನೆ ಇದೀಗ ಫ್ರoಟ್  ಲೈನ್ ವಾರಿಯರ್ಸ್ ಆಗಿ ಸೇವೆ ಸಲ್ಲಿಸಲು ಸುಮಾರು 100 ಮಂದಿ ಸ್ವಯಂ ಸೇವಕರ ತಂಡ ಈ ಮಹತ್ಕಾರ್ಯದಲ್ಲಿ ತೊಡಗಿಸಿ ಕೊಳ್ಳಲಿದ್ದಾರೆ. 
ನಾಡೋಜ ಡಾ.ಜಿ.ಶಂಕರ್ 
 
 
 
 
 
 
 
 
 
 
 

Leave a Reply