ಶಂಕರ್ ಫ್ಯಾಮಿಲಿ ಟ್ರಸ್ಟ್ ನಿಂದ ಕೊರೊನ ರೋಗಿಗಳ ಚಿಕೆತ್ಸೆಗೆ ವೆಂಟಿಲೇಟರ್ ಕೊಡುಗೆ

ಕೊರೊನ ನಿರ್ವಹಣೆಗಾಗಿ ಉಡುಪಿ ದಕ್ಷಿಣ ಕನ್ನಡ ಶಿವಮೊಗ್ಗ ಜಿಲ್ಲೆಗಳ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಮತ್ತು ಶಿಕ್ಷಣ ಇಲಾಖೆಗಳ ಜೊತೆ ಕೈಜೋಡಿಸಿ ಸುಮಾರು ಮೂರು ಕೋಟಿಗೂ ಮಿಕ್ಕಿದ ಕೊರೊನ ರಕ್ಷಣಾ ಪರಿಕರಗಳನ್ನು ನೀಡಿದ ಜಿ ಶಂಕರ್ ರವರು ಉಡುಪಿ ಮತ್ತು  ದ. ಕ ಜಿಲ್ಲೆಯಲ್ಲಿ ನಿರಂತರವಾಗಿ  ಕೊರೊನ ಸೋಂಕು ಹೆಚ್ಚುತ್ತಿದ್ದು,  ಚಿಕಿತ್ಸೆಗಾಗಿ ವೆಂಟಿ ಲೇಟರ್ ಗಳ ಕೊರತೆಯನ್ನು ಮನಗಂಡು ಕೋವಿಡ್ ರೋಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯ ಕೋವಿಡ್ ಆಸ್ಪತ್ರೆ ಗಳಿಗೆ ನಾಲ್ಕೂ ಹಾಗೂ ದ ಕ ಜಿಲ್ಲೆಯ ಕೋವಿಡ್ ಆಸ್ಪತ್ರೆಗಳಿಗೆ ಎರಡು  ಸೇರಿ ಒಟ್ಟು ಆರು ವೆಂಟಿಲೇಟರ್ಗಳನ್ನು ಸುಮಾರು 56 ಲಕ್ಷ ರೂಪಾಯಿ ವೆಚ್ಚ ದಲ್ಲಿ ನೀಡುವುದೆಂದು ತೀರ್ಮಾನಿಸಿದ್ದರು.

ಅದರಂತೆ ಇಂದು  ಉಡುಪಿ ಜಿಲ್ಲಾಧಿಕಾರಿಯವರಿಗೆ ಸಂಕೇತಿವಾಗಿ ನಾಡೋಜ ಡಾ ಜಿ ಶಂಕರ್ ರವರು ಉತ್ತಮ ದರ್ಜೆಯ  ಹೆಮಿಲ್ಟನ್ ಕಂಪೆನಿಯ  ವೆಂಟಿಲೇಟರ್ ಹಸ್ತಾoತರಿಸಿದರು.

ಈ ಸಂದರ್ಭದಲ್ಲಿ  ಜಿಲ್ಲಾಧಿಕಾರಿ ಜಿ ಜಗದೀಶ್ ಮಾತನಾಡಿ, ಕೊರೊನ ಪ್ರಾರಂಭದ ದಿನದಿಂದಲೂ ನಮ್ಮ ಉಡುಪಿ ಜಿಲ್ಲೆಯ ಜನತೆಗೆ ಡಾ ಜಿ ಶಂಕರ್ ರವರು ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಕೊರೊನ ರೋಗಿಗಳ ಚಿಕಿತ್ಸೆಗೆ ವೆಂಟಿಲೇಟರ್ ಗಳ ಅವಶ್ಯಕತೆ ಬಹಳಷ್ಟಿದ್ದು, ಅದನ್ನು ಜಿ ಶಂಕರ್ ಪೂರೈಸಿದ್ದಾರೆ. ಇದು ಕೊರೊನ ರೋಗಿಗಳ ಜೀವ ಉಳಿಸುವಲ್ಲಿ ಸಹಕಾರಿ ಯಾಗಲಿದೆ ಎಂದರು.  ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply