ಕರೋನಾ ದೂರವಾಗುವತ್ತ ಹೆಜ್ಜೆ ಎಲ್ಲರೂ ಕೋವಿಡ್ ನಿಯಮ ಪಾಲಿಸೋಣ~ಕರ್ವಾಲ್

ಕಳೆದ 8 ತಿಂಗಳಿಂದ ನಿರಂತರವಾಗಿ ದೇಶದ ಚಿತ್ರಣ ಬದಲು ಮಾಡಿದ ಜನರ ಜೀವನಕ್ಕೆ ಸಂಕಷ್ಟದ ಹೊಸ ಅಥ೯ ನೀಡಿದ ಕರೋನಾ ಕಳೆದ 2ವಾರದಿಂದ ದೇಶದಲ್ಲಿ ಸೇರಿದಂತೆ ಉಡುಪಿ ಜಿಲ್ಲೆಯಲ್ಲಿ ನಿಧಾನಗತಿಯಲ್ಲಿ ಇಳಿಮುಖವಾಗುತ್ತಿರುವುದು ಸಂತೋಷದ ವಿಷಯ ದೇಶದಲ್ಲಿ ಗುಣಮುಖ ಪ್ರಮಾಣ ಶೇ.83 ಕ್ಕೆ ಏರಿದೆ ಅದೇ ರೀತಿ ಮರಣ ಪ್ರಮಾಣ ಶೇ.1.5 ರಷ್ಟು ಇಳಿದಿರುವುದು ಶುಭ ಸಂದೇಶ.ಉಡುಪಿ ಜಿಲ್ಲೆಯಲ್ಲಿ 1300 ರಷ್ಟು ಸಕ್ರೀಯ ಕೇಸಗಳಿದ್ದು, ಮರಣ ಪ್ರಮಾಣ ಅದೇ ರೀತಿ ಹೊಸ ಪ್ರಕರಣಗಳು ಕೂಡ ಕಡಿಮೆಯಾಗುತ್ತಿರುವುದು ಜನತೆ ನಿಟ್ಟುಸಿರು ಬಿಡುವಂತಾಗಿದೆ.

ಇದೇ ರೀತಿ ಮುಂದುವರೆದರೆ ಜನವರಿ ಒಳಗೆ ಸಂಪೂಣ೯ ನಿಯಂತ್ರಣಕ್ಕೆ ಬರಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಮತ್ತಷ್ಟು ಜಾಗೃತ ರಾಗೋಣ* : – ಕರೋನಾ ಕಡಿಮೆಯಾಗಿದೆ ಎಂದು ಮೈಮರೆಯದೆ ಮತ್ತಷ್ಟು ಜಾಗ್ರತರಾಗಿ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಬೇಕಾಗಿದೆ. ಸಕಾ೯ರದ ದಂಡವನ್ನು ತಪ್ಪಿಸುವ ಸಲುವಾಗಿ ಮಾಸ್ಕ್ ಹಾಕದೆ, ನಮ್ಮ ಆರೋಗ್ಯ ಕಾಪಾಡಲು ಮಾಸ್ಕ್ ಹಾಕಿ ಕೊಳ್ಳ ಬೇಕು.ಈ ಕೋವಿಡ್ ನಿಯಮಗಳು ನಮ್ಮ ಜೀವನದ ಭಾಗವಾಗಬೇಕಾಗಿದೆ.

ಸಕಾ೯ರ ಈಗಾಗಲೇ ಕಾಲೇಜುಗಳನ್ನು ನ.17 ರಿಂದ ಪ್ರಾರಂಭಿಸುವ ಚಿಂತನೆ ಮಾಡಿರುವುದು ಉತ್ತಮ ವಾದರೂ ನಿಯಮಗಳನ್ನು ಪಾಲನೆ ಮಾಡಬೇಕಾಗಿದೆ.
ಕರೋನಾದೊಂದಿಗೆ ಬದುಕು ಸಾಗಿಸುವಾಗ ನಮ್ಮ ಆರೋಗ್ಯದ ಜವಾಬ್ದಾರಿ ನಮ್ಮದಾಗಬೇಕೇ ಹೊರತು ಸಕಾ೯ರದ್ದಲ್ಲ. ಹೀಗಾಗಿ ಕರೋನಾ ಸಂಪೂಣ೯ ದೇಶ ಬಿಟ್ಟು ಹೋಗುವರೆಗೂ ಈ ನಿಯಮಗಳು ನಮ್ಮ ಜೀವನದ ಭಾಗವಾಗಿರಲಿ.

*ಹೊಸ ಬದುಕು ರೂಪಿಸಿ:* -ಕರೋನಾದಿಂದ ನಮ್ಮೆಲ್ಲರ ಜೀವನ ಸ್ಥಾನ ಪಲ್ಲಟಗೊಂಡಿರುವುದು ನಿಜವಾದರೂ , ಹೊಸ ಬದುಕು ನಮ್ಮದಾಗಬೇಕಾದರೆ ಜೀವನದಲ್ಲಿ ಆಥಿ೯ಕ ಶಿಸ್ತು ಮೂಡಿಸಬೇಕು. ಆಧಾಯ ಗಳಿಸುವ ವಿನೂತನ ಯೋಜನೆ ಹಾಕಿಕೊಂಡು ಉತ್ತಮ ವಾಗಿ ಜೀವನ ಸಾಗಿಸಬೇಕು.

ಒಟ್ಟಾಗಿ ಈ ಕರೋನಾದಿಂದ ಕಲಿತ ಪಾಠ ಜೀವನ ಪಯ೯oತದ ಪಾಠವಾಗಲಿ ಕರೋನಾ ದೂರವಾಗಲಿ.
✍️ *ರಾಘವೇಂದ್ರ ಪ್ರಭು,ಕವಾ೯ಲು*
ಯುವ ಲೇಖಕ

 
 
 
 
 
 
 
 
 
 
 

Leave a Reply