ಉಡುಪಿ ನಗರದ ಬನ್ನಂಜೆ ಹಾಗೂ ಶಿರಬೀಡು ವಾರ್ಡ್ ಗಳ ಕೋವಿಡ್ ಹೆಲ್ಪ್ ಡೆಸ್ಕ್ ಸಭೆ ಉಡುಪಿ ಸರಸ್ಪತಿ ಶಾಲೆಯಲ್ಲಿ ಇಂದು ಜರಗಿತು.
ಬನ್ನಂಜೆ ವಾರ್ಡ್ ಸದಸ್ಯೆ ಸವಿತಾ ಹರೀಶ್ ರಾಮ್ ನೇತೃತ್ವ್ ದಲ್ಲಿ ದಾನಿಗಳಾದ ಮೂಡ ನಿಡಂಬೂರು ಯುವಕ ಮಂಡಲ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಬನ್ನಂಜೆ ಹಾಗು ಉದಯ ಕುಮಾರ್ ಶೆಟ್ಟಿ ಬನ್ನಂಜೆ ಇವರ ಸಹಕಾರದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚಿನ ಮೌಲ್ಯದ ಆಹಾರ ಕಿಟ್, ಹಾಗು ಇನ್ನಿತರ ಅಗತ್ಯ ವಸ್ತುಗಳನ್ನು ಅಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಶಿಕ್ಷಿಕ ರಿಗೆ ವಿತರಸಲಾಯಿತು.
ಮುಖ್ಯ ಅತಿಥಿ ಉಡುಪಿ ನಗರ ಠಾಣೆ ಅಧಿಕಾರಿ ಪ್ರಮೋದ್ ಕುಮಾರ್ ಮಾತನಾಡಿ ಕೋವಿಡ್ ರೋಗ ಮುಕ್ತ ವಾರ್ಡ್ ಮಾಡಲು ಸರ್ವರ ಸಹಕಾರ ಮುಖ್ಯ. ಇಲಾಖೆ ವತಿಯಿಂದ ಎಲ್ಲಾ ಸಹಕಾರ ನೀಡುವುದಾಗಿ ತಿಳಿಸಿದರು. ಶಿರಬೀಡು ನಗರಸಭಾ ಸದಸ್ಯ ಟಿ ಜಿ ಹೆಗಡೆ ಮಾತನಾಡಿ ಕೋವಿಡ್ ಪಾಸಿಟಿವ್ ಇರುವ ಮನೆ /ಫ್ಲಾಟ್ ಗಳನ್ನೂ ಸೀಲ್ ಡೌನ್ ಬಗ್ಗೆ ತೀರ್ಮಾನಿಸಲಾಯಿತು.

ವೇದಿಕೆ ಯಲ್ಲಿ ಡಾ ಹೇಮಂತ್, ಎ ಎಸ್ ಐ ವಾಸಪ್ಪ ನಾಯ್ಕ್, ಶಶಿಧರ್ ಹಾಗು ಸುರೇಶ ಶೇರಿಗಾರ, ಮಹೇಶ್ ಪೂಜಾರಿ, ಉದಯ ಮಠದಬೆಟ್ಟು, ಹರೀಶ್ ರಾಮ್, ವಿವಿಧ ಇಲಾಖೆಯ ಸಿಬ್ಬಂಧಿ, ವಾರ್ಡ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.