ವೈರ್’ಲೆಸ್ ಬ್ಲೂಟೂತ್ ಸ್ಫೋಟಗೊಂಡು ಯುವಕ ಸಾವು

ಜೈಪುರ : ಕಾರ್ಯನಿರತ ವೈರ್ ಲೆಸ್ ಬ್ಲೂ ಟೂತ್ ಸ್ಫೋಟಿಸಿ ಯುವಕನೊಬ್ಬ ಮೃತಪಟ್ಟ ಘಟನೆ ರಾಜಸ್ಥಾನದ ಜೈಪುರ ಜಿಲ್ಲೆ ಚೌಮುವಿನಲ್ಲಿ ನಡೆದಿದೆ

ಯುವಕ ಮಾತನಾಡುತ್ತಿದ್ದಾಗಲೇ ಬ್ಲೂ ಟೂತ್ ಸ್ಪೋಟಿಸಿದ್ದರಿಂದ ಹೃದಯಸ್ತಂಭನಕ್ಕೊಳಗಾಗಿ ಅತ ಮೃತಪಟ್ಟಿದ್ದಾನೆ ವೈದ್ಯರು ತಿಳಿಸಿದ್ದಾರೆ. ಬ್ಲೂ ಟೂತ್ ಸ್ಪೋಟಿಸಿ ಯುವಕ ಮೃತಪಟ್ಟ ಘಟನೆ ದೇಶದಲ್ಲೇ ಮೊದಲು ಎಂದು ವೈದ್ಯರು ಹೇಳಿದ್ದಾರೆ.

ಮೃತಪಟ್ಟ ಯುವಕನನ್ನು ಜೈಪುರದ ಉದಯ್’ಪುರಿಯಾ ಗ್ರಾಮದ ಚೌಮು ಪ್ರದೇಶದ ನಿವಾಸಿ ರಾಖೇಶ್ ನಾಗರ್ ಎಂದು ಗುರುತಿಸಲಾಗಿದೆ. ಬ್ಲೂ ಟೂತ್ ಸ್ಪೋಟಗೊಂಡ ತಕ್ಷಣ ಯುವಕ ಪ್ರಜ್ಞಾಹೀನನಾಗಿದ್ದು, ಸಿದ್ಧಿವಿನಾಯಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಎಂದು ಪೊಲೀಸರು ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply