ಋಷ್ಯಶೃಂಗೇಶ್ವರನ ಪ್ರಸಾದ ಅಯೋಧ್ಯೆಗೆ

ದಶರಥ ಮಹಾರಾಜನು ಅಮಾತ್ಯ ಸುಮಂತ್ರನ‌ ಸೂಚನೆಯಂತೆ ಸತ್ಸಂತಾನ ಪ್ರಾಪ್ತಿಗಾಗಿ ಪ್ರಾರ್ಥಿಸಿ ವಿಭಾಂಡಕ ಮಹರ್ಷಿಗಳ ಪುತ್ರರಾದ ಋಷ್ಯಶೃಂಗ ಮಹರ್ಷಿಗಳನ್ನು ಕರೆಸಿ ಅವರ ನೇತೃತ್ವದಲ್ಲಿ ಪುತ್ರಕಾಮೇಷ್ಟಿ ಯಾಗವನ್ನು ನೆರವೇರಿಸುತ್ತಾನೆ ಅದರ ಫಲವಾಗಿ ರಾಮ ಭರತಲಕ್ಷ್ಮಣ ಶತ್ರುಘ್ನರು ಜನಿಸುತ್ತಾರೆ. ಆದ್ದರಿಂದ ಈ ನೆಲದಲ್ಲಿ ರಾಮಾವತಾರವಾಗಲು ಋಷ್ಯಶೃಂಗ ಋಷಿಗಳೂ ಒಂದು ಭೂಮಿಕೆ ನಿರ್ವಹಿಸಿದ್ದಾರೆ . ಮಳೆ ಮಹರ್ಷಿಗಳೆಂದೇ ಪ್ರಸಿದ್ಧರಾದವರು , ತಮ್ಮ ತಪಸ್ಸಿನ ಸಿದ್ಧಿಯಿಂದ ಮಳೆ ತರಿಸುವ ಅಸಾಮಾನ್ಯ ಸಾಮರ್ಥ್ಯ ಇದ್ದ ಮಹಾಮುನಿಗಳು ಋಷ್ಯಶೃಂಗರು. ಅವರಿಂದ ಪ್ರತಿಷ್ಠಾಪಿಸಲ್ಪಟ್ಟ ಕಿಗ್ಗ ಋಷ್ಯಶೃಂಗೇಶ್ವರನ ಪ್ರಸಾದವನ್ನು ಶ್ರೀರಾಮನ ಪ್ರತಿಷ್ಠಾ ವಿಧಿಗಳು ಸಾಂಗವಾಗಿ ನೆರವೇರುವಂತೆ ಮತ್ತು ಲೋಕ ಕಲ್ಯಾಣವಾಗುವಂತೆ ಪ್ರಾರ್ಥಿಸಿ ಅಲ್ಲಿನ ಅರ್ಚಕರು ತಮಗೆ ತಲುಪಿಸಿದ್ದು ಅದನ್ನು ಅಯೋಧ್ಯೆ ರಾಮನಿಗೆ ತಲುಪಿಸುವುದಾಗಿ ಶ್ರೀ ಪೇಜಾವರ ವಿಶ್ವಪ್ರಸನ್ನ ತೀರ್ಥರು ತಿಳಿಸಿದ್ದಾರೆ.

ಸೋಮವಾರ ಉಡುಪಿಯ ಮಠದಲ್ಲಿ ಋಷ್ಯಶೃಂಗೇಶ್ವರ ದೇವಸ್ಥಾನದ ಅರ್ಚಕರು ಶ್ರೀಗಳಿಗೆ ಪ್ರಸಾದ ಅರ್ಪಿಸಿದರು.

 
 
 
 
 
 
 
 
 
 
 

Leave a Reply