​ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ವತಿಯಿಂದ ಶಾರದಾ ಕೃಷ್ಣ ಪುರಸ್ಕಾರ

ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಈ ವರ್ಷದಿಂದ ಪ್ರತಿವರ್ಷ ಶ್ರೀ ರಾಘವೇಂದ್ರ ಚಾರಿ ಟೇಬಲ್ ಟ್ರಸ್ಟ್ ರಿಜಿಸ್ಟರ್ ಹೆಬ್ರಿ ಪ್ರಾಯೋಜಿತ ಶಾರದಾ ಕೃಷ್ಣ ಪುರಸ್ಕಾರವನ್ನು ಕನ್ನಡ ನಾಡು ನುಡಿ ಸಂಸ್ಕೃತಿಗೆ ಕೊಟ್ಟ ಅನನ್ಯ ಸೇವೆಗಾಗಿ ಕನ್ನಡದ ಶ್ರೇಷ್ಠ ಕಲಾವಿದರಿಗೆ ರೂಪಾಯಿ 25,000 ನಗದಿನೊಂದಿಗೆ ಪ್ರಶಸ್ತಿ ಪತ್ರ ಪದಕ ನೀಡಿ ಗೌರವಿಸುತ್ತಿದೆ.

ಈ ಬಾರಿಯ ಪುರಸ್ಕೃತರು : ಗಡಿನಾಡು ಕನ್ನಡದ ಶ್ರೇಷ್ಠ ಕಲಾವಿದ ಶ್ರೀ ಕಾಸರಗೋಡು ಚಿನ್ನಾ.

ಶ್ರೀಯುತ ಕೃಷ್ಣ ಅಡಿಗ ಹಾಗೂ ಶ್ರೀಮತಿ ಶಾರದಾ ಅಡಿಗ ದಂಪತಿಗಳ ಕಿರು ಪರಿಚಯ:  ಕೀರ್ತಿಶೇಷ ಶ್ರೀಯುತ ಕೃಷ್ಣ ಅಡಿಗರು ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದ ದಿವಂಗತ ಎಲ್. ವಾಸುದೇವ ಅಡಿಗ ಹಾಗೂ ಕಾವೇರಮ್ಮ ದಂಪತಿಗಳ ಹಿರಿಯ ಪುತ್ರ ನಾಲ್ಕು ಜನ ಕಿರಿಯ ಸಹೋದರಿಯರು ಹಾಗೂ ಒಬ್ಬ ಕಿರಿಯ ಸಹೋದರರೊಂದಿಗೆ ಸಂಸ್ಕೃತ ವೈದಿಕ ಮನೆತನದಲ್ಲಿ ಜನಿಸಿದ ಇವರ ಬಾಲ್ಯದ ದಿನಗಳಲ್ಲಿ ಮಂದಾರ್ತಿ ಪ್ರೌಢಶಾಲೆ , ಮಂದಾರ್ತಿ ಪ್ರಾಥಮಿಕ ಶಾಲೆ ಹಾಗೂ ಕೂರಾಡಿ ಶಾಂತಿನಿಕೇತನ ವಿದ್ಯಾ ಮಂದಿರಗಳ ಬೀರಿದ ಪ್ರಭಾವ ಅಧಿಕ.

ನಿತ್ಯ ಬಡತನ ಬವಣೆವಿದ್ದರೂ ತನ್ನ ಸಂಸಾರ ಸಾಗರದಲ್ಲಿ ಎಲ್ಲ ಸಂಕಷ್ಟಗಳನ್ನು ಜಯಿಸಿ ಖಾಸಗಿಯಾಗಿ ಶಿಕ್ಷಣವನ್ನು ಮುಂದುವರಿಸಿ ಐಎಸ್ಎಲ್ ಸಿ ಪ್ರಮಾಣ ಪತ್ರ ಪಡೆದು ತನ್ನ ಮನೆತನದ ಪೂರ್ವಜರು ನಡೆಸಿಕೊಂಡು ಬಂದ ವೇದಾಧ್ಯಯನ ಹಾಗೂ ಪೌರೋಹಿತ್ಯ ದೊಂದಿಗೆ ಮಂದರ್ತಿ ಶಾಲೆಯಲ್ಲಿ ತರಬೇತಿ ಶಿಕ್ಷಕರಾಗಿ ನೇಮಕಗೊಂಡು ಶಿಕ್ಷಣ ಕ್ಷೇತ್ರಕ್ಕೆ ಅರ್ಪಿಸಿಕೊಂಡವರು. 1951 ರಿಂದ 1989 ರವರೆಗೆ ಸುಮಾರು ನಲವತ್ತು ವರ್ಷಗಳ ಕಾಲ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ಶಾಲೆಯಲ್ಲಿ ಅಧ್ಯಾಪಕರಾಗಿ ಸಾವಿರಾರು ವಿದ್ಯಾರ್ಥಿಗಳ ಬದುಕು ರೂಪಿಸಿದವರು.

ಶಿಕ್ಷಕ ವೃತ್ತಿ ನಡೆಸುತ್ತಿರುವಾಗಲೇ ಕನ್ನಡ ಹಾಗು ಹಿಂದಿ ವಿಷಯಗಳನ್ನು ಅಧ್ಯಯನ ಮಾಡಿ ಕನ್ನಡ ಜಾಣ , ಹಿಂದಿ ವಿಶಾರದ ಪದವಿ ಪಡೆದು ಬಳಿಕ ಮೈಸೂರು ತೆರೆದ ವಿಶ್ವವಿದ್ಯಾ ನಿಲಯದಲ್ಲಿ ಖಾಸಗಿಯಾಗಿ ಅಭ್ಯಸಿಸಿ ಕಲಾವಿಭಾಗದ ಸ್ನಾತಕೋತ್ತರ ಪದವಿ ಹಾಗೂ ಬಿ ಎಡ್ ಪದವಿಯನ್ನು ತನ್ನ ಐವತ್ತನೇ ವಯಸ್ಸಿನಲ್ಲಿ ತಮ್ಮದಾಗಿಸಿಕೊಂಡ ಸಾಧಕರಿಯವರು.

ಶೈಕ್ಷಣಿಕ ಕ್ಷೇತ್ರದಲ್ಲಿ ಮಾತ್ರವಲ್ಲದೆ ಸಂಗೀತ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ ಇವರು ತಮ್ಮ ಅರುವತ್ತೈದರಿಂದ ಎಪ್ಪತ್ತೈದು ವರ್ಷ ವಯಸ್ಸಿನಲ್ಲಿ ಉಡುಪಿಯ ಮಕುಂದಕೃಪಾ ಶಾಲೆಗೆ ತೆರಳಿ ಗುರು ಮಧೂರು ಬಾಲಸುಬ್ರಮಣ್ಯಂ ಅವರಲ್ಲಿ ಸಂಗೀತ ಅಭ್ಯಾಸ ಮುಂದುವರಿಸಿದವರು . ತಬಲಾ ವಾದನದಲ್ಲಿ ವಿಶೇಷ ಆಸಕ್ತಿ ಇದ್ದ ಅವರು ನಿವೃತ್ತಿಯ ಬಳಿಕ ವೇದ ಪಾಠಗಳನ್ನು ಅಧ್ಯಯನ ಮಾಡುತ್ತಾ ಆಸಕ್ತ ವಿದ್ಯಾರ್ಥಿಗಳಿಗೆ ಉಚಿತ ವೇದ ಪಾಠ ನಡೆಸಿಕೊಡುತ್ತಿದ್ದರು.

ಕೇವಲ ಮೂರು ಜನ ಶಿಕ್ಷಕರಿದ್ದ ಶಾಲೆಯನ್ನು ಸ್ವ ಪ್ರಯತ್ನದಿಂದ ಶಿಕ್ಷಕರ ಸಂಖ್ಯೆಯನ್ನು ಹತ್ತಕ್ಕೇರಿಸಿದ್ದೇ ಅಲ್ಲದೆ ಒಂದರಿಂದ ಐದನೇ ತರಗತಿವರೆಗಿನ ಕಿರಿಯ ಪ್ರಾಥಮಿಕ ಶಾಲೆಯನ್ನು ಹಿರಿಯ ಪ್ರಾಥಮಿಕ ಶಾಲೆಯನ್ನಾಗಿ ಮಕ್ಕಳ ಸಂಖ್ಯೆಯನ್ನು ಕೂಡಾ ಅಧಿಕಗೊಳಿಸಿ ಐವತ್ತರಿಂದ ಐನೂರಕ್ಕೆ ಪರಿವರ್ತಿಸಿದ ಶಿಕ್ಷಣ ಹರಿಕಾರ ಇವರು.

ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ ಸ್ಥಾಪನೆಗೆ ದೇವಳದ ಆಡಳಿತ ಮಂಡಳಿ ಯನ್ನು ಒತ್ತಾಯಿಸಿದ್ದೇ ಅಲ್ಲದೆ ನಾಟಕ ಯಕ್ಷಗಾನ ಮನೋರಂಜನಾ ಕಾರ್ಯಕ್ರಮಗಳ ಮೂಲಕ ದೇಣಿಗೆ ಸಂಗ್ರಹಿಸಿ ಶಾಲೆಯ ಮೂಲಭೂತ ಸೌಕರ್ಯಗಳಿಗೆ ಧನ ಕ್ರೋಡೀಕರಿ ಸಿದವರು.

ಇವರು ಮಂದಾರ್ತಿಯವರಲ್ಲಿ ಆರೋಗ್ಯ ಕೇಂದ್ರ ನಾಟಕ ಮಂಡಳಿ ಯುವಕ ಮಂಡಲ ಹೀಗೆ ಹತ್ತು ಹಲವು ಸಂಸ್ಥೆಗಳ ಉದಯಕ್ಕೆ ಕಾರಣೀಕರ್ತರಾದವರು.

ನಾಟಕಗಳಲ್ಲಿ ಪ್ರಧಾನ ಪಾತ್ರಧಾರಿಗಳಾಗಿ ಸೈ ಎನಿಸಿಕೊಂಡವರು. ಹದಿನಾರು ವರ್ಷಗಳ ಕಾಲ ಮಂದಾರ್ತಿ ಬ್ರಾಹ್ಮಣ ಸಂಘದ ಅಧ್ಯಕ್ಷರಾಗಿ ಸಮುದಾಯಕ್ಕೆ ವಿಶೇಷ ಕೊಡುಗೆ ನೀಡಿದ್ದೇ ಅಲ್ಲದೆ, ಬಾಳೆಕುದ್ರು ಮಠದ ಆಡಳಿತ ಮಂಡಳಿಯ ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸಿದವರು ಮಂದಾರ್ತಿ ದುರ್ಗಾ ಪರಮೇಶ್ವರಿ ದೇವಸ್ಥಾನದ ಅರ್ಚಕರಾಗಿಯೂ ಸೇವಿ ಸಲ್ಲಿಸಿದವರು.

ಸಹೋದರ ಸಹೋದರಿಯರ ಬದುಕಿಗೆ ದಾರಿದೀಪವಾಗಿ ತಮ್ಮ ಮಕ್ಕಳ ಶ್ರೀನಿವಾಸ ಹಾಗೂ ಭಾರ್ಗವಿ ರಾಮಚಂದ್ರ ಐತಾಳರ ಜೀವನಕ್ಕೆ ದಾರಿ ಹಿಡಿದು ಅವರೆಲ್ಲರೂ ವಿವಿಧ ಕ್ಷೇತ್ರಗಳಲ್ಲಿ ಪರಿಣಿತರಾಗುವಂತೆ ಮಾಡುವಲ್ಲಿ ಸಮಾಜದ ಗೌರವಕ್ಕೆ ಪಾತ್ರರಾಗುವಂತೆ ಅವರೆಲ್ಲರ ಬದುಕು ರೂಪಿಸಿದವರು.

ಹೆಬ್ರಿಯ ರಾಘವೇಂದ್ರ ಆಸ್ಪತ್ರೆಯ ಹುಟ್ಟಿಗೆ ಹಾಗೂ ಶ್ರೀ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ (ರಿ) ಹೆಬ್ರಿಯ ಸ್ಥಾಪನೆಗೆ ಕಾರಣೀಕರ್ತರಾದವರು. ಶ್ರೀಯುತ ಕೃಷ್ಣ ಅಡಿಗ ಹಾಗು ಶ್ರೀಮತಿ ಶಾರದಾ ಕೃಷ್ಣ ಅಡಿಗ ದಂಪತಿಗಳು

ಕೀರ್ತಿಶೇಷ ಶ್ರೀಯುತ ಕೃಷ್ಣ ಅಡಿಗರು ದೇವಿ ಮಂದಾರ್ತಿ ದುರ್ಗಾ ಪರಮೇಶ್ವರಿ ದೇವಸ್ಥಾನದ ಅರ್ಚಕ ದಿ.ಶ್ರೀ ಎಮ್ ವಾಸುದೇವ ಅಡಿಗ ಹಾಗು ಶ್ರೀಮತಿ ಕಾವೇರಮ್ಮ ದಂಪತಿಗಳ ಹಿರಿಯ ಪುತ್ರ. ಸಂಸಾರ ಸಾಗರದಲ್ಲಿದ್ದ ಅದೆಷ್ಟೋ
ಏರುಪೇರು ,ಸಮಸ್ಯೆ, ಕಷ್ಟಗಳನ್ನು ಜಯಿಸಿ ವೇದಾಧ್ಯಯನ ಹಾಗೂ ಪೌರೋಹಿತ್ಯದ ಕಲಿಕೆಯೊಂದಿಗೆ ಶಿಕ್ಷಕ ತರಬೇತಿ ಪಡೆದು, ಸುಮಾರು ನಲವತ್ತು ವರ್ಷಗಳ ಕಾಲ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ಶಾಲೆಯಲ್ಲಿ ಅಧ್ಯಾಪನ ವೃತ್ತಿಯ ಮೂಲಕ ಸಾವಿರಾರು ವಿದ್ಯಾರ್ಥಿಗಳ ಜೀವನಕ್ಕೆ ದಾರಿ ದೀಪವಾದವರು.
.
ಶೈಕ್ಷಣಿಕ ಕ್ಷೇತ್ರದಲ್ಲಿ ಮಾತ್ರವಲ್ಲದೆ ಸಂಗೀತ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ ಇವರು ಸಂಗೀತಾಭ್ಯಾಸದ ಜೊತೆಗೆ ತಬಲಾ ವಾದನಕ್ಕೂ ಮನ ಮಾಡಿದವರು.
ಮಂದಾರ್ತಿಯಲ್ಲಿ ಆರೋಗ್ಯ ಕೇಂದ್ರದ ಆರಂಭ ,ಯುವಕ ಮಂಡಲದ ಸ್ಥಾಪನೆ, ನಾಟಕ ಮಂಡಳಿಯ ಆಯೋಜನೆ ಆ ಮೂಲಕ ಜನಹಿತ ಕಾರ್ಯಗಳಲ್ಲಿ ತೊಡಗಿಸಿಕೊಂಡು ಯಾವ ಪ್ರಶಂಸೆಯನ್ನೂ ಆಶಿಸದ ಅದ್ಭುತ ವ್ಯಕ್ತಿ ಇವರು. ..

ಸಾಂಸ್ಕ್ರತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಅಪಾರ ಒಲವಿದ್ದ ಇವರು ಸ್ವತಹ ಬ್ಯಾಡ್ಮಿಂಟನ್ ಆಟಗಾರರಾಗಿದ್ದು, ಸತ್ಯಹರಿಶ್ಚಂದ್ರ ನಾಟಕದ ಚಂದ್ರಮತಿ, ಪಾದುಕಾ ಪ್ರದಾನದ ಮಂಥರೆ, ಅಸಂಪ್ರದಾಯ ಮಹಿಳೆಯ ಆಧುನಿಕ ಸ್ತ್ರೀ ಹೀಗೆ ಹತ್ತು ಹಲವು ನಾಟಕಗಳಲ್ಲಿ ಅಭಿನಯಿಸಿ ಸೈ ಅನಿಸಿಕೊಂಡವರು.

.ಕಾಯಾ ವಾಚಾ ಮನಸಾ ಎಂಬಂತೆ ಸಮಾಜದ ಜನರ ಸುಖ ಸಂತೋಷಕ್ಕಾಗಿ ಶ್ರಮಿಸಿದವರು. ನಿಸ್ವಾರ್ಥ ಸೇವೆಯ ಮೂಲಕ ಜನಹಿತ ಕಾಯ್ದವರು.

. ಹೆಬ್ರಿಯ ರಾಘವೇಂದ್ರ ಆಸ್ಪತ್ರೆಯ ಹುಟ್ಟಿಗೆ ,ಶ್ರೀ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಸ್ಥಾಪನೆಗೆ ಮೂಲ ಕಾರಣವಾಗಿ ತಮ್ಮ ಮಕ್ಕಳಲ್ಲಿ ಸಮಾಜ ಸೇವೆಯ ಜ್ಯೋತಿಯನ್ನು ಬೆಳಗಿದವರು.

ಇವರ ಸಾಧನೆಯ ಯಶೋಗಾಥೆಯ ಜೀವನ ಪಥದಲ್ಲಿ ಸಾಥ್ ನೀಡಿದವರು ಇವರ ಧರ್ಮಪತ್ನಿ ಒಂದಷ್ಟು ಕಷ್ಟ ಕಾರ್ಪಣ್ಯದ ಮಧ್ಯದಲ್ಲೂ ಮನೆಮಂದಿಯ ಹೊಣೆಯನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಿಸಿ ಎಲ್ಲರ ಪ್ರೀತಿಗೆ ಪಾತ್ರರಾದ ಆದರ್ಶ ಮಹಿಳೆ ಶ್ರೀಮತಿ ಶಾರದಾರವರು.

ತಮ್ಮ ಕುಟುಂಬದ ಸದಸ್ಯರಿಗೆ ಉತ್ತಮ ಸಂಸ್ಕೃತಿಯ ಜೊತೆ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗುವಂತೆ ಪ್ರೇರೇಪಿಸಿ ಆದರ್ಶ ಜೀವನಕ್ಕೆ ದಾರಿ ದೀಪವಾದ ತಮ್ಮ ಮಾತಾಪಿತರ ನೆನಪಿನಲ್ಲಿ ಶ್ರೀ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಆರಂಭಿಸಿ ಸಮಾಜ ಸೇವೆ ನಡೆಸಲು ಕಾರಣರಾಗಿದ್ದಾರೆ.

ಕೀರ್ತಿಶೇಷ ದಂಪತಿಗಳ ಹೆಸರಿನಲ್ಲಿ ಈ ವರ್ಷದಿಂದ ಪ್ರತಿವರ್ಷ ‘ಶಾರದಾ ಕೃಷ್ಣ ಪುರಸ್ಕಾರ’ ಎಂಬ ಹೆಸರಿನಲ್ಲಿ ಕನ್ನಡದ ಶ್ರೇಷ್ಠ ಕಲಾವಿದರೊಬ್ಬರಿಗೆ ರೂಪಾಯಿ 25,000 ದೊಂದಿಗೆ ಪ್ರಶಸ್ತಿ ಪತ್ರ ಫಲಕ ನೀಡಿ ಗೌರವಿಸಲಾಗುತ್ತಿದೆ.

✍️ ಪೂರ್ಣಿಮಾ ಜನಾರ್ದನ್
ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ

 
 
 
 
 
 
 
 
 
 
 

Leave a Reply