ಅಲ್ಪ ಸಂಖ್ಯಾತರ ಪ್ರಾಬಲ್ಯವಿರುವ ಗ್ರೇಟರ್ ಹೈದರಾಬಾದ್ ಕಾರ್ಪೋರೇಷನ್ ಚುನಾವಣೆಯಲ್ಲಿ ಬಿಜೆಪಿ 36 ಸೀಟುಗಳನ್ನು ಗೆಲ್ಲುವ ಮೂಲಕ ಗೆಲುವಿನ ನಗೆ

ಹೈದರಾಬಾದ್ ; ಅಲ್ಪ ಸಂಖ್ಯಾತರ ಪ್ರಾಬಲ್ಯವಿರುವ ದೇಶದ ಪ್ರಮುಖ ನಗರಗಳಲ್ಲಿ ಒಂದಾಗಿರುವ ಹೈದರಾಬಾದ್ ನಲ್ಲಿ ನಡೆದ ಗ್ರೇಟರ್ ಹೈದರಾಬಾದ್ ಕಾರ್ಪೋರೇಷನ್ ಚುನಾವಣೆಯಲ್ಲಿ ಬಿಜೆಪಿ ಮ್ಯಾಜಿಕ್ ಮಾಡಿದೆ. ಕಳೆದ ಬಾರಿ 4 ಸೀಟ್ ಗಳನ್ನು ಮಾತ್ರ ಗೆದ್ದಿದ್ದ ಕೇಸರಿ ಪಾಳೆಯ ಈ ಬಾರಿ 36 ಸೀಟುಗಳನ್ನು ಗೆಲ್ಲುವ ಮೂಲಕ 8 ಪಟ್ಟು ಸಂಖ್ಯೆ ಹೆಚ್ಚಿಸಿಕೊಂಡಿದೆ.

ಆಡಳಿತರೂಢ ಟಿಆರ್ ಎಸ್ ಕಳೆದ ಬಾರಿ 90 ಸ್ಥಾನ ಪಡೆದಿತ್ತು. ಆದರೆ ಈ ಬಾರಿ ಟಿಆರ್ ಎಸ್ 72 ಸ್ಥಾನಗಳಲ್ಲಿ ಮಾತ್ರ ಜಯಭೇರಿ ಬಾರಿಸಿದ್ದು, ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಬಿದ್ದಿದೆ. ಕಳೆದ ಬಾರಿ 4 ಸ್ಥಾನ ಮಾತ್ರ ಪಡೆದಿದ್ದ ಬಿಜೆಪಿ ಈಗಿನ ಚುನಾವಣೆಯಲ್ಲಿ 36 ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿದೆ. ಇನ್ನು ಓವೈಸಿಯ ಎಂಐಎಂ 42 ಸ್ಥಾನ ಗಳಿಸಿದ್ರೆ, ಕಾಂಗ್ರೆಸ್ ಕೇವಲ 2 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿ ತೀವ್ರ ಮುಖಭಂಗ ಅನುಭವಿಸಿದೆ.

ಬಿಜೆಪಿ ಅಧಿಕಾರಕ್ಕೆ ಬಂದರೆ ಹೈದರಾಬಾದ್ ನ್ನು ಭಾಗ್ಯನಗರ ಎಂಬ ಹೆಸರನ್ನು ಮರು ನಾಮಕರಣ ಮಾಡುವುದಾಗಿ ಹೇಳಿ ಬಿಜೆಪಿ ಹಿಂದುಗಳ ಮತಗಳನ್ನು ಬಾಚಿಕೊಂಡಿತು. ಆದರೆ ಈಗ ಯಾರಿಗೂ ಸ್ಪಷ್ಟ ಬಹುಮತ ಬಾರದೆ ಅತಂತ್ರವಾಗಿದೆ. ಈಗ ಬಿಜೆಪಿ ಯಾರ ಜೊತೆ ಸೇರಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ ಎಂಬ ರಾಜಕೀಯ ತಂತ್ರಗಾರಿಕೆ ಇನ್ನು ಸ್ಪಷ್ಟವಾಗಿಲ್ಲ.

ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಭಾಗ್ಯನಗರ ಎಂಬ ಹೆಸರನ್ನು ಮರು ನಾಮಕರಣ ಮಾಡುವುದೇ ಅಥವಾ ಚುನಾವಣೆಯ ರಾಜಕೀಯ ಲಾಭಕ್ಕಾಗಿ ಹೀಗೆ ಹೇಳಿ ಪಲಾಯನ ಮಾಡುವುದೇ ಅಂತ ಕಾದು ನೋಡಬೇಕು. ಒಟ್ಟಾರೆ ಈಗಿನ ಚುನಾವಣೆ ಮುಂದಿನ ವಿಧಾನ ಸಭಾ ಚುನಾವಣೆಯ ದಿಕ್ಕೂಜಿ ಎಂದ ರಾಜಕೀಯವಾಗಿ ಭಾವಿಸಲಾಗಿದೆ

 
 
 
 
 
 
 
 
 
 
 

Leave a Reply