Janardhan Kodavoor/ Team KaravaliXpress
26.6 C
Udupi
Thursday, August 11, 2022
Sathyanatha Stores Brahmavara

ನಾಳೆ ಕರ್ನಾಟಕ ಬಂದ್‌ಗೆ ಕರೆ ಹಿನ್ನೆಲೆ ಯಾವುದೆಲ್ಲ ಇರುತ್ತದೆ?

ಕರ್ನಾಟಕದಲ್ಲಿ ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಕನ್ನಡ ಸಂಘಟನೆಗಳು ನಾಳೆ ಬಂದ್ ಗೆ ಕರೆ ನೀಡಲಾಗಿದ್ದು, ರಾಜ್ಯಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ನಾಳೆ ಬಂದ್ ಸಂದರ್ಭ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಬಿಗಿ ಬಂದೋಬಸ್ತ್‌ಗೆ ಆದೇಶಿಸಿದ್ದಾರೆ. ಡಿ.4 ರ ಮಧ್ಯರಾತ್ರಿಯಿಂದಲೇ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ನಾಳೆ ಡಿ.5ರಂದು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು, ಮೆಡಿಕಲ್ ಸ್ಟೋರ್‌ಗಳು ಇರಲಿವೆ. ಹಾಲು, ಹಣ್ಣು, ತರಕಾರಿ, ದಿನಸಿ ಎಂದಿನಂತೆ ಇರಲಿವೆ. ರೈಲು, ಮೆಟ್ರೋ, ಬಸ್ ಹಾಗೂ ಓಲಾ ಊಬರ್ ಕೂಡ ಇರಲಿದ್ದು, ಲಾರಿ, ಬಾರ್ ಅಂಡ್ ರೆಸ್ಟೋರೆಂಟ್, ಥಿಯೇಟರ್, ಮಲ್ಟಿಪ್ಲೆಕ್ಸ್ ಹಾಗೂ ಮಾಲ್ ಕೂಡ ಕಾರ್ಯ ನಿರ್ವಹಿಸಲಿವೆ.

ಇನ್ನು ನಾಳಿನ ಬಂದ್ ಗೆ ಆಟೋ ಮಾಲೀಕರ ಸಂಘ ಬೆಂಬಲ ನೀಡಿರುವುದರಿಂದ ಆಟೋ ಇರುವುದಿಲ್ಲ. ಗಾರ್ಮೆಂಟ್ಸ್, ಕೈಗಾರಿಕೆ ಪ್ರದೇಶಗಳಲ್ಲಿಯೂ ಕೆಲಸ ಸ್ಥಗಿತವಾಗಲಿದೆ. ಹಾಗೆ ಬೀದಿ ಬದಿ ವ್ಯಾಪಾರ ಕೂಡ ಬ್ರೇಕ್ ಬೀಳಲಿದೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!