ಪರಸ್ಪರ ಸಾಮರಸ್ಯ, ಭ್ರಾತೃತ್ವ ಮತ್ತು ಐಕ್ಯತೆಯ ಬಲಪಡಿಸುವ ಪ್ರತಿಜ್ಞೆ ಮಾಡೋಣ-ರಾಷ್ಟ್ರಪತಿ ರಾಮನಾಥ್ ಕೋವಿಂದ್

ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾರತ ಮತ್ತು ವಿದೇಶಗಳಲ್ಲಿ ವಾಸಿಸುವ ಎಲ್ಲ ನಾಗರಿಕರಿಗೆ ಗಣೇಶ ಚತುರ್ಥಿಯ ಶುಭಾಶಯಗಳನ್ನು ತಿಳಿಸಿದ್ದಾರೆ .


ಗಣೇಶ ಹಬ್ಬವು ಗಜಮುಖನ ಜನ್ಮದಿನ ವೆಂದು ಆಚರಿಸಲ್ಪಡುತ್ತದೆ. ಈ ಸಂದರ್ಭ ಜನರು ಉತ್ಸಾಹ, ಸಂತೋಷ ಮತ್ತು ಸಹಿಷ್ಣುತೆಯಿಂದಿರಬೇಕು. ಹಬ್ಬದಂದು ದೇಶದ ಎಲ್ಲ ನಾಗರಿಕರಲ್ಲಿ ಪರಸ್ಪರ ಸಾಮರಸ್ಯ, ಭ್ರಾತೃತ್ವ ಮತ್ತು ಐಕ್ಯತೆಯನ್ನು ಬಲಪಡಿಸುವ ಪ್ರತಿಜ್ಞೆ ಮಾಡೋಣ ಎಂದು ಕರೆ ನೀಡಿದ್ದಾರೆ.


ಕೋವಿಡ್-19 ಸಾಂಕ್ರಾಮಿಕದಿಂದ ನಾವು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿ ದ್ದೇವೆ. ಈ ರೋಗವನ್ನು ಆದಷ್ಟು ಬೇಗನೆ ನಿವಾರಿಸಲು ಗಣೇಶನ ಬಳಿ ಬೇಡಿ ಕೊಳ್ಳೋಣ. ನಮ್ಮೆಲ್ಲರನ್ನು ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ ಮತ್ತು ನಾವೆಲ್ಲರೂ ಸಂತೋಷದಾಯಕ ಮತ್ತು ಆರೋಗ್ಯಕರ ಜೀವನವನ್ನು ನಡೆಸುವಂತಾಗಲಿ ಎಂದಿದ್ದಾರೆ.

Leave a Reply