Janardhan Kodavoor/ Team KaravaliXpress
31.6 C
Udupi
Saturday, December 3, 2022
Sathyanatha Stores Brahmavara

ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಕಡತ ವಿಲೇವಾರಿಗೆ ಇನ್ನಷ್ಟು ವೇಗ~ರಾಘವೇಂದ್ರ ಕಿಣಿ 

ಉಡುಪಿ ಆಗಸ್ಟ್,21: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕಡತಗಳನ್ನು ವಿಲೇವಾರಿ ಮಾಡುವ ಸಂಬಂಧ ಪ್ರಾಧಿಕಾರದ ಅಧ್ಯಕ್ಷರು ಕಡತಗಳನ್ನು ಸಾರ್ವಜನಿಕರಿಗೆ ಕ್ಲಪ್ತ ಸಮಯದಲ್ಲಿ ವಿಲೇವಾರಿ ಮಾಡಲು,  ಪ್ರತಿಯೊಂದು ಕಡತಕ್ಕೆ ದಿನಾಂಕವನ್ನು ಇದೀಗ ನಿಗದಿ ಪಡಿಸಿ ದ್ದಾರೆ

ಪ್ರಾಧಿಕಾರದಲ್ಲಿ ವಿಲೇವಾರಿ ಆಗುವ ಕಡತಗಳಾದ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಕಟ್ಟಡ ಪ್ರಾರಂಭಿಕ ಪ್ರಮಾಣ ಪತ್ರ ಹಾಗೂ ಏಕ ವಿನ್ಯಾಸ, ಭೂ ಪರಿವರ್ತನೆಗೆ ತಾಂತ್ರಿಕ ಅಭಿಪ್ರಾಯ, ವಲಯ ದೃಢಪತ್ರ ಮುಂತಾದ ಕಡತಗಳನ್ನು ಸಾರ್ವಜನಿಕರಿಗೆ ನಿಗಧಿತ ಅವಧಿ ಯೊಳಗೆ ಸಿಗುವ ಹಾಗೆ ವ್ಯವಸ್ಥೆ ಮಾಡಲಾಗಿದೆ. ಕಟ್ಟಡ ಪ್ರಾರಂಭಿಕ ಪ್ರಮಾಣ ಪತ್ರಕ್ಕೆ 30 ದಿವಸ, ಏಕ ವಿನ್ಯಾಸ ಅನುಮೋದನೆಗೆ 30 ದಿನ , ಭೂಪರಿವರ್ತನೆ ತಾಂತ್ರಿಕ ಅಭಿಪ್ರಾಯ 30 ದಿನ  ಹಾಗೂ ವಲಯ ದೃಢಪತ್ರಕ್ಕೆ 15 ದಿನಗಳನ್ನು ನಿಗದಿ ಮಾಡಲಾಗಿದೆ . ಸದರಿ ಅವಧಿಯ ಒಳಗೆ ಸಾರ್ವಜನಿಕರ ಕಡತಗಳು ವಿಲೇವಾರಿ ಆಗದಿದ್ದಲ್ಲಿ ಪ್ರಾಧಿಕಾರದ ಆಯುಕ್ತರು/ ಅಧಕ್ಷರನ್ನು ಸಂಪರ್ಕಿಸಬಹುದಾಗಿ ಪ್ರಾಧಿ ಕಾರ ಅಧ್ಯಕ್ಷ ಕೆ.ರಾಘವೇಂದ್ರ ಕಿಣಿ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!