ಎ ಸ್ ಕೆ ಪಿ ಮೂಲ್ಕಿ ವಲಯದಿಂದ ಕೋಟ ಶ್ರೀನಿವಾಸ ಪೂಜಾರಿಗೆ ಅಭಿನಂದನೆ

181 ನೇ ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ಸೌತ್ ಕೆನರಾ ಫೋಟೋ ಗ್ರಾಫರ್ಸ್ ಎಸೋಸಿಯೇಶನ್ ನ ಮೂಲ್ಕಿ ವಲಯದ ವತಿಯಿಂದ ಹಳೇ (ಹಿರಿಯ) ಛಾಯಾಗ್ರಾಹಕ ಪ್ರಸ್ತುತ ಕರ್ನಾಟಕ ಸರ್ಕಾರದ ಬಂದರು ಮತ್ತು ಮೀನುಗಾರಿಕಾ ಸಚಿವ, ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಯವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವಲಯಾಧ್ಯಕ್ಷ ನವೀನ್ ಚಂದ್ರ, ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿ ನವೀನ್ ಕುಮಾರ್ ಕಟೀಲ್, SKP ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕ ಪಿ ಮೋಹನ್ ರಾವ್, ತಾಲೂಕು ಪಂಚಾಯತ್ ಸದಸ್ಯ ಜೀವನಪ್ರಕಾಶ್, ವಲಯ ಉಪಾಧ್ಯಕ್ಷ ಶಿವರಾಮ್ ಕಾರ್ನಾಡ್, ಕಾರ್ಯದರ್ಶಿ ಸುರೇಶ್ ಕೆ ಬಿ, ಕೋಶಾಧಿ ಕಾರಿ ರಮೇಶ್ ಪೂಜಾರಿ ಸದಸ್ಯರಾದ ಬಾಲಕೃಷ್ಣ, ಹರೀಶ್ ಪಿಕೆ, ನೀಲಕಂಠ ರಾವ್ ಉಪಸ್ಥಿತರಿದ್ದರು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply