ಟಿ.ಎ.ಪೈ ಪ್ರೌಢಶಾಲೆ : ಗಾಂಧೀಜಯಂತಿ, ಲಾಲ್ ಬಹಾದ್ದೂರ್ ಜಯಂತಿ

ಕುoಜಿಬೆಟ್ಟಿನ ಟಿ.ಎ.ಪೈ ಇಂಗ್ಲೀಷ್ ಮೀಡಿಯಂ ಹೈಸ್ಕೂಲಿನಲ್ಲಿ ಗಾಂಧೀಜಯoತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಅರೂರು ಮಂಜುನಾಥ ರಾವ್ ಅವರು ಮಾತನಾಡುತ್ತಾ ಸತ್ಯ, ಅಹಿಂಸೆ, ತ್ಯಾಗ, ಪ್ರಾಮಾಣಿಕತೆ, ಸರಳ ಜೀವನ, ಸ್ವಚ್ಛತೆ ಮೊದಲಾದವುಗಳಿಗೆ ಹೆಚ್ಚಿನ ಮಹತ್ವ ಕೊಟ್ಟ ಮಹಾತ್ಮ ಗಾಂಧೀಜಿಯವರು ಭಾರತದ ಸಮಸ್ತ ಪ್ರಜೆಗಳಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷೆ ವಹಿಸಿದ್ದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಸುಹಾನಿ ಕಾಮತ್ ಅವರು ಮಾತನಾಡುತ್ತಾ ಮಹಾತ್ಮ ಗಾಂಧೀಜಿಯವರ ತತ್ವಾದರ್ಶಗಳನ್ನು
ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಒಳ್ಳೆಯ ನಾಗರೀಕರಾಗಿ ಬಾಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಮಾ.ಯಶಸ್ ಹಾಗೂ ಮಾ.ಅಭಿಷೇಕ್ ಜೆ ಶೆಟ್ಟಿ ಅವರು ಅನುಕ್ರಮವಾಗಿ ಗಾಂಧೀಜಿ ಹಾಗೂ ಶಾಸ್ರೀ ಬಗ್ಗೆ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿನೋದಾ ಶೆಟ್ಟಿಯವರು ಅತಿಥಿಗಳನ್ನು ಸ್ವಾಗತಿಸಿದರು. ಮಾ. ಕೀರ್ತಿರಾಜ್ ಅತಿಥಿಗಳನ್ನು ಪರಿಚಯಿಸಿದರು. ಮಾ.ಅಕ್ಷಯ್ ಜೋಗಿ ವಂದನಾರ್ಪಣೆಗೈದರು. ಕುಮಾರಿ.ಸುನಿಧಿ ಕಾಮತ್ ವಿಜೇತರ ಪಟ್ಟಿ ವಾಚಿಸಿದರು. ಕುಮಾರಿ.ಅಂಕಿತಾ ಯಶವಂತ ಕಾರ್ಯಕ್ರಮವನ್ನು ನಿರೂಪಿಸಿದರು.ಶಿಕ್ಷಕಿ ಶ್ರೀಮತಿ. ಅರುಣಾ ಕುಮಾರಿ ಕಾರ್ಯಕ್ರಮವನ್ನು ಸಂಯೋಜಿಸಿದರು. ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸರ್ವಧರ್ಮ ಧಾರ್ಮಿಕ ಪಠಣ, ಭಜನೆ ಜರಗಿತು.

 
 
 
 
 
 
 
 
 
 
 

Leave a Reply