ಮೊಗವೀರ ಸಮುದಾಯ ಶಕ್ತಿಯುತ ಸಮಾಜವಾಗಿದೆ~ ಡಾ. ಜಿ. ಶಂಕರ್

ಮೊಗವೀರ ಸಮುದಾಯ ಶಕ್ತಿಯುತ ಸಮಾಜವಾಗಿದ್ದು, ಶ್ರದ್ಧೆ, ಭಕ್ತಿ, ನಿಷ್ಠೆಗೆ ಹೆಸರುವಾಸಿಯಾಗಿದೆ. ಸಮಾಜ ಯುವಜನರಿಗಾಗಿ ಕೌಶಲ್ಯಾಭಿವೃದ್ಧಿ ಕೇಂದ್ರ ಪ್ರಾರಂಭಿಸ ಲಾಗುವುದು ಎಂದು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ. ಜಿ. ಶಂಕರ್ ಹೇಳಿದರು.

ಭಾನುವಾರ ಉಚ್ಚಿಲ ಮೊಗವೀರ ಭವನದಲ್ಲಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ , ಮೊಗವೀರ ಯುವ ಸಂಘಟನೆ, ಮಣಿಪಾಲ ಸಿಗ್ನ ಹೆಲ್ತ್ ಇನ್ಶೂರೆನ್ಸ್ ಸಹಯೋಗದಲ್ಲಿ ಆರೋಗ್ಯ ಸುರಕ್ಷಾ ಕಾರ್ಡ್ ವಿತರಣೆ, ಗುರಿಕಾರರ ಸಮಾವೇಶ, ಮೊಗವೀರ ಯುವ ಸಂಘಟನೆ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮೊಗವೀರ ಸಮಾಜದ ಆಸ್ತಿಯಾಗಿದ್ದು, ಉಚ್ಚಿಲ ದೇವಸ್ಥಾನ ಧಾರ್ಮಿಕ ಶಕ್ತಿ ಕೇಂದ್ರವಾಗಿದೆ. ದೇವಸ್ಥಾನದ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಪ್ರತೀ ಹೋಬಳಿಗೆ ಮಹಾಲಕ್ಷ್ಮೀ ರಥ ಆಗಮಿಸಲಿದ್ದು, ಎಲ್ಲರೂ ಸ್ವಾಗತ ನೀಡಿ ಪ್ರಸಾದ ಸ್ವೀಕರಿಸಬೇಕು. ಸಮಾಜ ಸಂಘಟಿತವಾಗುವ ಮೂಲಕ ಶಕ್ತಿ ಪ್ರದರ್ಶನ ಮಾಡಬೇಕು ಎಂದು ಹೇಳಿದರು. ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ಶಿವರಾಮ ಕೆ.ಎಂ., ದ.ಕ. ಮೊಗವೀರ ಮಹಾಜನ ಸಂಘ ಉಪಾಧ್ಯಕ್ಷ ಸುಭಾಶ್ಚಂದ್ರ ಕಾಂಚನ್ ಬೋಳಾರ್, ಮಣೂರು ಗೀತಾನಂದ ಪೌಂಡೇಶನ್ ಪ್ರವರ್ತಕ ಆನಂದ್ ಕುಂದರ್, ಮೊಗವೀರ ಸಂಯುಕ್ತ ಸಭಾ ಅಧ್ಯಕ್ಷ ಸತೀಶ್ ಅಮೀನ್, ಬಗ್ವಾಡಿ ಮೊಗವೀರ ಮಹಾಜನ ಸೇವಾ ಸಂಘ ಅಧ್ಯಕ್ಷ ಉದಯ್‌ಕುಮಾರ್ ಹಟ್ಟಿಯಂಗಡಿ, ಮೊಗವೀರ ಯುವ ಸಂಘಟನೆ ನಿಯೋಜಿತ ಅಧ್ಯಕ್ಷ ರಾಜೇಂದ್ರ ಸುವರ್ಣ ಹಿರಿಯಡ್ಕ ಉಪಸ್ಥಿತರಿದ್ದರು. ವಿನಯ ಕರ್ಕೇರಾ ಸ್ವಾಗತಿಸಿ, ಅಶೋಕ್ ತೆಕ್ಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply