ಮಿಲಾಗ್ರಿಸ್ ಕಾಲೇಜ್ :ವಿಶ್ವ ಪರಿಸರ ದಿನಾಚರಣೆ 

ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ, ರೋಟರಿ ಕ್ಲಬ್ ಉಡುಪಿ, ಇನ್ನರ್ ವೀಲ್ ಕ್ಲಬ್ ಇದರ ಸಹಯೋಗದೊಂದಿಗೆ ವಿಶ್ವ ಪರಿಸರ ದಿನವನ್ನು ದಿನಾಂಕ 05/06/2022ರಂದು ಮಿಲಾಗ್ರಿಸ್ ಕಾಲೇಜಿನಲ್ಲಿ ಆಯೋಜಿಸಲಾಯಿತು. ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ, ರೋಟರಿ ಕ್ಲಬ್ ಉಡುಪಿ, ಇನ್ನರ್ ವೀಲ್ ಕ್ಲಬ್ ಇವರ ಸಹಕಾರದಿಂದ ಮಿಲಾಗ್ರಿಸ್ ಕಾಲೇಜಿನಲ್ಲಿ ರೂಪುಗೊಳ್ಳುತ್ತಿರುವ ಜಪಾನ್ ಮಾದರಿಯ ಮಿಯಾವಾಕಿ ಕಾಡಿನಲ್ಲಿ ಗಿಡಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರೋಟರಿ ಅಧ್ಯಕ್ಷರು ಶ್ರೀ ಹೇಮಂತ್ ರವರು ಮಿಯಾವಾಕಿಯ ವಿಶೇಷತೆ ಹಾಗೂ ಕಾಲೇಜಿನಲ್ಲಿ ಮಿಯಾವಾಕಿ ಕಾಡು ಬೆಳೆಸಲು ಶ್ರಮಿಸುತ್ತಿರುವ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಎಲ್ಲ ಸಿಬ್ಬಂದಿಗಳಿಗು ಹಾಗೂ ಕಾಲೇಜಿನ ರಾಷ್ಟ್ರೀಯ ಸೇವಾ ಯೊಜನೆಯ ಯೋಜನಾಧಿಕಾರಿಗಳು ಹಾಗೂ ಎಲ್ಲ ಸ್ವಯಂ ಸೇವಕರ ಕಾರ್ಯ ವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ ವಿನ್ಸೆಂಟ್ ಆಳ್ವರವರು ವಿಶ್ವ ಪರಿಸರದಿನದ ಮಹತ್ವ ತಿಳಿಸುತ್ತ ಮನುಷ್ಯ ಕೊನೆಯಲ್ಲಿ ಉಳಿಯದಿದ್ದರು ಅವನು ಬೆಳೆಸಿದ ಮರ ಗಿಡಗಳು ಪರರಿಗೆ ನೆರಳಾಗಿ ಉಸಿರಾಗಿ ನಿಲ್ಲುತ್ತದೆ ಎಂದು ಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಅಧ್ಯಕ್ಷೆ ರೊಟೇರಿಯನ್ ಶುಭಶ್ರೀ , ಕಾರ್ಯದರ್ಶಿ ನಳಿನಿ ರಾಘವೇಂದ್ರ, ಇನ್ನರ್ ವೀಲ್ ಸದಸ್ಯರಾದ ಸುಮನ್ ಆಚಾರ್ಯ, ಶೈಲಾ, ರೋಟರಿ ಪದಾಧಿಕಾರಿಗಳಾದ ರೊಟೇರಿಯನ್ ಸುಬ್ರಮಯ್ಯ ಕಾರಂತ್, ರೊಟೇರಿಯನ್ ಹರಿಪ್ರಸಾದ್ ಹಾಗೂ ಇತರೆ ರೋಟರಿ ಹಾಗೂ ಇನ್ನರ್ ವೀಲ್ ಸದಸ್ಯರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಕಾರ್ಯಕರ್ಮದಲ್ಲಿ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಶ್ರೀಮತಿ ಅನುಪಮಾ ಜೋಗಿ, ಶ್ರೀ ಮೆಲ್ಸನ್ ಡಿಸೋಜ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply