ಕಡಿಯಾಳಿ ದೇವಳದಲ್ಲಿ ಶಿಲ್ಪಿ ಸುದರ್ಶನ ಆಚಾರ್ಯರ ಶಿಲ್ಪ ವೈಭವ

ಹಲವು ದಿನಗಳಿಂದ ಮಾಧ್ಯಮದಲ್ಲಿ ಪ್ರಚಲಿತದಲ್ಲಿರುವ ಕಡಿಯಾಳಿ ಬ್ರಹ್ಮ ಕಲಶೋತ್ಸವ (01ದಿನ) ನಡೆಯುತ್ತಿದೆ. ಶಿಲ್ಪ ಕಲೆಯನ್ನು ತಂತ್ರಜ್ಞಾನ ದೊಂದಿಗೆ ಕೈ ಜೋಡಿಸಿದರೆ ಹೆಗಾದೀತು?..

ಇದಕ್ಕೇ ನೈಜ ಉದಾಹರಣೆ ದೇವಸ್ಥಾನದ ಮುಖ್ಯ ದ್ವಾರದಲ್ಲಿರುವ ತಿರುಗುವ ಮುಚ್ಚಿಗೆ ಜನರ ಮಾಧ್ಯಮದ ಹಾಗೂ ರಾಜ್ಯದ ಮುಖ್ಯಮಂತ್ರಿಗಳ ಗಮನ ಕೂಡ ಸೆಳದಂತ ಅದ್ಬುತ ಕಲೆ.

 ಇಷ್ಟೇ ಅಲ್ಲದೇ ದೇವಾಲಯದ ಒಳಗಡೆ ಎಡ ಮತ್ತೆ ಬಲಬದಿ ಮೇಲ್ಚಾವಣಿಯ ಮರದ ಕೆತ್ತನೆಗಳು ಮೆಚ್ಚುಗೆ ಪಾತ್ರವಾಗಿದೆ.

 ಈ ಎಲ್ಲದರ ಮುಖ್ಯ ಸೂತ್ರದಾರ ನಮ್ಮೆಲ್ಲರ ಹೆಮ್ಮೆಯ ಸುದರ್ಶನ ಆಚಾರ್ಯ ಹಾಗು ಅವರ ತಂಡ. ಇಂತಾ ಅದ್ಭುತ ಕಲಾಕಾರನ ಕಲೆಯನ್ನು ಮೆಚ್ಚದವೆರೆ ಇಲ್ಲ.

ಪ್ರಚಾರ ಬಯಸದ ರಥ ಶಿಲ್ಪಿ ಸುದರ್ಶನ ಆಚಾರ್ಯರಿಗೆ ಜನ ಮನ್ನಣೆ ಸಿಗಲಿ ಎಂದು ಆಶಿಸೋಣ.

 
 
 
 
 
 
 
 
 
 
 

Leave a Reply