ಶ್ವೇತ ಭವನಕ್ಕೆ ಮರಳಿದ ಟ್ರಂಪ್ ಜನತೆಗೆ ಜಾಗರೂಕತೆ ವಹಿಸಿ ಎಂದಿದ್ದಾರೆ

ವಾಷಿಂಗ್ಟನ್: ಕೆಲವು ದಿನಗಳ ಹಿಂದೆ ಕೊರೋನಾಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ವಾಲ್ಟರ್ ರೀಡ್ ರಾಷ್ಟ್ರೀಯ ಮಿಲಿಟರಿ ವೈದ್ಯಕೀಯ ಕೇಂದ್ರದಿಂದ ಶ್ವೇತ ಭವನಕ್ಕೆ ಮರಳಿ ದ್ದಾರೆ. ಶ್ವೇತ ಭವನಕ್ಕೆ ಹಿಂದುರಿಗಿದ ಕೂಡಲೆ ತಮ್ಮ ಜನತೆಗೆ ಸಂದೇಶವೊಂದನ್ನು ನೀಡಿದ್ದಾರೆ.

ಟ್ವಿಟರ್ ನಲ್ಲಿ ವೀಡಿಯೊ ಮೂಲಕ ಸಂದೇಶ ನೀಡಿರುವ ಡೊನಾಲ್ಡ್ ಟ್ರಂಪ್, ಕೊರೋನಾಕ್ಕೆ ನಿಮ್ಮ ಜೀವನದಲ್ಲಿ ಪ್ರಬಲತೆ ಸಾಧಿಸಲು ಬಿಡಬೇಡಿ, ಜಾಗರೂಕತೆ ವಹಿಸಿ. ಈಗ ನಾನು ಕ್ಷೇಮವಾಗಿದ್ದೇನೆ, ಬಹುಶಃ ನನಗೆ ರೋಗನಿರೋಧಕ ಶಕ್ತಿ ಹೆಚಾಗಿದ್ದರಬಹುದು ಎಂದರು.

ಕಳೆದ 4 ದಿನಗಳ ಕಾಲ ಕೊರೋನಾ ಹಿನ್ನೆಲೆ ಆಸ್ಪತ್ರೆಯಲ್ಲಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್ ಮುಂದಿನ ಅಧ್ಯಕ್ಷೀಯ ಚರ್ಚೆ ಯಲ್ಲಿ ಡೆಮೆಕ್ರಾಟ್ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡನ್ ಅವರೊಂದಿಗೆ ಅಕ್ಟೋಬರ್ 15 ರಂದು ಸಭೆಯಲ್ಲಿ ಭಾಗ ವಹಿಸಲು ಇಚ್ಛಿಸಿದ್ದಾರೆ.

 
 
 
 
 
 
 
 
 
 
 

Leave a Reply