10889 ಮಸೀದಿಗಳಲ್ಲಿ ಲೌಡ್ ಸ್ಪೀಕರ್ ಬಳಸಲು ಸರಕಾರ ಹಸಿರು

ಬೆಂಗಳೂರು: ಕರ್ನಾಟಕದಲ್ಲಿ ಅನುಮತಿ ಇಲ್ಲದೆ ಲೌಡ್ ಸ್ಪೀಕರ್ ಬಳಸುವಂತಿಲ್ಲ ಎಂದು ಸರಕಾರ ನಿರ್ಬಂಧ ಹೇರಿತು.
ಇದೇ ವೇಳೆ ಆಜಾನ್ ವಿರುದ್ಧ ವಿರೋಧ ಕೇಳಿ ಬಂದ ಹಿನ್ನೆಲೆ ಲೌಡ್ ಸ್ಪೀಕರ್ ಗೆ ಬ್ರೇಕ್ ಹಾಕಲು ಸರಕಾರ ಮುಂದಾಗಿತ್ತು.ದೇವಾಲಯ ಮಸೀದಿ, ಚರ್ಚು ಗಳಿಗೆ ಪರವಾನಿಗೆ ನೀಡಲು ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು ಪರವಾನಿಗೆ ನೀಡುವ ಅಧಿಕಾರವನ್ನು ಸರಕಾರ ರಾಜ್ಯ ಪೊಲೀಸರಿಗೆ ವಹಿಸಿತ್ತು.
ಈ ಹಿನ್ನಲೆ ಹದಿನೇಳು ಸಾವಿರಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದು, ಆ ಪೈಕಿ ರಾಜ್ಯದೆಲ್ಲೆಡೆ 10,889 ಮಸೀದಿಗಳಿಗೆ ಲೌಡ್ ಸ್ಪೀಕರ್ ಬಳಸಲು ಅನುಮತಿ ನೀಡಲಾಗಿದೆ ಎಂದು ಆದೇಶ ಹೊರಡಿಸಿದೆ.ಈ ಅರ್ಜಿಗಳಿಗೆ ಸರಕಾರ ಎರಡು ವರ್ಷಗಳ ಅವಧಿಗೆ ಅನುಮತಿ ನೀಡಿ ಆದೇಶ ಹೊರಡಿಸಿದ್ದು , 450 ಶುಲ್ಕವನ್ನು ಪಡೆಯಲಾಗಿದೆ.
ಪರವಾನಿಗೆ ನೀಡುವ ಸಂದರ್ಭ ದಲ್ಲಿ ರಾಜ್ಯ ಸರಕಾರ ಕೆಲವು ನಿಯಮಾವಳಿಗಳನ್ನು ಕೂಡಾ ಜಾರಿಗೆ ತಂದಿದೆ.
 
 
 
 
 
 
 
 
 
 
 

Leave a Reply