ವಿವೇಕಾನಂದ ಯೋಗ ವಿಜ್ಞಾನ ಕೇಂದ್ರ ಉಡುಪಿ ಪುತ್ತೂರು ಶಾಖೆ ವತಿಯಿಂದ ಯೋಗ ಸಮ್ಮಿಲನ

ವಿವೇಕಾನಂದ ಯೋಗ ವಿಜ್ಞಾನ ಕೇಂದ್ರ ಪುತ್ತೂರು ಶಾಖೆಯ ಯೋಗಾರ್ತಿಗಳ ಯೋಗ ಸಮ್ಮಿಲನ ಕಾರ್ಯಕ್ರಮವು ಪುತ್ತೂರಿನ ಅಂಬೇಡ್ಕರ್ ಭವನದಲ್ಲಿ ಜರುಗಿತು. ವಿವೇಕಾನಂದ ಯೋಗ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಮತ್ತು ಯೋಗ ಗುರುಗಳು ಆದ ಶ್ರೀ ಪಿ ವಿ ಭಟ್ ಇವರು ಉಪಸ್ಥಿತರಿದ್ದು ಮಾತನಾಡಿ ಪ್ರಸಕ್ತ ಸನ್ನಿವೇಶನದಲ್ಲಿ ಯೋಗವು ಕೇವಲ ಒಂದು ಅಭ್ಯಾಸವಾಗಿರದೆ ನಮ್ಮ ಜೀವನದ ಒಂದು ಭಾಗವಾಗಬೇಕು, ಜೀವನಶೈಲಿಯಾಗಬೇಕು ಮತ್ತು ಆ ಮೂಲಕ ನಮ್ಮ ಆರೋಗ್ಯದ ರಕ್ಷಣೆ ಜೊತೆಗೆ ಇಡೀ ರಾಷ್ಟ್ರದ ಜನರ ಸ್ವಾಸ್ಥ್ಯ ಕಾಪಾಡುವಲ್ಲಿ ನೆರವಾಗುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.ಯೋಗ ಶಿಕ್ಷಕಿ ಶ್ರೀಮತಿ ಲೀಲಾ ಭಟ್ ಉಪಸ್ಥಿತರಿದ್ದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಭಾರತ ಸರ್ಕಾರದ ಆಯುಷ್ ಇಲಾಖೆ ವತಿಯಿಂದ ನಿರಂತರವಾಗಿ ಯೋಗದಲ್ಲಿ ತೊಡಗಿಸಿಕೊಳ್ಳುವವರಿಗಾಗಿ ಕೊಡ ಮಾಡುವ ವಿಶೇಷ ಪ್ರಮಾಣ ಪತ್ರ ಮತ್ತು ಪಾರಿತೋಷಕವನ್ನು ಯೋಗ ಗುರುಗಳಾದ ಪಿ ವಿ ಭಟ್ ಮತ್ತು ಲೀಲಾ ಭಟ್ ಎಲ್ಲಾ ಯೋಗಾರ್ತಿಗಳಿಗೆ ಪ್ರಧಾನ ಮಾಡಿದರು. ಯೋಗಾರ್ತಿಗಳಾದ ಅನುಪಮಾ, ಬೇಬಿ ಶೆಟ್ಟಿ ,ಕವಿತಾ,ಶಿವಾನಿ, ಪ್ರಮೀಳಾ,ಶಕುಂತಳಾ,ಕರುಣಾ, ಪ್ರೇಮ ರಾವ್, ಸುಭದ್ರ, ರಾಘು ಕೋಟ್ಯಾನ್, ಚೈತನ್ಯ ಎಂ ಜಿ ಮೊದಲಾದವರು ನಿರಂತರ ಯೋಗಾಭ್ಯಾಸದ ಪ್ರಯೋಜನದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು. ಪ್ರಾರಂಭದಲ್ಲಿ ಯೋಗಾರ್ಥಿ ರಾಜೇಶ್ವರಿ ಭಟ್ ಪ್ರಾರ್ಥಿಸಿದರು.ಹಿರಿಯ ಯೋಗಾರ್ತಿ ಶೀಲಾ ನಾಯಕ್ ಸ್ವಾಗತಿಸಿ ನಿರೂಪಿಸಿದರು. ಹಿರಿಯ ಯೋಗಾರ್ತಿ ಸುನೀತಾ ಚೈತನ್ಯ ವಂದನಾರ್ಪಣೆಗೈದರು .

 
 
 
 
 
 
 
 
 
 
 

Leave a Reply