ಆಭಾ ಕಾರ್ಡ್ ನೋಂದಣೆ, ಪೋಷಣ್ ಅಭಿಯಾನ ಕಾರ್ಯಗಾರ

ಮಣಿಪಾಲ : ಪ್ರಾಥಮಿಕ ಆರೋಗ್ಯ ಕೇಂದ್ರ ಮಲ್ಪೆ, ಸಮುದಾಯ ವೈದ್ಯಕಿಯ
ವಿಭಾಗ ಕೆ ಎಮ್ ಸಿ ಮಣಿಪಾಲ ಮತ್ತು ಶ್ರೀರಾಮ ಭಜನಾ ಮಂದಿರ ಕೊಳ, ಇವರ
ಸಂಯುಕ್ತಆಶ್ರಯದಲ್ಲಿ ಆಯುಶ್ಮಾನ್ ಭಾರತ್ ಹೆಲ್ತ್ ಅಕೌಂಟ್ ಕಾರ್ಡ್ (ಆಭಾ ಕಾರ್ಡ್) ನೋಂದಣೆ , ಕೋವಿಡ್ ಲಸಿಕೆ
ನೀಡಿಕೆ, ಪೌಷ್ಟಿಕ ಆಹಾರಗಳ ಬಗ್ಗೆ ತಿಳುವಳಿಕೆ ಅಭಿಯಾನರಕ್ತದೊತ್ತಡ,
ಮಧುಮೇಹ ತಪಾಸಣೆ ಹಾಗೂ ಚಿಕಿತ್ಸಾ ಕಾರ್ಯಗಾರ ಪಂಚಾವಟಿ ಸಭಾಂಗಣ ಬಾಲಕರ
ಭಜನಾ ಮಂದಿರ ಮಲ್ಪೆ ಇಲ್ಲಿ ನಡೆಯಿತು.ಸಮುದಾಯ ವೈದ್ಯಕಿಯ ವಿಭಾಗ ಕೆ ಎಮ್ ಸಿ
ಯ ಸಹಾಯಕ ಪ್ರಾದ್ಯಾಪಕಿ ಡಾ. ಅಫ್ರೋಜ್ ಅವರು ಕಾರ್ಯಕ್ರಮ ಉದ್ಘಾಟಿಸಿ
ಮಾತನಾಡುತ್ತ ಸರಕಾರದ ಮತ್ತು ಸಮುದಾಯ ಆರೋಗ್ಯ ಕೇಂದ್ರದ ಉಚಿತ
ಸೌಲಭ್ಯಗಳನ್ನು ಸದುಪಯೋಗಪಡೆದುಕೊಳ್ಳಿ ಎಂದು ಸಾರ್ವಜನಿಕರಲ್ಲಿ ಮನವಿ
ಮಾಡಿಕೊಂಡರು.ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಶ್ರೀ ಕರುಣಾಕರ
ಸಾಲಿಯಾನ್ , ಉಪಾಧ್ಯಕ್ಷಸತೀಶ್ ಅಮಿನ್ , ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಸಂದ್ಯಾ
ಲಕ್ಶಿ÷್ಮÃಶ್,
ಆರೋಗ್ಯ ಸೇವಾಕರ್ತೆ ಶ್ರೀಮತಿ ಸುರೇಖ, ಶ್ರೀಮತಿ ನಿಶಾ, ಶ್ರೀಮತಿ ಮೈತ್ರಿ ಹಾಗೂ
ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.ಸಮುದಾಯ ವೈದ್ಯಕಿಯ
ವಿಭಾಗದ ಶ್ರಿಮತಿ ನೀಲಾವತಿಯವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.೧೦೦ ಕ್ಕೂ
ಅಧಿಕ ನಾಗರಿಕರು ಪಾಲ್ಗೊಂಡು ಈ ಶಿಬಿರದ ಸದುಪಯೋಗ ಪಡೆದುಕೊಂಡರು

 
 
 
 
 
 
 
 
 
 
 

Leave a Reply