ಎಲ್.ಐ.ಸಿ. ಎಂಪ್ಲಾಯೀಸ್ ಕೊ-ಆಪರೇಟಿವ್ ಬ್ಯಾಂಕಿಗೆ ‘ಉತ್ತಮ ವೇತನದಾರರ ಸಹಕಾರಿ ಬ್ಯಾಂಕ್ ’ ಪ್ರಶಸ್ತಿ

ಎಲ್.ಐ.ಸಿ. ಎಂಪ್ಲಾಯೀಸ್ ಕೊ-ಆಪರೇಟಿವ್ ಬ್ಯಾಂಕ್ (ಲಿಕೋ ಬ್ಯಾಂಕ್) ಗೆ  ಇತೀಚಿಗೆ  ನೆಡೆದ  ರಾಷ್ಟ್ರೀಯ ಸಹಕಾರ ಬ್ಯಾಂಕುಗಳ ಶೃಂಗ ಸಭೆ 2023 ಮತ್ತು ಬ್ಯಾಂಕಿಂಗ್ ಫ್ರಾಂಟಿಯರ‍್ಸ ಇವರು ಗೋವಾದಲ್ಲಿ ಆಯೋಜಿಸಿದ್ದ “ಪ್ರಾಂಟಿಯರ‍್ಸ ಇನ್ ಕೋ-ಅಪರೇಟಿವ್  ಬ್ಯಾಂಕಿಂಗ್  ಅವಾರ್ಡ್ಸ್ 2023” 16ನೇ ವಾರ್ಷಿಕ ಸಮಾರಂಭದಲ್ಲಿ ಉತ್ತಮ ಅನುತ್ಪಾದಕ ಆಸ್ತಿ (NPA) ನಿರ್ವಹಣೆಯ ಬ್ಯಾಂಕ್ ಮತ್ತು ಸಂಪಾದಕರ ಆಯ್ಕೆಯ ಉತ್ತಮ ಮಹಿಳಾ ನಾಯಕತ್ವದ ಬ್ಯಾಂಕ್ ಎಂಬ ಶ್ರೇಣಿಗಳಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.


ಬ್ಯಾಂಕಿನ ಪರವಾಗಿ ಬ್ಯಾಂಕಿನ ಅಧ್ಯಕ್ಷರಾದ  ಕೆ. ಕೃಷ್ಣ ಹಾಗೂ ವೈಯಕ್ತಿಕ ನೆಲೆಯಲ್ಲಿ ಬ್ಯಾಂಕಿನ ಮುಖ್ಯ ಕಾರ‍್ಯನಿರ್ವಹಣಾಧಿಕಾರಿ ಶಶಿಕಲಾ ಪ್ರಶಸ್ತಿಯನ್ನು ಸ್ವೀಕರಿಸಿದರು.  ಪ್ರಶಸ್ತಿ ಪ್ರದಾನ ಸಮಾರೊಪದಲ್ಲಿ ಬ್ಯಾಂಕಿನ ನಿರ್ದೇಶಕರುಗಳಾದ  ದಿನೇಶ್ ಕುಮಾರ್ ಶೆಟ್ಟಿ, ಉಪೇಂದ್ರ ಪೈ ಹಾಗೂ  ಕೆ. ಶಿವಪ್ರಸಾದ್‌ ರವರು ಉಪಸ್ಥಿತರಿದ್ದರು.

ರಾಷ್ಟ ಮಟ್ಟದ ವೇತನದಾರರ ಸಹಕಾರ ಬ್ಯಾಂಕುಗಳ ವಿಭಾಗದಲ್ಲಿ ಅಸಾಧಾರಣ ಸಾಧನೆ ಮಾಡಿದ ಮತ್ತು ಎಲ್ಲರ ಹೆಗ್ಗಳಿಕೆಗೆ ಪಾತ್ರವಾದ ‘ಎಲ್.ಐ.ಸಿ. ಎಂಪ್ಲಾಯೀಸ್ ಕೊ-ಆಪರೇಟಿವ್ ಬ್ಯಾಂಕಿಗೆ’ 2023 ರಲ್ಲಿ ನೀಡಲ್ಪಟ್ಟ ಎರಡನೇ ಪ್ರತಿಷ್ಠಿತ ಪ್ರಶಸ್ತಿಯಾಗಿದ್ದು ಬ್ಯಾಂಕಿನ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾದಂ ತಾಗಿದೆ. ಇದು ಬ್ಯಾಂಕಿಗೂ ಮತ್ತು ಎಲ್ಲಾ ಗ್ರಾಹಕರಿಗೂ ಹೆಮ್ಮೆಯ ವಿಷಯವಾಗಿದೆ.
 
 
 
 
 
 
 
 
 
 
 

Leave a Reply