ಬಿವಿಟಿಯಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಅಂತರ್ಜಾಲ ಜಾಗೃತಿ ಕಾರ್ಯಕ್ರಮ

ಮಣಿಪಾಲ: ಭಾರತೀಯ ವಿಕಾಸ ಟ್ರಸ್ಟ್ ವತಿಯಿಂದ ಪರಿಸರ ದಿನಾಚರಣೆಯಂದು ಅಂತರ್ಜಾಲ ಜಾಗೃತಿ ಕಾರ್ಯಕ್ರಮ ನಡೆಯಿತು.  

ಪ್ಲಾಸ್ಟಿಕ್ ಕಡಿಮೆ ಬಳಸುವ ಬಗ್ಗೆ ಸರಕಾರದಿಂದ ಕಾನೂನು, ತಜ್ಞರಿಂದ ಎಚ್ಚರಿಕೆ, ಪರಿಸರ ಪ್ರೇಮಿಗಳಿಂದ ಜಾಗೃತಿ ಇವೆಲ್ಲ ನಡೆದುಹೋಗಿದೆ. ಆದರೂ ನಮ್ಮ ಪರಿಸರವನ್ನು ಅತೀ ಹೆಚ್ಚು ಹಾಳು ಮಾಡುತ್ತಿರುವ ಪ್ಲಾಸ್ಟಿಕ್ ಬಳಕೆ ಏನೂ ಕಮ್ಮಿಯಾಗಿಲ್ಲ. ಆದುದರಿಂದ ಪರಿಸರ ದಿನದಂದು ಪ್ರತಿಯೊಬ್ಬರೂ ವೈಯುಕ್ತಿಕವಾಗಿ ಕಡಿಮೆ ಬಳಸುವ ನಿರ್ಧಾರ ಕೈಗೊಳ್ಳಬೇಕು ಮತ್ತು ವೃತದಂತೆ ಪಾಲಿಸಬೇಕು ಎಂದು ಬೆಂಗಳೂರಿನ ಪರಿಸರ ತಜ್ಝೆ ಚೈತನ್ಯ ಸುಬ್ರಮಣ್ಯ ಅವರು ಕರೆ ಇತ್ತರು.  

ಅದೇ ರೀತಿ ಬಂಟ್ವಾಳ ತಾಲೂಕು ಕೆದ್ದಳಿಕೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಅಧ್ಯಾಪಕಿ ಉಮಾ ಗೌಡ ತಮ್ಮ ಗ್ರಾಮದಲ್ಲಿ ಬಿವಿಟಿ ಮತ್ತು ಸ್ಥಳೀಯ ಗ್ರಾ.ಪಂ ಜೊತೆ ಸೇರಿ ಕಳೆದ ವರ್ಷವಿಡೀ ನಡೆಸಿದ ಪರಿಸರಕ್ಕೆ ಪೂರಕವಾದ ಚಟುವಟಿಕೆಗಳ ಸ್ಥೂಲ ಚಿತ್ರಣವಿತ್ತರು. ಬಿವಿಟಿಯ ಮಾಸ್ಟರ್ ಟೈನರ್ ಸುಧೀರ್ ಕುಲಕರ್ಣಿ ಪ್ರಸ್ಥಾವನೆಗೈದರು. ಬಿವಿಟಿ ಡಾಕ್ಯುಮೆಂಟೇಶನಿಸ್ಟ್ ಭಾರತಿ ಹೆಗಡೆ ಸ್ವಾಗತಿಸಿದರು. ಮಾನವಸಂಪನ್ಮೂಲ ವಿಭಾಗದ ಸಿಬ್ಬಂದಿ ಗೀತಾ ರಾವ್ ವಂದಿಸಿದರು. ಬಿವಿಟಿ ಎಕೌಂಟ್ಸ್ ಮೆನೇಜರ್ ಶ್ರದ್ಧಾ ಹೇರ್ಳೆ ಕಾರ್ಯಕ್ರಮ ನಿರೂಪಿಸಿದರು. 

ಇದಕ್ಕೂ ಮೊದಲು ಬಿವಿಟಿ ಆವರಣದಲ್ಲಿ ಹಿರಿಯ ಸಲಹೆಗಾರ ಶ್ರೀಕಾಂತ ಹೊಳ್ಳ ಗಿಡಕ್ಕೆ ನೀರೆಯುವ ಮೂಲಕ ಸಾಂಕೇತಿಕವಾಗಿ ಪರಿಸರ ದಿನದ ಕಾರ್ಯಕ್ರಮಕ್ಕೆ ಚಾಲನೆಯಿತ್ತರು. ಹಿರಿಯ ವ್ಯವಸ್ಥಾಪಕ ಮನೋಹರ ಕಟ್ಗೇರಿ, ಸಿಬ್ಬಂದಿಗಳಾದ ಸುರೇಶ್ ಕುಲಾಲ್, ಸುಮಂತ್ ಆರ್ ಭಟ್, ಅರುಣ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply