ಶಿಕ್ಷಣ ಕಾಲೇಜಿನಲ್ಲಿ ರಂಗ ತರಬೇತಿ

ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಈಚೆಗೆ ತೃತೀಯ ಸೆಮಿಸ್ಟರ್ ನ ವಿದ್ಯಾರ್ಥಿ ಶಿಕ್ಷಕರಿಗಾಗಿ ಒಂದು ದಿನದ ರಂಗ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಭರವಸೆಯ ಯುವ ನಿರ್ದೇಶಕ ಮತ್ತು ಎಂಜಿಎಂ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಶ್ರೀ ಪ್ರಶಾಂತ್, ಉದ್ಯಾವರ ಶಿಬಿರವನ್ನು ನಡೆಸಿಕೊಟ್ಟರು. ರಂಗಭೂಮಿಯ ಇತಿಹಾಸ, ಬಗೆಬಗೆಯ ರಂಗಭೂಮಿಗಳು,ವಿವಿಧ ಪ್ರಕಾರದ ನಟನೆಗಳು, ನಾಟಕಕಾರರು, ಧ್ವನಿ ಹಾಗೂ ರಂಗಸಂಗೀತ ,ಶಿಕ್ಷಣದಲ್ಲಿ ರಂಗಭೂಮಿಯ ಮಹತ್ವ ಇತ್ಯಾದಿ ವಿಷಯಗಳನ್ನು ಸೋದಾಹರಣ ವಿವರಿಸಿ, ಪ್ರಾತ್ಯಕ್ಷಿಕೆಗಳನ್ನು ನೀಡಿ ವಿವಿಧ ರಂಗ ಕ್ರೀಡೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿದರು.ಕಾಲೇಜಿನ ಸಮನ್ವಯಾಧಿಕಾರಿ ಡಾ ಮಹಾಬಲೇಶ್ವರ ರಾವ್ ಶಿಬಿರದ ಉದ್ದೇಶವನ್ನು ತಿಳಿಸಿ ಸ್ವಾಗತ ಕೋರಿ ಸ್ಮರಣಿಕೆ ನೀಡಿದರು.ವಿದ್ಯಾರ್ಥಿಗಳಾದ ಸೌಮ್ಯಶ್ರೀ, ಪೃಥ್ವಿ, ಪ್ರತಿಭಾ, ಪದ್ಮಿನಿ, ಅಂಜು ಮೇರಿ, ಶಹನಾಜ್, ಗೊಲ್ಲ ಸುದರ್ಶನ ಮೊದಲಾದವರು ಶಿಬಿರದ ಬಗ್ಗೆ ತಮ್ಮ ಅನ್ನಿಸಿಕೆಗಳನ್ನು ಹಂಚಿಕೊಂಡರು.

 
 
 
 
 
 
 
 
 
 
 

Leave a Reply