ಯುಪಿಎಂಸಿ : ಸಾಮಾಜಿಕ ಜಾಗೃತಿ ಕುರಿತು ವಿಶೇಷೋಪನ್ಯಾಸ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಸಾಮಾಜಿಕ ಜಾಲತಾಣಗಳ ಬಗೆಗಿನ ಜಾಗೃತಿ ಹಾಗೂ ಮಾದಕ ದ್ರವ್ಯ ವ್ಯಸನಗಳ ದುಷ್ಪರಿಣಾಮಗಳ ಕುರಿತಾದ ವಿಶೇಷೋಪನ್ಯಾಸವು ಏಪ್ರಿಲ್ 2 ರಂದು ಕಾಲೇಜಿನ ಸಭಾಭವನದಲ್ಲಿ ಜರಗಿತು.

ಉಡುಪಿ ಎ.ವಿ.ಬಾಳಿಗ ಆಸ್ಪತ್ರೆಯ ಆಡಳಿತಾಧಿಕಾರಿ ಹಾಗೂ ಆಪ್ತ ಸಲಹೆಗಾರರಾದ ಶ್ರೀಮತಿ ಸೌಜನ್ಯ ಶೆಟ್ಟಿಯವರು ಈ ಉಪನ್ಯಾಸ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸಾಮಾಜಿಕ ಜಾಲತಾಣದ ಮೂಲಕ ಹದಿಹರೆಯದ ಮಕ್ಕಳು ಪ್ರೀತಿ ಪ್ರೇಮಗಳಿಗೆ ಬಲಿಯಾಗಿ ಅನುಭವಿಸುವ ತೊಂದರೆಗಳನ್ನು ವಿವರಿಸುವುದರ ಜೊತೆಗೆ ಕೃತಕ ಬುದ್ಧಿಮತ್ತೆಯನ್ನು ದುರ್ಬಳಕೆ ಮಾಡಿಕೊಳ್ಳುವುದರ ಬಗ್ಗೆ ವಿವಿರಿಸುತ್ತ ಇಂದಿನ ಯುವಜನರ ಮೇಲೆ ಡ್ರಗ್ಸ್ ಮಾಫಿಯಾದಿಂದಾಗುವ ಭಯಾನಕ ಪರಿಣಾಮಗಳನ್ನು ವಿವರಿಸಿ ಅದರಿಂದ ದೂರವಿರಲು ವಿದ್ಯಾರ್ಥಿಗಳಿಗೆ ಕರೆಯಿತ್ತರು. 

ಕಾಲೇಜಿ‌ನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ಅಧ್ಯಕ್ಷರಾಗಿದ್ದರು, ಎನ್.ಎಸ್.ಎಸ್ ಅಧಿಕಾರಿ ಶ್ರೀ ರಾಜೇಶ್ ಕುಮಾರ್ ಪ್ರಾಸ್ತಾವಿಸಿ ಸ್ವಾಗತಿಸಿದರು, ಸಹ ಯೋಜನಾಧಿಕಾರಿ ಶ್ರೀ ಚಂದ್ರಶೇಖರ್ ಧನ್ಯವಾದವಿತ್ತರು.

 
 
 
 
 
 
 
 
 
 
 

Leave a Reply