ಕುಂಜಾರುಗಿರಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ

ಕುಂಜಾರುಗಿರಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ, ಚಾತುರ್ಮಾಸ್ಯ ವೃತ ಸಂಕಲ್ಪಿತರಾಗಿರುವ ಶ್ರೀ ಅದಮಾರು ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಇಂದು ಧ್ವಜಾರೋಹಣವನ್ನು ಮಾಡಿ, ನಮ್ಮ ದೇಶದ ಸಂಸ್ಕೃತಿಯು ನಾಶವಾಗುತ್ತಿದ್ದು ಅದನ್ನು ನಾವು ಬೆಳೆಸಿ ಮುಂದುವರಿಸಿಕೊಂಡು ಹೋಗುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ.ಇತ್ತೀಚಿನ ಬೆಳವಣಿಗೆಯಲ್ಲಿ ಶ್ರೇಷ್ಠ ನಾಯಕನ ಮುಂದಾಳತ್ವದಲ್ಲಿ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಣೆಗೊಳ್ಳುತ್ತಿರುವುದು ಸಂತಸವಾಗಿದೆ.ಹೀಗೆಯೇ ದೇಶವು ಮುಂದುವರಿಯುವುದರೊಂದಿಗೆ ನಮ್ಮ ಸಂಸ್ಕೃತಿಯನ್ನು ಬೆಳೆಸಲು ಕೈ ಜೋಡಿಸೋಣ ಎಂದು ಸಂದೇಶ ನೀಡಿದರು.
ಮುಖ್ಯ ಅಥಿತಿಗಳಾಗಿ ಆರ್.ಎಸ್.ಎಸ್ ನ ಪ್ರಮುಖರಾದ ಪಾಂಡುರಂಗ ಶ್ಯಾನಭಾಗ್ ರವರು ಸ್ವಾತಂತ್ರ್ಯಹೋರಾಟದ ದಾರಿ ಹಾಗೂ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದವರ ಬಗ್ಗೆ ತಿಳಿಸಿ ಮುಂದಿನ ಪೀಳಿಗೆಗೆ ದೇಶಭಕ್ತಿಯಬಗ್ಗೆ ತಿಳಿಸಿದರು.
ದೇವಸ್ಥಾನದ ಅರ್ಚಕರಾದ ರಾಘವೇಂದ್ರ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು, ದೇವಸ್ಥಾನದ ವ್ಯವಸ್ಥಾಪಕರಾದ ರಾಜೇಂದ್ರ ರಾವ್ ಧನ್ಯವಾದ ನೀಡಿದರು.

 
 
 
 
 
 
 
 
 
 
 

Leave a Reply