ಸರಕಾರಿ ಪದವಿಪೂರ್ವ ಕಾಲೇಜು ತೆಂಕನಿಡಿಯೂರಿನಲ್ಲಿ “ಆಜಾದಿ ಕಾ ಅಮೃತ ಮಹೋತ್ಸವ”

ಸರಕಾರಿ ಪದವಿಪೂರ್ವ ಕಾಲೇಜು ತೆಂಕನಿಡಿಯೂರಿನಲ್ಲಿ “ಆಜಾದಿ ಕಾ ಅಮೃತ ಮಹೋತ್ಸವ”ವನ್ನು ಪದವಿಪೂರ್ವ ಕಾಲೇಜು ವಿಭಾಗ ಹಾಗೂ ಪ್ರೌಢಶಾಲಾ ವಿಭಾಗ ಜಂಟಿಯಾಗಿ 15.08.2022ರಂದು. ವ್ಯವಸ್ಥಿತವಾಗಿ ನೆಡೆಸಲಾಯಿತು. ಸರಕಾರದ ಆದೇಶದ ಪ್ರಕಾರ ಮೂರು ದಿನ ಧ್ವಜಾರೋಹಣ ನೆಡೆಸಲಾಯಿತು. ಇಂದು ಧ್ವಜಾರೋಹಣ ಕಾರ್ಯಕ್ರಮವನ್ನು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ವಿಶ್ವನಾಥ ಕರಬ ಇವರು ನೆರವೇರಿಸಿ ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ಪಾಲಿಸುವಂತೆ ಕರೆ ನೀಡಿದರು. ನಂತರ ಪದವಿಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಭಾಷಣ ಮತ್ತು ದೇಶಭಕ್ತಿಗೇತೆ ಕಾರ್ಯಕ್ರಮ ನೆಡೆಯಿತು. ತದನಂತರ ವಿದ್ಯಾರ್ಥಿಗಳ ಪಥಸಂಚಲನ ಕೊನೆಯಲ್ಲಿ ಸಾಮೂಹಿಕ ವ್ಯಾಯಾಮ ನೆಡೆಯಿತು. ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ವಿಶ್ವನಾಥ ಕರಬ ಹಾಗೂ ಶ್ರೀಕೃಷ್ಣ ಮಠ ಉಡುಪಿ ಇವರು ಸಿಹಿತಿಂಡಿ ವ್ಯವಸ್ಥೆ ಮಾಡಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳು , ಉಪನ್ಯಾಸಕ ವೃಂದ ಹಾಗೂ ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕರು ಸಹಶಿಕ್ಷಕವೃಂದ ಮತ್ತು ಸಿಬ್ಬಂದಿಗಳು ಹಾಜರಿದ್ದರು.

Leave a Reply