ಡಾ. ಅಂಬೇಡ್ಕರ್ ಯುವಕ ಮಂಡಲ ಮತ್ತು ಮಹಿಳಾ ಮಂಡಲ ಸ್ವತಂತ್ರ್ಯ ಅಮೃತ ಮಹೋತ್ಸವ ಸಂಭ್ರಮ

75ನೇ ಸ್ವತಂತ್ರೋತ್ಸವವನ್ನು ಅಂಬೇಡ್ಕರ್ ಯುವಕ ಮಂಡಲ ಮತ್ತು ಮಹಿಳಾ ಮಂಡಲದಲ್ಲಿ ವಿಶಿಷ್ಟ ವಾಗಿ ಬೆಳಿಗ್ಗೆ 8.30ಕ್ಕೆ ಅಂಬೇಡ್ಕರ್ ಯುವಕ ಮಂಡಲದಿಂದ ಮದ್ವನಗರ ಜಂಕ್ಷನ್ ವರೆಗೆ ತ್ರಿವರ್ಣ ಧ್ವಜದೊಂದಿಗೆ ಜಂಟಿ ಸಂಸ್ಥೆಯ ಪದಾಧಿಕಾರಿಗಳು ಹುತಾತ್ಮರಾದ ನಾಯಕರಿಗೆ ಘೋಷಣೆ ಹಾಕುತ್ತ ಪಥಸಂಚಲನ ಮಾಡಿ ಯುವಕ ಮಂಡಲದ ವಠಾರ ಬಂದು ತದನಂತರ ನಡೆದ ಧ್ವಜಾರೋಹಣ ಕಾರ್ಯಕ್ರಮವನ್ನು ಆದಿಉಡುಪಿ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಸನ್ಮಾನ್ಯ ಶ್ರೀಮತಿ ಕವಿತಾ ಟೀಚರ್ ಧ್ವಜಾರೋಹಣವನ್ನು ಮಾಡಿ ಸ್ವಾತಂತ್ರ್ಯ ಪೂರ್ವ ಹಾಗೂ ಪ್ರಸ್ತುತ ದೇಶದ ಪ್ರಗತಿ ಬಗ್ಗೆ ಪ್ರಜೆಗಳಾದ ನಮ್ಮೆಲ್ಲರ ಜವಾಬ್ದಾರಿ ಬಗ್ಗೆ ತಿಳಿ ಹೇಳಿ, ಸ್ವಾತಂತ್ರ್ಯ ಅಮೃತ ಮಹೋತ್ಸವ ಶುಭ ಸಂದೇಶವನ್ನು ನೀಡಿದರು.
ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ವೈದ್ಯಕೀಯ ನೆರವು ಹಾಗೂ 75 ವರ್ಷ ಹಿರಿಯರಾದ ಅಣ್ಣಪ್ಪ ಬೆಲ್ಚಡ, ಕೃಷಿಕರಾದ ಶೇಖರ್ ಶೆಟ್ಟಿ ಮಜಲುಮನೆ ಮತ್ತು ಶ್ರೀಮತಿ ಗ್ಲ್ಯಾಡಿಯವರನ್ನು ಗೌರವಿಸಸಲಾಯಿತು.
ನಿವೃತ್ತ ಮುಖ್ಯ ಶಿಕ್ಷಕರಾದ ಸುಂದರ್ ಮಾಸ್ಟರ್ ಹಾಗೂ ಅಕ್ಕಣಿ ಟೀಚರ್ ಸ್ವಾತಂತ್ರ್ಯ ದಿನಾಚರಣೆಯ ಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ ಯುವಕಮಂಡಲದ ಅಧ್ಯಕ್ಷರಾದ ಸುರೇಶ್ ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ಜಾನಕಿ ಶಂಕರ್ ದಾಸ್, ಉಪಾಧ್ಯಕ್ಷರಾದ ಸುಧಾಕರ್, ಗೋಪಾಲ್ ತೊಟ್ಟಂ, ಮೋಹನ್, ಸದಾನಂದ ಚೆನ್ನಂಗಡಿ, ಜಗನ್ನಾಥ, ಸತೀಶ್, ಹರೀಶ್, ಶ್ರೀಕಾಂತ್, ಹರಿಶ್ಚಂದ್ರ, ಸುಜಾತ, ಮಂಜುಳ, ಬೇಬಿ, ಮತ್ತಿತರರು ಉಪಸ್ಥಿತರಿದ್ದರು.
ಸುರೇಂದ್ರ ಕೋಟ್ಯಾನ್ ಸ್ವಾಗತಿಸಿ, ಶಂಕರ್ ದಾಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಸುಧಾಕರ ಧನ್ಯವಾದ ನೀಡಿದರು.

 
 
 
 
 
 
 
 
 
 
 

Leave a Reply