ಕೊಡವೂರು: ಕಸದ ಕೊಂಪೆ ಇದೀಗ ಸುಂದರ ಉದ್ಯಾನವನ.

ಮಲ್ಪೆಯಿಂದ ಕೊಡವೂರು ಹೋಗುವ ಪ್ರಮುಖ ರಸ್ತೆಯ ಎರಡೂ ಬದಿಯಲ್ಲಿ ಕಸ ನಿರಂತರವಾಗಿ ಸುರಿಯುತ್ತಿದ್ದ ಪರಿಣಾಮ, ಆ ರಸ್ತೆಯಲ್ಲಿ ಸಂಚರಿಸುವಾಗ ದುರ್ವಾಸನೆ ಪರಿಣಾಮ ಜನರು ಬಹಳಷ್ಟು ತೊಂದರೆಗೆ ಒಳಗಾಗಿದ್ದರು.ಅಲ್ಲಿ ವಾಸಿಸುತ್ತಿದ್ದವರಿಗೆ ಸಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿದ್ದರು. ಇಲ್ಲಿ ಕೇವಲ ಕಸ ಅಲ್ಲದೆ ಕೊಳೆತ ಮೀನು, ಮಾಂಸ ಹೊಟೇಲ್ ತ್ಯಾಜ ಹಾಕುತ್ತಿದ್ದ ಪರಿಣಾಮ ಪರಿಸರ ಮಲೀನವಾಗಿತ್ತು.
ಇಂತಹ ಪ್ರದೇಶವನ್ನು ಉಡುಪಿ ನಗರಸಭೆಯವರು ಸ್ವಚ್ಚ ಭಾರತ ಯೋಜನೆಯಡಿ ಸುಂದರವಾದ ಮಿನಿ ಉದ್ಯಾನವನ್ನಾಗಿ ಪರಿವತಿ೯ಸಿದ್ದಾರೆ..

ಇದು ಉತ್ತಮವಾದ ಯೋಜನೆಯಾಗಿದ್ದು ಜನರು ಈ ರೀತಿಯ ಉತ್ತಮ ಉದ್ಯಾನವನ ನಿಮಾ೯ಣ ಮಾಡಿದಾಗ ಕಸ ಹಾಕುವವರು ಕಡಿಮೆಯಾಗಬಹುದು ಎಂಬ ದೃಷ್ಟಿಯಲ್ಲಿ ಕಾಪು ದೀಪ ಸ್ತಂಬ ಸಹಿತ ಉಪಯೋಗವಿಲ್ಲದ ಪ್ಲಾಸ್ಟಿಕ್ ಬಾಟಲ್ ಹಾಳಾದ ಟಯರ್ ನಿಂದ ಮಾಡಿದ ಕಲಾಕೃತಿಗಳನ್ನು ರಚಿಸ ಲಾಗಿದೆ. ಈ ರೀತಿಯ ಮಾದರಿಗಳನ್ನು ಎಲ್ಲಾ ಕಡೆ ಮಾಡಿದ್ದಲ್ಲಿ ಕಸ ಹಾಕುವುದು ಕಡಿಮೆಯಾಗ ಬಹುದು. ಶಾಸಕ ಯಶಪಾಲ್ ಸುವರ್ಣ ನಗರಸಭೆಯ ಪರಿಸರ ಕಾಳಜಿ ಬಗ್ಗೆ ಶ್ಲಾಘಿಸಿದ್ದಾರೆ 

ಪ್ರಾಣಿ ಪಕ್ಷಿಗಳು ಪರಿಸರ ನಾಶವಾದರೆ ನಾವು ನಾಶವಾಗುತ್ತೆವೆ ಎಂದು ಅರಿತು ಪರಿಸರ ಬೆಳೆಸುವಲ್ಲಿ ಅವುಗಳು ಯೋಗದಾನ ನೀಡುತ್ತಿವೆ. ಆದರೆ ಮನುಷ್ಯ ಇನ್ನು ಬುದ್ಧಿ ಕಲಿಯದೆ, ಈ ರೀತಿಯ ಪರಿಸರ ನಾಶದ ಕಾಯ೯ ನಿರಂತರವಾಗಿ ಮಾಡುತ್ತಿರುವುದು ದುಃಖಕರ. ಪರಿಸರ ಉಳಿಸೋಣ ದೇಶ ರಕ್ಷಿಸೋಣ.

~ ರಾಘವೇಂದ್ರ ಪ್ರಭು,ಕವಾ೯ಲು 

 
 
 
 
 
 
 
 
 
 
 

Leave a Reply