ಕನ್ನಡ ಶಾಲೆ ಉಳಿಸಿ ಬೆಳೆಸಿ ಕಾರ್ಯಕ್ರಮದಲ್ಲಿ ದೇಶದಲ್ಲಿ ಮಾದರಿಯಾದ ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ

ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ ಹಾಗೂ ಅಪೂರ್ವ ಯುವಕ ಮಂಡಲ ಪುತ್ತೂರು ಇವರ ಸಹಕಾರದಿಂದ 19 ನೇ ಸರಕಾರಿ ಶಾಲೆಯಾದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸುಬ್ರಮಣ್ಯ ಹಿಲ್ ಉಡುಪಿ ಶಾಲೆಯ ಎಲ್ಲಾ ಮಕ್ಕಳಿಗೆ ಉಚಿತ ಅಪಘಾತ ವಿಮೆ ವಿತರಣಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಬದಲ್ಲಿ ನಗರ ಸಭಾ ಸದಸ್ಯರಾದ ವಿಜಯ್ ಕೊಡವೂರು ದೀಪ ಬೆಳಗಿಸಿ ಉದ್ಘಾಟಿಸಿ , ಸಂಸ್ಕಾರಯುತವಾದ ಶಿಕ್ಷಣ ದೊರಕಿದ್ದು ಇಂಥಹ ಕನ್ನಡ ಶಾಲೆಗಳಲ್ಲಿ ದೊರಕಿದ್ದು ದೇವತಾ ಮನುಷ್ಯನಾದ ಶ್ರೀರಾಮಚಂದ್ರನ ,ಸ್ವಾಮಿ ವಿವೇಕಾನಂದರ ತ್ಯಾಗ ಮತ್ತು ಸದೃಢ ಮಾರ್ಗದರ್ಶನ ಸಾಕ್ಷಿ ಎಂದು ಮಕ್ಕಳಿಗೆ ವಿವರಿಸಿದ್ದರು. ಹಾಗೆಯೇ ಮುಖ್ಯ ಕೇಂದ್ರ ಬಿಂದುವಾಗಿರುವ ಸಂಪನ್ಮೂಲ ಜೆಸಿಐ ವಲಯ ಅಧಿಕಾರಿಯಾಗಿರುವ ಸ್ಟಾರ್ ಹೆಲ್ತ್ ಇನ್ಸೂರೆನ್ಸ್ ಇದರ ಸೀನಿಯರ್ ಮ್ಯಾನೇಜರ್ – ಮಾರುಕಟ್ಟೆ ವಿಭಾಗ ಉದಯ್ ನಾಯ್ಕ್, ಮಾತನಾಡಿ ಈ ಶಾಲೆಗೆ ಸುಮಾರು 16 ಲಕ್ಷದ 32 ಸಾವಿರದ ವಿಮಾ ಮೊತ್ತ ನೀಡಲು ಸಹಕಾರಿಯಾದ ಅಪೂರ್ವ ಯುವಕ ಮಂಡಲ ಪುತ್ತೂರು ಇವರಿಗೆ ಅಭಿನಂದಿಸಿ ಇದು ಅತ್ಯುತ್ತಮ ಸಮಾಜಮುಖಿ ಕಾರ್ಯಕ್ರಮ ಪ್ರತಿ ವರ್ಷ ನಿಮ್ಮ ಸಹಕಾರ ಇರಲಿ ವಿಮೆಯ ಸಂಪೂರ್ಣ ಮಾಹಿತಿಯನ್ನು ಹೇಳುತ್ತಾ ಆರೋಗ್ಯ ವಿಮೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವಿವರಿಸಿದ್ದರು ۔ ಕನ್ನಡ ಶಾಲೆ ಉಳಿಸಿ ಬೆಳೆಸಿ ಕಾರ್ಯಕ್ರಮದಲ್ಲಿ ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ ದೇಶದಲ್ಲಿ ಮಾದರಿಯಾಗಲಿ ಎಂದರು .

ಈ ಶಾಲೆಯ ಹಳೆ ವಿದ್ಯಾರ್ಥಿಯು ಪೋಷಕರು ಆಗಿರುವ ಶ್ರೀ ಪುರಂದರ ಶೆಟ್ಟಿ ಎಸ್. ಅವರು ಇಂತಹ ಕೆಲಸಗಳಿಗೆ ದುಡಿಮೆಯ ಒಂದು ಅಂಶವನ್ನು ಮೀಸಲಾಗಿಡುತ್ತಿದ್ದೇ ಇದರಿಂದ ಜೀವನದಲ್ಲಿ ಬಹಳ ಖುಷಿ ಮತ್ತು ತೃಪ್ತಿ ಇತ್ತು ಎಂದರು . ಈ ವಿಮೆಗೆ ಧನಸಹಾಯ ನೀಡಿರುವ ಅಪೂರ್ವ ಯುವಕ ಮಂಡಲದ ಪುತ್ತೂರು ಇದರ ಅಧ್ಯಕ್ಷರಾದ ಅಶೋಕ್ ಜತ್ತನ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು , ಡಿ.ಎಂ.ಸಿ ಅಧ್ಯಕ್ಷರಾದ ಸುಭಾಶಿನಿ, ಕಿಶೋರ್ ಅಂಬಾಗಿಲು , ವಿಜಯ ಪೂಜಾರಿ, ಪ್ರಸಿದ್ ಆಚಾರ್ಯ , ಶಾಲಾ ಸಹ ಶಿಕ್ಷಕಿ ನಿಶಾವತಿ ಹಾಗೂ ಪೋಷಕರು ಮಕ್ಕಳು ಉಪಸ್ಥಿತರಿದ್ದರು ಮಕ್ಕಳ ದಿನಾಚರಣೆ ಪ್ರಯುಕ್ತ ಸಿಹಿ ತಿಂಡಿಗಳನ್ನು ಮಕ್ಕಳಿಗೆ ನೀಡಲಾಯಿತು. ಶಾಲಾ ಮುಖ್ಯೋಪಾಧ್ಯಾಯ ರಾದ ಸುಜಾತ, ಸ್ವಾಗತಿಸಿ ವಂದಿಸಿ , ನಿರೂಪಿಸಿದರು ۔

 
 
 
 
 
 
 
 
 
 
 

Leave a Reply