Janardhan Kodavoor/ Team KaravaliXpress
25.6 C
Udupi
Saturday, December 3, 2022
Sathyanatha Stores Brahmavara

2022ರ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ಪ್ರದಾನ ಸಮಾರಂಭ

ಉಡುಪಿಯ ಯಕ್ಷಗಾನ ಕಲಾರಂಗದ ಪ್ರಶಸ್ತಿ ಪ್ರದಾನ ಸಮಾರಂಭವು ಮಂಗಳೂರಿನ ಪುರಭವನದಲ್ಲಿ ನವಂಬರ್ 13ರಂದು ಜರಗಿತು. ದಿನಪೂರ್ತಿ ನಡೆದ ಈ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಡಾ. ಎಂ. ಪ್ರಭಾಕರ ಜೋಶಿಯವರು ಕಲಾರಂಗ ತನ್ನ ಕಾರ್ಯಚಟುವಟಿಕೆಗಳಿಂದ ಸಾಂಸ್ಕøತಿಕ ಸಾಮಾಜಿಕ ಸಂಘಟನೆಗೆ ಮಾದರಿಯಾಗಿದೆ ಎಂದರು. ಡಾ. ಪದ್ಮನಾಭ ಕಾಮತ್‍ರ ಅಧ್ಯಕ್ಷತೆಯಲ್ಲಿ ಜರಗಿದ ಈ ಸಮಾರಂಭದಲ್ಲಿ ಪ್ರೊ. ಎಂ. ಎಲ್. ಸಾಮಗ, ಶ್ರೀ ಕೃಷ್ಣಪ್ರಸಾದ್ ಅಡ್ಯಂತಾಯ, ಶ್ರೀ ಕದ್ರಿ ನವನೀತ ಶೆಟ್ಟಿ ಅಭ್ಯಾಗತರಾಗಿ ಭಾಗವಹಿಸಿದ್ದರು.  

ಪೂರ್ವಾಹ್ನ ಮೊದಲ ಗೋಷ್ಠಿಯಾಗಿ ‘ಇತಿಹಾಸಕ್ಕೆ ಸಂದುಹೋದ ತೆಂಕುತಿಟ್ಟಿನ ಯಕ್ಷಗಾನ ಮೇಳಗಳು’ ಎಂಬ ವಿಷಯದ ಕುರಿತು ವಿಚಾರ ಸಂಕಿರಣ ಜರಗಿತು. ಬಳಿಕ ಸಂಘಟನೆಗಳ ಕುರಿತ ಅನುಭವವನ್ನು ಆಯ್ದ ಸಂಘಟಕರು ಮಾತುಕತೆಯಲ್ಲಿ ಹಂಚಿಕೊಂಡರು.

ಸಂಜೆ 4.00ಕ್ಕೆ ಸಂಪನ್ನಗೊಂಡ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಿ ನೀಡಿದ ಅನುಗ್ರಹ ಸಂದೇಶದಲ್ಲಿ ಸಾಮಾಜಿಕ-ಸಾಂಸ್ಕøತಿಕ ಕಳಕಳಿಗೆ ಸ್ಪಂದಿಸುವುದೇ ಭಗವಂತನಿಗೆ ಸಲ್ಲಿಸುವ ಪೂಜೆ ಎಂದು ನುಡಿದರು. ಲೋಕಸೇವಾ ಆಯೋಗದ ನಿವೃತ್ತ ಅಧ್ಯಕ್ಷ ಡಾ. ಟಿ ಶ್ಯಾಮ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿಯ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ಸಂಸ್ಥೆಯ ವೆಬ್‍ಸೈಟ್ www.yakshaganakalaranga.com ಲೋಕಾರ್ಪಣೆಗೈದರು. ಪ್ರಶಸ್ತಿ ಪುರಸ್ಕøತ ಕಲಾವಿದರ ಕುರಿತ ಸಾಕ್ಷ್ಯಚಿತ್ರವನ್ನು ಶ್ರೀ ಹರಿಕೃಷ್ಣ ಪುನರೂರು ಅನಾವರಣಗೊಳಿಸಿದರು. ಮುಖ್ಯ ಅಭ್ಯಾಗತರಾಗಿ ಮಂಗಳೂರಿನ ಶಾಸಕರಾದ ಶ್ರೀ ವೇದವ್ಯಾಸ ಕಾಮತ್, ಪ್ರೊ. ಎಂ. ಬಿ. ಪುರಾಣಿಕ್, ಶ್ರೀ ಪ್ರದೀಪ ಕುಮಾರ್ ಕಲ್ಕೂರ, ಪ್ರೊ. ಜಿ. ಆರ್. ರೈ, ಶ್ರೀ ಪಿ. ಗೋಕುಲನಾಥ ಪ್ರಭು, ಡಾ. ಜೆ. ಎನ್. ಭಟ್, ಶ್ರೀ ಲೀಲಾಕ್ಷ ಕರ್ಕೆರ, ಶ್ರೀ ಪಣಂಬೂರು ವಾಸುದೇವ ಐತಾಳ್ ಮತ್ತು ಸಿಎ ಶಿವಾನಂದ ಪೈ ಭಾಗವಹಿಸಿದ್ದರು. ನಿವೃತ್ತ ರಾಜ್ಯಪಾಲ ಯು. ಪದ್ಮನಾಭ ಆಚಾರ್ಯ, ಯು. ವಿಶ್ವನಾಥ ಶೆಣೈ, ಸಂಸ್ಥೆಯ ಉಪಾಧ್ಯಕ್ಷರುಗಳಾದ ಪಿ.ಕಿಶನ್ ಹೆಗ್ಡೆ ಹಾಗೂ ವಿ.ಜಿ. ಶೆಟ್ಟಿ ಉಪಸ್ಥಿತರಿದ್ದರು. ಶ್ರೀ ವಿಶ್ವೇಶತೀರ್ಥ ಪ್ರಶಸ್ತಿಯನ್ನು ಉಪ್ಪಿನಕುದ್ರು ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ತಂಡಕ್ಕೆ ನೀಡಲಾಯಿತು. ವಿವಿಧ ಗಣ್ಯರ ಸ್ಮರಣಾರ್ಥ-ಗೌರವಾರ್ಥ ನೀಡುವ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಗಳನ್ನು ಡಿ. ಮನೋಹರ್ ಕುಮಾರ್, ಕೃಷ್ಣಸ್ವಾಮಿ ಜೋಯಿಸ, ಮಲವಳ್ಳಿ ನಾರಾಯಣ ಭಟ್,ಅಣ್ಣಪ್ಪ ಕುಲಾಲ್ ನೀರ್ಜಡ್ಡು, ರಾಮಜೋಗಿ ಜೋಡುಕಲ್ಲು, ಮುಂಡ್ಕೂರು ಕೃಷ್ಣ ಶೆಟ್ಟಿ, ಉಮೇಶ್ ಭಟ್ ಬಾಡ, ಐರ್‍ಬೈಲ್ ಆನಂದ ಶೆಟ್ಟಿ, ಮಹಮ್ಮದ್ ಗೌಸ್, ಜೋಗು ಕುಲಾಲ್, ವೆಂಕಪ್ಪ ಆಚಾರ್, ಸಜಿಪ ಚೆನ್ನಪ್ಪ ಗೌಡ, ಲಕ್ಷ್ಮೀಶ ಅಮ್ಮಣ್ಣಾಯ, ವಿದ್ವಾನ್ ಗಣಪತಿ ಭಟ್, ಕೂಟೇಲು ಬಾಲಕೃಷ್ಣ ಭಟ್, ಮಾರ್ವಿ ನಿತ್ಯಾನಂದ ಹೆಬ್ಬಾರ್, ಯು. ಆನಂದ್ ಮತ್ತು ಶಿವರಾಮ ಪಣಂಬೂರು ಸ್ವೀಕರಿಸಿದರು. ಸಂಸ್ಥೆಯ ಕಾರ್ಯಕರ್ತರಿಗೆ ನೀಡುವ ಯಕ್ಷಚೇತನ ಪ್ರಶಸ್ತಿಯನ್ನು ಎಚ್. ಎನ್. ಶೃಂಗೇಶ್ವರ್‍ರಿಗೆ ಪ್ರದಾನ ಮಾಡಲಾಯಿತು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಎ. ನಟರಾಜ ಉಪಾಧ್ಯಾಯ ವಂದಿಸಿದರು. ಪ್ರೊ. ನಾರಾಯಣ ಎಂ. ಹೆಗಡೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯದರ್ಶಿ ಮುರಲಿ ಕಡೆಕಾರ್ ಸಂಸ್ಥೆಯ ಕುರಿತ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಡಾ. ಎಂ. ಪ್ರಭಾಕರ ಜೋಶಿ ಹಾಗೂ ಸರಪಾಡಿ ಅಶೋಕ್ ಶೆಟ್ಟಿಯವರನ್ನು ಗೌರವಿಸಲಾಯಿತು. ಪ್ರಶಸ್ತಿ ಪ್ರದಾನ ಸಮಾರಂಭದ ಪೂರ್ವದಲ್ಲಿ ಅಪರಾಹ್ನ 2.00 ರಿಂದ ತೆಂಕುತಿಟ್ಟಿನ ಯಕ್ಷಗಾನ ರೂಪಕ ‘ಶ್ರೀ ಮನೋಹರ ಸ್ವಾಮಿ ಪರಾಕು’ ಮತ್ತು ಸಂಜೆ 6.00 ರಿಂದ ಬಡಗುತಿಟ್ಟಿನ ಯಕ್ಷಗಾನ ‘ಚಕ್ರಚಂಡಿಕೆ’ ಯಶಸ್ವಿಯಾಗಿ ಪ್ರದರ್ಶನಗೊಂಡವು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!