“ನಮ್ಮನಿ ಮಗು” ಮಕ್ಕಳ ಫೋಟೋ ಸ್ಪರ್ಧೆಯ ಬಹುಮಾನ ವಿತರಣೆ

ರೋಟರಿ ಬ್ರಹ್ಮಾವರ ಹಾಗೂ SKPA ಬ್ರಹ್ಮಾವರ ವಲಯದ
ವತಿಯಿಂದ
ಮಕ್ಕಳ ದಿನಾಚರಣೆಯ ಪ್ರಯುಕ್ತ “ನಮ್ಮನಿ ಮಗು” ಮಕ್ಕಳ ಫೋಟೋ ಸ್ಪರ್ಧೆಯ ಬಹುಮಾನ ವಿತರಣೆ ರೋಟರಿ ಸಭಾಭವನದಲ್ಲಿ ನಡೆಯಿತು….
ಈ ಸ್ಪರ್ಧೆ ಹಮ್ಮಿಕೊಳ್ಳುವಾಗ ನಮ್ಮ ನಿರೀಕ್ಷೆಯಿದ್ದದ್ದು ಅಬ್ಬಬ್ಬಾ ಅಂದರೆ 200 ಫೋಟೋ, ಆದರೆ ಈ ಸ್ಪರ್ಧೆಗೆ ಫೋಟೋ ಕಳಿಸಿದವರ
ಸಂಖ್ಯೆ ಬರೋಬ್ಬರಿ 758 ಮಂದಿ….
ಅದರಲ್ಲಿ ಅಪೂರ್ಣ ಮಾಹಿತಿ ಕೆಲವೊಂದು ಮೊಬೈಲ್ ಫೋಟೋಗಳನ್ನ ಬಿಟ್ಟು ಸ್ಪರ್ಧೆಗೆ ಆಯ್ಕೆ ಮಾಡಿದ ಫೋಟೋಗಳ ಸಂಖ್ಯೆಯೇ 608.
ಇಂದಿನ ಬಹುಮಾನ ವಿತರಣಾ ಕಾರ್ಯಕ್ರಮಕ್ಕೆ ಸುಮಾರು 400 ಕ್ಕೂ ಮಿಕ್ಕಿ ಪೋಷಕರು ಮತ್ತು ಮಕ್ಕಳು ಆಗಮಿಸಿದ್ದರು….
ಸ್ಪರ್ಧೆಯಲ್ಲಿದ್ದ ಎಲ್ಲಾ 608 ಮಕ್ಕಳಿಗೂ ಕೂಡ ಫೋಟೋ ಪ್ರಿಂಟ್ ಮಾಡಿ ಫ್ರೆಮ್ ಹಾಕಿ ನೀಡಲಾಯಿತು…
ಹಾಗಯೇ ವಿಜೇತ ಮಕ್ಕಳಿಗೆ ₹5000/- ₹3000/- ₹1500/- ಹಾಗೂ ಐದು ಸಮಾಧಾನಕರ ಬಹುಮಾನ ₹1000/-
ಹಾಗೂ ಶಾಶ್ವತ ಫಲಕ ಬಹುಮಾನವಾಗಿ ನೀಡಲಾಯಿತು…
ವೇದಿಕೆಯಲ್ಲಿ ರೋಟರಿ ಬ್ರಹ್ಮಾವರದ ಅಧ್ಯಕ್ಷರಾದ ರೊ. ದಿನೇಶ್ ನಾಯರಿ
SKPA ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿತೀನ್ ಬೆಳುವಾಯಿ, ಕಳೆದ ಸಾಲಿನ ಸಹಾಯಕ ಗವರ್ನರ್ ರೊ. ಪದ್ಮನಾಭ ಕಾಂಚನ್ ರೋಟರಿ ಬ್ರಹ್ಮಾವರದ ಕಾರ್ಯದರ್ಶಿ ಅಲ್ವಿನ್ ಅಂದ್ರಾದೆ, SKPA ಛಾಯಾ ಕಾರ್ಯದರ್ಶಿ ಪ್ರದೀಪ್ ಉಪ್ಪುರು
SKPA ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೆರಿಕ್ ಡಿಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು….
ಸುನಿಲ್ ಪಾಂಡೇಶ್ವರ ಕಾರ್ಯಕ್ರಮ ನಿರ್ವಹಿಸಿದರು.

Leave a Reply