ಕನ್ನಡ ನಾಡು-ನುಡಿ ,ಸಂಸ್ಕೃತಿ ಸಾಹಿತ್ಯ ಹಾಗೂ ವೈದ್ಯಕೀಯ ಸೇವೆಗಾಗಿ ವೈದ್ಯ ದಂಪತಿಗಳಿಗೆ ಗೌರವ ಪುರಸ್ಕಾರ

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ,ಉಡುಪಿ ತಾಲೂಕು ಘಟಕ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ , ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ* ಆಶ್ರಯದಲ್ಲಿ 

ಕನ್ನಡ ನಾಡು-ನುಡಿ ,ಸಂಸ್ಕೃತಿ ಸಾಹಿತ್ಯ ಹಾಗೂ ವೈದ್ಯಕೀಯ ಸೇವೆಗಾಗಿ ವೈದ್ಯ ದಂಪತಿಗಳಿಗೆ ಗೌರವ ಪುರಸ್ಕಾರ- 2022

ಡಾII ರಾಮಕೃಷ್ಣ ನಾಯಕ್,  ಡಾ|| ಗೀತಾ ನಾಯಕ್

ಪ್ರತಿಭಾಸಂಪನ್ನ ವೈದ್ಯರಾಗಿರುವ ಡಾ|| ರಾಮಕೃಷ್ಣ ನಾಯಕ್ ಮತ್ತು ಡಾ|| ಗೀತಾ ನಾಯಕ್ ಕಾರ್ಕಳ ಬೈಲೂರಿನ ಗುರುಕೃಪ ನರ್ಸಿಂಗ್ ಹೋಮ್ ಇದರ ಮುಖ್ಯಸ್ಥರು.

ಮಣಿಪಾಲದ ಕೆಎಂಸಿಯಲ್ಲಿ ತನ್ನ ವೈದ್ಯಕೀಯ ಶಿಕ್ಷಣವನ್ನು ಪೂರೈಸಿ ನಂತರ ಮಕ್ಕಳ ವಿಭಾಗದ ಶಿಕ್ಷಣವನ್ನು ಮುಗಿಸಿ ಕಳೆದ ಸುಮಾರು ನಾಲ್ಕು ದಶಕಗಳ ಕಾಲ ಗ್ರಾಮೀಣ ಪ್ರದೇಶದಲ್ಲಿ ನಿರಂತರ ವೈದ್ಯಕೀಯ ಸೇವೆಯನ್ನು ನೀಡುತ್ತಿದ್ದಾರೆ.

1984 ರಲ್ಲಿ ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೇವೆ ನೀಡುವ ಉದ್ದೇಶದಿಂದ ಗುರುಕೃಪ ನರ್ಸಿಂಗ್ ಹೋಮ್ ಸಂಸ್ಥೆಯನ್ನು ಸ್ಥಾಪನೆ ಮಾಡಿ ,ಅದರ ಮೂಲಕ ಸಾವಿರಾರು ರೋಗಿಗಳಿಗೆ ಆರೋಗ್ಯ ಸೇವೆ ನೀಡಿದ್ದಾರೆ. ಇದರೊಂದಿಗೆ ನರ್ಸಿಂಗ್ ಕಾಲೇಜ ನ್ನು ಪ್ರಾರಂಭಿಸಿ ಆ ಮೂಲಕ ಉತ್ತಮವಾದ ಸೇವೆ ನೀಡಿದ್ದಾರೆ. 

ಅದೆಷ್ಟೋ ಬಡ ಕುಟುಂಬಗಳಿಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡುತ್ತಾ ಬಂದಿರುತ್ತಾರೆ.

 ಡಾ|| ಗೀತಾ ನಾಯಕ್, ತಮ್ಮ ವೈದ್ಯಕೀಯ ಶಿಕ್ಷಣವನ್ನು ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಪೂರೈಸಿ, ನಂತರ ಸ್ತ್ರೀ ಆರೋಗ್ಯದ ಕುರಿತು ವಿಶೇಷ ಶಿಕ್ಷಣವನ್ನು ಮಂಗಳೂರಿನ ಕೆ.ಎಂ.ಸಿಯಲ್ಲಿ ಪೂರೈಸಿದ್ದಾರೆ.

ಕಲೆ, ಸಾಹಿತ್ಯ, ಪರಿಸರ ಮುಂತಾದವುಗಳ ಕುರಿತು ವಿಶೇಷವಾದ ಆಸಕ್ತಿಯನ್ನು ಬೆಳೆಸಿರುವ ಇವರು ವೈದ್ಯಕೀಯ ಸೇವೆಯ ಜೊತೆಗೆ ಉತ್ತಮವಾದ ಸಮಾಜಿಕ ಕಾಯ೯ ಮಾಡುತ್ತಿರುವುದು ಅಭಿನಂದನೀಯ.

ಪರಿಸರ ಮತ್ತು ಸಾಹಿತ್ಯ ಸೇವೆ. – ಪರಿಸರದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಇವರು ತಮ್ಮ ಆಸ್ಪತ್ರೆಯ ಸುತ್ತ ಮುತ್ತ ಅಲ್ಲದೆ ವಿವಿಧ ಕಡೆಗಳಲ್ಲಿ *ಗಿಡಗಳನ್ನು ನೆಟ್ಟು ಪಾಲನೆ ಮಾಡುತ್ತಿದ್ದಾರೆ. ಹತ್ತಿರದ ಸಕಾ೯ರಿ ಪ.ಪೂ ಕಾಲೇಜು – ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಸದಾ ತಮ್ಮ ಸಹಾಯ ಹಸ್ತ ಚಾಚುತ್ತಿದ್ದಾರೆ.

ತಮ್ಮ ಆಸ್ಪತ್ರಯ ವತಿಯಿಂದ ಉಚಿತ ಆರೋಗ್ಯ ಶಿಬಿರ ನಡೆಸುತ್ತಿರುವುದು ಇವರ ಸಾಮಾಜಿಕ ಸೇವೆಗೆ ಹಿಡಿದ ಕನ್ನಡಿಯಾಗಿದೆ.

ತಮ್ಮ ನಗುಮುಖ ಸೇವೆಯೊಂದಿಗೆ ಬಡ ರೋಗಿಗಳಿಗೆ ಅತೀ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುತ್ತಿರುವುದು ಶ್ಲಾಘನೀಯ.

ಮಗ ಸಿಡ್ನಿಯಲ್ಲಿ ಸಜ೯ನ್ ಆಗಿ ಸೇವೆ ಸಲ್ಲಿಸುತ್ತಿದ್ದು, ಸೊಸೆ ಕೂಡ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಹಿರಿಯ ವೈದ್ಯರಾಗಿರುವ ಈ ದಂಪತಿಗಳು ಸಮಾಜಕ್ಕೆ ನೀಡಿದ ಕೊಡುಗೆ ಅಪಾರಇವರ ಈ ಸೇವೆಗೆ ಇದೇ ಬರುವ ಜೂನ್ 30ರಂದು ಉಡುಪಿಯ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ 2:30ಕ್ಕೆ ನಡೆಯುವ ಸಮಾರಂಭದಲ್ಲಿ ಗೌರವ ಪುರಸ್ಕಾರ 2022 ನ್ನು ನೀಡಿ ಗೌರವಿಸುತ್ತಿದ್ದೇವೆ.

 
 
 
 
 
 
 
 
 
 
 

Leave a Reply