ನಾದವೈಭವಮ್ ಉಡುಪಿ ವಾಸುದೇವ ಭಟ್ ರವರಿಗೆ ನುಡಿ ನಮನ..

ಮಗು ಮನಸಿನ ನಗುಮೊಗದ ಖ್ಯಾತ ಸಂಗೀತ ನಿರ್ದೇಶಕ ಉಡುಪಿ ವಾಸುದೇವ ಭಟ್ ಇತ್ತೀಚಿಗೆ ನಿಧನರಾಗಿದ್ದಾರೆ. ಅವರ ನುಡಿ ನಮನ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸೋಮವಾರದಂದು ಕಡಿಯಾಳಿ ಭರತಾಂಜಲಿಯಲ್ಲಿ ಆಯೋಜಿಸಿತ್ತು. ದಿವಗಂತ ವಾಸುದೇವ ಭಟ್ ರವರ ಭಾವಚಿತ್ರಕ್ಕೆ ಪುಷ್ಪಾoಜಲಿ ಅರ್ಪಿಸಿದ ಸುಹಾಸo ಅಧ್ಯಕ್ಷ ಶಾಂತರಾಜ್ ಐತಾಳ್ ಮಾತನಾಡಿ ಭಟ್ ರವರು ಎಲ್ಲಾ ಕ್ಷೇತ್ರದಲ್ಲಿ ಕೈ ಯಾಡಿಸಿದವರು.

ಸಂಗೀತ, ಸಾಹಿತ್ಯ, ನಾಟಕ, ಚಲನಚಿತ್ರ ಹೀಗೆ ಹತ್ತು ಹಲವು ಕ್ಷೆತ್ರದಲ್ಲಿ ಸಾಧನೆಗೈದವರು. ಆಸಾಂಖ್ಯಾತ ವಿದ್ಯಾರ್ಥಿಗಳಿಗೆ ಜ್ಞಾನರ್ಜನೆ ಮಾಡಿದವರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ ನುಡಿನಮನ ಅರ್ಥಪೂರ್ಣವಾಗಿತ್ತು ಎಂದರು.

ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವದ ವಾಸುದೇವ ಭಟ್ಟರು ನಿರಂತರ ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿ ತೊಡಗಿಸಿ ಕೊಂಡವರು. ಸಾಹಿತ್ಯ ಲೋಕ ಅವರನ್ನು ಕಳಕೊಂಡು ಬಡವಾಗಿದೆ ಎಂದರು. ಸುಪ್ರಸಿದ್ದ ಗಾಯಕ ಹಾಗು ವಾಸುದೇವ ಭಟ್ಟರ ಶಿಷ್ಯ ಚಂದ್ರಶೇಖರ ಕೇದ್ಲಾಯ ತನ್ನ ಗುರುಗಳನ್ನು ಸ್ಮರಿಸಿ, ಒಂದು ಗಾಯನವನ್ನು ಹಾಡುವುದರ ಮೂಲಕ ಸಂಗೀತಾ ನಮನ ಅರ್ಪಿಸಿದರು.

ನಿಕಟವರ್ತಿಯಾಗಿದ್ದ ನಿವೃತ್ತ ಬ್ಯಾಂಕ್ ಅಧಿಕಾರಿ ನರಸಿಂಹ ಮೂರ್ತಿ ಅವರೊಂದಿಗೆ ಜೊತೆಯಾಗಿದ್ದ ಸಂದರ್ಭದ ರಸನಿಮಿಷಗಳನ್ನು ಹೇಳಿದರು. ಭರತಾಂಜಲಿ ನಿರ್ದೇಶಕಿ ರಶ್ಮಿ ವಿಜೆಯೇಂದ್ರ ಉಪಸ್ಥಿತರಿದ್ದರು.

ಸಂದ್ಯಾ ಶೆಣೈ, ಶ್ರೀನಿವಾಸ ಉಪಾಧ್ಯ, ನಾರಾಯಣ ಮಡಿ, ಜ್ಯೋತಿ ದೇವಾಡಿಗ, ಮರವಂತೆ ಪ್ರಕಾಶ್ ಪಡಿಯಾರ್ ನುಡಿ ನಮನ ಸಲ್ಲಿಸಿದರು. ಜನಾರ್ದನ್ ಕೊಡವೂರ್ ಸ್ವಾಗತಿಸಿ, ರವಿರಾಜ್ ಹೆಚ್. ಪಿ ಪ್ರಸಾವನೆಗೈದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಧನ್ಯವಾದವಿತ್ತರು. ರಾಜೇಶ್ ಪಣಿಯಾಡಿ ನಿರೂಪಿಸಿದರು.

 
 
 
 
 
 
 
 
 
 
 

Leave a Reply