ರಾಜ್ಯದಲ್ಲಿ ಎರಡು ವಾರ ನೈಟ್​ ಕರ್ಫ್ಯೂ: ಕರೊನಾ ಆತಂಕ ಹೆಚ್ಚಳ

ಬೆಂಗಳೂರು: ಕೇರಳದಲ್ಲಿ ಕರೊನಾ ಸೋಂಕು ಸ್ಫೋಟ, ಮೂರನೇ ಅಲೆ ಪ್ರವೇಶದ ಸಾಧ್ಯತೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯವ್ಯಾಪಿ ಮತ್ತೆ ಎರಡು ವಾರಗಳ ಕಾಲ ರಾತ್ರಿ ಕರ್ಫ್ಯೂ ವಿಸ್ತರಿಸಲು ನಿರ್ಧರಿಸ ಲಾಗಿದೆ. ಕರೊನಾತಂಕದ ಹಿನ್ನೆಲೆಯಲ್ಲಿ ಈ ಹಿಂದೆಯೇ ವಿಸ್ತರಣೆ ಮಾಡಿ ವಿಧಿಸಲಾಗಿದ್ದ ರಾತ್ರಿ ಕರ್ಫ್ಯೂ ಆಗಸ್ಟ್ 2ಕ್ಕೆ ಮುಗಿಯಲಿದೆ. 
ಆದರೆ ಈ ನಡುವೆ ಗಡಿ ಪ್ರದೇಶಗಳಲ್ಲಿ ಕರೊನಾ ಸೋಂಕು ಹೆಚ್ಚಳದ ಭೀತಿ ಆವರಿಸಿರುವುದರಿಂದ ಇನ್ನು ಎರಡು ವಾರಗಳ ಕಾಲ ರಾತ್ರಿ ಕರ್ಫ್ಯೂ ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿ ದ್ದಾರೆ. ಚಿತ್ರಮಂದಿರಗಳಿಗೆ ಶೇ.50 ಆಸನ ಭರ್ತಿ ಅನುಮತಿ, ಪಬ್‌ಗಳಿಗೆ ಅವಕಾಶ ಇಲ್ಲದಿರುವುದು ಸೇರಿ ಈ ನೈಟ್​ ಕರ್ಫ್ಯೂ ಮುಂದುವರಿಯಲಿದೆ. 
ರಾತ್ರಿ ಹತ್ತರಿಂದ ಬೆಳಗಿನ ಜಾವ ಐದರ ವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿ ಇರಲಿದೆ. ಈ ಸಂಬಂಧ ನಾಳೆ ಪರಿಷ್ಕೃತ ಆದೇಶ ಹೊರಡಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
 
 
 
 
 
 
 
 
 
 
 

Leave a Reply