ಕರಾವಳಿ ಬೈಪಾಸ್ ಬಳಿಉತ್ತಮ ಗುಣಮಟ್ಟದ ಕಾಮಗಾರಿ ಶೀಘ್ರವಾಗಿ ನೆಡೆಸುವಂತೆ ಆಗ್ರಹ.

ಉಡುಪಿ: ಕರಾವಳಿ ಬೈಪಾಸ್ ಬಳಿ, ಮಲ್ಪೆಯಿಂದ ಮಣಿಪಾಲ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ನೀರು ಹರಿದು ಹೋಗಲು ತೊಡು ನಿರ್ಮಿಸಿ ಮೆಲ್ಭಾಗದಲ್ಲಿ ಸ್ಲ್ಯಾಬ್ ಹಾಕುವ ಕಾಮಗಾರಿ ನಡೆಯುತ್ತಿದೆ. 
ಒಮ್ಮೆ ಕಳಪೆ ಮಟ್ಟದ ಕಾಮಗಾರಿಯಿಂದ ಸ್ಲ್ಯಾಬ್ ಕುಸಿದು ಬಿದ್ದಿರುವುದು ನಡೆಯಿತು. ಇದೀಗ ಮರುಕಾಮಗಾರಿಗೆ ಚಾಲನೆ ದೊರತರೂ, ಸರಳು ಜೋಡಿಸಿಟ್ಟು ಬಹಳ ದಿನಗಳು ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. 
ಇಲ್ಲಿ ಸಂಚಾರಕ್ಕೂ ತೊಂದರೆಯಾಗುತ್ತಿದ್ದು, ಅಪಘಾತ ಸಂಭವಿಸುವ ವಲಯವಾಗಿ ಮಾರ್ಪಟ್ಟಿದೆ. ಆದಷ್ಟು ಬೇಗ ಸಂಬಂಧಪಟ್ಟವರು ಉತ್ತಮ ಗುಣಮಟ್ಟದ ಕಾಮಗಾರಿ ನಡೆಸಬೇಕು. ಲಾಕ್ ಡೌನ್ ಸಂದರ್ಭದಲ್ಲಿ ಸಮಯವಿದ್ದರೂ ಕೆಲಸ ಮಾಡಲಾರದ ಕಾಂಟ್ರಾಕ್ಟ್ ದಾರರು. ಸುಮಾರು 15 ದಿವಸಗಳಿಂದ ಈ ರೀತಿಯ ಸರಳು ಜೋಡಿಸಿಟ್ಟು  ಅಪಘಾತಕ್ಕಾಗಿ ಕಾಯುತ್ತಿದೆ. 
ಲಾಕ್ ಡೌನ್ ಮುಗಿದ ಬಳಿಕ ಈ ರಸ್ತೆಯು ಅತ್ಯಂತ ಜನನಿಬಿಡ ರಸ್ತೆಯಾದುದರಿಂದ ಕಣ್ಣು ಮುಚ್ಚಿ ಕುಳಿತಿರುವ ಅಧಿಕಾರಿ ವರ್ಗ ಕಣ್ಣು ಬಿಟ್ಟು ಇತ್ತ ಗಮನ ಹರಿಸುವುದು ಒಳ್ಳೆಯದು. ಶೀಘ್ರವಾಗಿ ಸಂಚಾರಕ್ಕೆ ಹೆದ್ದಾರಿ ಅನುವು ಮಾಡಿಕೊಡಬೇಕೆಂದು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಹಾಗು ನೊಂದ ಸಾರ್ವಜನಿಕರು ಆಗ್ರಹಿಸಿದ್ದಾರೆ.
 
 
 
 
 
 
 
 
 
 
 

Leave a Reply