​ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಷಿಯೇಷನ್ ಮಂಗಳೂರು ವಲಯದ ವತಿಯಿಂದ ದಿನಸಿ ಕಿಟ್ ವಿತರಣೆ 

ಬಿಜೆಪಿ ಯುವ ಮೋರ್ಚಾ ಮಂಗಳೂರು ದಕ್ಷಿಣದ ವತಿಯಿಂದ SKPA ಮಂಗಳೂರು ವಲಯದ ಸಂಘದ ಸದಸ್ಯರಿಗೆ 50 ದಿನಸಿ ಕಿಟ್ ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಮಂಗಳೂರು ನಗರ ದಕ್ಷಿಣದ ಅಧ್ಯಕ್ಷರಾದ ಸಚಿನ್ ರಾಜ್ ರೈ, ಪ್ರಧಾನ ಕಾರ್ಯದರ್ಶಿ ಸುಶಾಂತ್ ಪೂಜಾರಿ ಉಪಾಧ್ಯಕ್ಷರಾದ ಮೌನೀಶ್ ಚೌಟ, ನಿಖಿತ್ ಕೊಟ್ಟಾರಿ ಹಾಗೂ ಸದಸ್ಯರಾದ ಸಚಿನ್ ಬಜ್ಜೆಡಿ , ಜಯರಾಜ್ ಶೆಟ್ಟಿ, ಮೋಹಿತ್, ದೀಕ್ಷಿತ್ ಶೆಟ್ಟಿ, ಚರಣ್ ಶೆಟ್ಟಿ ,
ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್  ಮಂಗಳೂರು ವಲಯದ  ಅಧ್ಯಕ್ಷರಾದ ಮಧು ಮಂಗಳೂರು, ಮಾಜಿ ಜಿಲ್ಲಾ ಸಂಚಾಲಕರಾದ  ವಿಠಲ್ ಚೌಟ, ಉಪಾಧ್ಯಕ್ಷರಾದ ವಸಂತ್ ರಾವ್  ವಲಯದ ಕಾರ್ಯದರ್ಶಿ ಶ್ರೀಕಾಂತ್ ತಿಲಕ್ , ನವೀನ್ ಕೋಡಿಕಲ್, ಖಜಾಂಜಿ ಮುಕೇಶ್ ಶೆಟ್ಟಿ, ಸುಧಾಕರ್ ಶೋಕೇಶ್ ಮೊದಲಾದವರು ಉಪಸ್ಥಿತರಿದ್ದರು. 
ಸಂಕಷ್ಟದಲ್ಲಿದ್ದ ನಮ್ಮ ಸದಸ್ಯರಿಗೆ ದಿನಸಿ ಕಿಟ್ ಗಳನ್ನು ಒದಗಿಸಿ ಉಪಕರಿಸಿದ ಬಿಜೆಪಿ ಯುವ ಮೋರ್ಚಾ ಮಂಗಳೂರು ನಗರ ದಕ್ಷಿಣದ ತಂಡಕ್ಕೆ ಮಂಗಳೂರು ವಲಯದ ಸರ್ವ  ಸದಸ್ಯರ ಪರವಾಗಿ ಕೃತಜ್ಞತೆಗಳನ್ನು ವಲಯಾಧ್ಯಕ್ಷ ಮಧು ಮಂಗಳೂರು ಸಲ್ಲಿಸಿದರು.  
​​​​
 
 
 
 
 
 
 
 
 
 
 

Leave a Reply