ಮಂಗಳಮಖಿಯರ ವರ್ತನೆ ಖಂಡನೆ – ಎಸ್. ಎಸ್. ತೋನ್ಸೆ

ಸುರತ್ಕಲ್ ಸುಂಕ ವಸೂಲಿ ದ್ವಾರ ರದ್ದು ಪಡಿಸುವಂತೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿರುವ ಆಸಿಫ್ ಇವರ ಹಲ್ಲೆಗೆ ಯತ್ನಿಸಿ ಜೀವಬೆದರಿಕೆ ಹಾಕಿರುವ ಮಂಗಳಮುಖಿಯರ ವರ್ತನೆಯನ್ನು ಬೆಂಗಳೂರು ನಗರ ಸಂಶೋಧನಾ ಕೇಂದ್ರದ ಮಾಜಿ ಸಂಪನ್ಮೂಲ ವ್ಯಕ್ತಿ ಎಸ್. ಎಸ್. ತೋನ್ಸೆ ಖಂಡಿಸಿದ್ದಾರೆ. ಮಂಗಳಮುಖಿಯರಲ್ಲಿ ವಿದ್ಯಾವಂತರಿದ್ದು ಬೇರೆ ಬೇರೆ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸ್ವಂತ ಉದ್ಯೋಗ ಮಾಡುತ್ತಾರೆ. ಅವರ ಸಂಘಟನೆ ಇದೆ. ನಗರ ಸಂಶೋಧನಾ ಕೇಂದ್ರದವತಿಯಿಂದ ರಾಜ್ಯದ ಬೇರೆ ಬೇರೆ ಕಡೆ ಏರ್ಪಡಿಸಿದ್ದ ಮಹಿಳಾ ಜನಪ್ರತಿನಿಧಿಗಳ ತರಬೇತಿಯಲ್ಲಿ ಸಂಘದ ಪದಾಧಿಕಾರಿಗಳು ಪಾಲುಗೊಂಡಿರುತ್ತಾರೆ. ಕೆಲವೇ ಕೆಲವು ಮಂಗಳಮುಖಿಯರ ಈ ರೀತಿಯ ವರ್ತನೆಯಿಂದ ರಾಜ್ಯದ ನೂರಾರು ಮಂಗಳಮುಖಿಯರ ಬಗ್ಗೆ ಸಮಾಜ ತಪ್ಪು ಅಭಿಪ್ರಾಯ ಪಡುವಂತಾಗಿದೆ. ಯಾರದೊ ಪ್ರಚೋದನೆಗೊಳಗಾದ ಮಂಗಳಮುಖಿಯರಿಂದ ಈ ಪ್ರಕರಣ ನಡೆದಂತಿದೆ. ಅವರನ್ನು ಶಿಕ್ಷೆಗೊಳಪಡಿಸುವಂತೆ ತೋನ್ಸೆ ಒತ್ತಾಯಿಸಿದ್ದಾರೆ.

 
 
 
 
 
 
 
 
 

Leave a Reply