ಕನ್ನಡಕ್ಕೂ ಜಗತ್ತಿನ ಶ್ರೇಷ್ಠ ಭಾಷೆಯಾಗುವ ಅರ್ಹತೆಯಿದೆ~ರೊಟೇರಿಯನ್ ಕೆ ಪದ್ಮನಾಭ ಕಾಂಚನ್

ಮಹಾತ್ಮಾ ಗಾಂಧಿ ಪ್ರೌಢ ಶಾಲೆ ಸಾಹೇಬ್ರಕಟ್ಟೆ ಹಾಗೂ ರೋಟರಿ ಕ್ಲಬ್ ಸಾಹೇಬ್ರಕಟ್ಟೆ ಇದರ ಸಂಯುಕ್ತ ಆಶ್ರಯದಲ್ಲಿ 66ನೆಯ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮ ಜರಗಿತು.

ಅಭ್ಯಾಗತರೆಲ್ಲ ಮೊದಲಿಗೆ ಕನ್ನಡ ತಾಯಿಗೆ ಪುಷ್ಪನಮನ ಸಲ್ಲಿಸಿದರು. ಮುಖ್ಯ ಅಭ್ಯಾಗತರಾಗಿ ರೋಟರಿ ವಲಯ 3 ರ ಸಹಾಯಕ ಗವರ್ನರ್ ರೋ. ಕೆ ಪದ್ಮನಾಭ ಕಾಂಚನ್ ಉಪಸ್ಥಿತರಿದ್ದು ಕನ್ನಡಕ್ಕೂ ಜಗತ್ತಿನ ಶ್ರೇಷ್ಠ ಭಾಷೆಯಾಗುವ ಅರ್ಹತೆಯಿದೆ, ಆ ಹಿನ್ನೆಲೆಯಲ್ಲಿ ನಾವೆಲ್ಲರೂ ಕನ್ನಡಕ್ಕಾಗಿ ತಮ್ಮನ್ನು ಸಮರ್ಪಿಸಬೇಕೆಂದು ಕರೆಯಿತ್ತರು. 

ದಾನಿಗಳಾದ ರೋ ಸಂದೀಪ್ ಶೆಟ್ಟಿಯರು ಸಮವಸ್ತ್ರಗಳನ್ನು ವಿತರಿಸಿ ಮಾತನಾಡುತ್ತ 1956 ರಲ್ಲಿಉದಯವಾದ ಮೈಸೂರುಸಂಸ್ಥಾನವು 1973 ರಂದು ಕರ್ನಾಟಕ ಎಂದು ಮರುನಾಮಕರಣ ವಾಯಿತು. ಆದರೆ ಕರ್ನಾಟಕದ ಏಕೀಕರಣಕ್ಕೆ1905 ರಲ್ಲೇ ಆಲೂರು ವೆಂಕಟರಾಯರು ಮೊದಲು ನಾಂದಿ ಹಾಡಿದ್ದರೆಂಬುದನ್ನು ಸ್ಮರಿಸಬೇಕಾಗಿದೆ ಎಂದರು.

ಸಮಾರಂಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ ರವೀಂದ್ರನಾಥ ಶೆಟ್ಟಿ, ಕಾರ್ಯದರ್ಶಿ ಕೆ ಪ್ರಸಾದ್ ಶೆಟ್ಟಿ, ಡಾ. ಸುರೇಶ್ ಶೆಟ್ಟಿ, ರೋಟರಿ ಸಾಹೇಬ್ರಕಟ್ಟೆ ಯ ಕಾರ್ಯದರ್ಶಿ ರೋ ಅಣ್ಣಯ್ಯದಾಸ್, ರೋಟರಿಯ ಸಕಲ ಪದಾಧಿಕಾರಿಗಳು ಹಾಗೂ ಶಾಲೆಯ ಇಂಟರಾಕ್ಟ್ ಕ್ಲಬ್ ಅಧ್ಯಕ್ಷೆ ಮಾನ್ಯ ಉಪಸ್ಥಿತರಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ರೋ ಯು ಪ್ರಸಾದ್ ಭಟ್ ವಹಿಸಿ ಆಡುವ ಭಾಷೆಯಲ್ಲೂ ವೈಜ್ಞಾನಿಕವಾಗಿ ಆಲೋಚಿಸುವ, ತನ್ಮೂಲಕ ಸೇವೆಯ ಮೂಲಕ ಬದುಕ ಬದ ಲಾಯಿಸುವ ಆಶಯ ಬೆಳೆಸಿಕೊಳ್ಳೋಣ ಎಂಬ ಸಂದೇಶ ಸಾರಿದರು. ಶಾಲಾ ಮುಖ್ಯ ಶಿಕ್ಷಕ ಸತೀಶ್ ನಾಯ್ಕ್ ಸ್ವಾಗತಿಸಿ ಸಹ ಶಿಕ್ಷಕಿ ಡೈಸಿ ಡಿ ಸಿಲ್ವ ವಂದಿಸಿದರು. ಶಿಕ್ಷಕ ಶಿರಿಯಾರ ಗಣೇಶ ನಾಯಕ್ ನಿರ್ವಹಿಸಿದರು.

 
 
 
 
 
 
 
 
 
 
 

Leave a Reply