ಜಾನಪದ ಕಲೆ ಉಳಿಸಲು ಯುವ ಜನತೆ ಮುಂದಾಗಬೇಕು: ನಾರಾಯಣ ಖಾರ್ವಿ

ಮೂಲ ಜಾನಪದ ಕಲೆಯು ನಶಿಸಿ ಹೋಗುವ ಕಾಲ ಘಟ್ಟದಲ್ಲಿ , ಅದನ್ನು ಉಳಿಸಿ ಬೆಳೆಸುವ ಬಗ್ಗೆ ಯುವಕರು ಆಸಕ್ತಿ ತೋರಬೇಕು ಎಂದು ಕರ್ನಾಟಕ ರಾಜ್ಯ ಕೊಂಕಣಿ ಆಕಾಡೆಮಿ ಮಂಗ ಳೂರು ಇದರ ಮಾಜಿ ಅಧ್ಯಕ್ಷ ಕೆ.ನಾರಾಯಣ ಖಾರ್ವಿ ಹೇಳಿದರು.

ಅವರು ಇತ್ತೀಚೆಗೆ ಬ್ರಹ್ಮಾವರ ತಾಲೂಕಿನ ಹೆಗ್ಗುಂಜೆ ಗ್ರಾಮದ ಅಂತನಕೊಡ್ಲು ನಲ್ಲಿ ನಡೆದ, ಶ್ರೀ ಮಲ್ಲಿಕಾರ್ಜುನ ಕುಡುಬಿ ಜಾನಪದ ಕಲಾ ಸಂಘ (ರಿ.) ಹೆಗ್ಗುoಜೆ ಮಂದಾರ್ತಿ. ಇದರ ದಶ ಮಾನೋತ್ಸವ 2023 ಕಾರ್ಯಕ್ರಮವು ಉದ್ಘಾಟಿಸಿ ಮಾತನಾಡಿದರು.
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಹಿರಿಯರಾದ ಮೋಹನ ನಾಯ್ಕ ನಕ್ತನಕೋಡಿ, ನರಸಿಂಹ ನಾಯ್ಕ ಅಂತನಕೊಡ್ಲು, ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ ಕೃಷ್ಣ ನಾಯ್ಕ ಮುಂಡಾಡಿ (ಯಕ್ಷಗಾನ ), ಕುಮಾರಿ ದೀಪಾ ಕಿರಾಡಿ ಅಜ್ಜಿಕಲ್ಲು (ಕ್ರೀಡೆ), ಶ್ರೀ ವಿಜಯ ಕುಮಾರ ಮಂದಾರ್ತಿ, ಕುಮಾರಿ ಸ್ವಾತಿ ಅಂತನಕೊಡ್ಲು ಮತ್ತು ಶ್ರೀ ಅಣ್ಣಪ್ಪ ಅಂತನಕೊಡ್ಲು ಇವರನ್ನು ಅಭಿನಂದಿಸಲಾಯಿತು.
ನರಸಿಂಹ ನಾಯ್ಕ ಗಳಿನಕೊಡ್ಲು, ಸೀತಾ ಅಂತನಕೊಡ್ಲು, ಆನಂದ ನಾಯ್ಕ ಬಿಲ್ಲಾಡಿ ಮತ್ತು ಶ್ರೀಮತಿ ಕಾಳಿ ಬಾಯಿ ಅಂತನಕೊಡ್ಲು ಇವರಿಗೆ ಸಂಘದವರು ಧನ ಸಹಾಯವನ್ನು ನೀಡಿದರು.
ಪ್ರತಾಪ ಹೆಗ್ಡೆ ಮಾರಳಿ, ಲೋಕೇಶ್ ಪಿ ಹೆಗ್ಡೆ ಅಲ್ತಾರು, ವಿಖ್ಯಾತ ಶೆಟ್ಟಿ ಹೆಗ್ಗುಂಜೆ, ಶ್ರೀನಿವಾಸ ದೇವಾಡಿಗ ಹೆಗ್ಗುಂಜೆ, ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ , ಬಸವ ನಾಯ್ಕ ಅಂತನಕೊಡ್ಲು, ಹೆಚ್.ಗಣೇಶ ಶೆಟ್ಟಿ ಮಂದಾರ್ತಿ, ಗುರುಪ್ರಸಾದ ನೀರ್ಜೆಡ್ಡು, ಸುಕುಮಾರ ಶೆಟ್ಟಿ ನೀರ್ಜೆಡ್ಡು, ಬಾಬು ನಾಯ್ಕ ಅಂತನಕೊಡ್ಲು, ಪ್ರಭಾಕರ ನಾಯ್ಕ ಕಲ್ಮರ್ಗಿ, ರಮೇಶ್ ಭಟ್ ಹೆಗ್ಗುಂಜೆ, ನಾರಾಯಣ ನಾಯ್ಕ ಬಿಲ್ಲಾಡಿ, ರತ್ನ ಬಿಲ್ಲಾಡಿ, ಶೋಭಾ ಬಿ.ಶೆಟ್ಟಿ ಹೆಗ್ಗುಂಜೆ, ರಘುರಾಮ ನಾಯ್ಕ ಅಂತನಕೊಡ್ಲು, ಉಪಸ್ಥಿತರಿದ್ದರು.
ಸಂಘದ ಸದಸ್ಯರಾದ ಕುಮಾರಿ ಸ್ವಾತಿ ಸ್ವಾಗತಿಸಿ,ಚಂದ್ರ ನಾಯ್ಕ ಗಳಿನಕೊಡ್ಲು ಪ್ರಾಸ್ತವಿಕವಾಗಿ ಮಾತನಾಡಿದರು. ಲಕ್ಷ್ಮಣ ನಾಯ್ಕ ಗಳಿನಕೊಡ್ಲು ವಂದಿಸಿ, ಅಮರ್ ನಿರೂಪಿಸಿದರು

 
 
 
 
 
 
 
 
 
 
 

Leave a Reply