ಹೊರಗಡೆ ದಾಳಿ- ಒಳಗಡೆ ಜೀವನ ಜೋಕಾಲಿ

ಕೀವ್‌: ಯೂಕ್ರೇನ್​ ಮೇಲೆ ರಷ್ಯಾ ದಾಳಿ ಮಾಡಿದ ನಂತರ ಅಲ್ಲಿಯ ಪ್ರಜೆಗಳು ಅಕ್ಷರಶಃ ನಲುಗಿಹೋಗಿದ್ದಾರೆ. ಯಾವಾಗ ಬಾಂಬ್​ ಯಾರ ಮೇಲೆ ಬೀಳುವುದೋ ಎಂದು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಯೂಕ್ರೇನ್​ ನಿವಾಸಿಗಳು ಇದ್ದರೆ ಅದೇ ಇನ್ನೊಂದೆಡೆ ಈ ಬಾಂಬ್​ ದಾಳಿಯ ಭೀತಿಯ ನಡುವೆಯೇ ಜೋಡಿಯೊಂದು ಮದುವೆಯಾಗಿರುವ ಘಟನೆ ನಡೆದಿದೆ.

ಉಕ್ರೇನ್‌ ರಾಜಧಾನಿ ಕೀವ್‌ನ ಕಲ್ಯಾಣ ಮಂಟಪದಲ್ಲಿ ಯುದ್ಧದ ಭೀತಿಯ ಜತೆಗೇ ಜೋಡಿ ಮದುವೆಯಾಗಿದ್ದು, ಇವರೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈರಲ್​ ಆಗಿದ್ದಾರೆ. ಕೀವ್‌ ಸಿಟಿ ಕೌನ್ಸಿಲ್‌ನ ಡೆಪ್ಯೂಟಿ ಆಗಿರುವ 21 ವರ್ಷದ ಅರಿವಾ, ಸಾಫ್ಟ್‌ವೇರ್‌ ಇಂಜಿನಿಯರ್ ಆಗಿರುವ ಫರ್ಸಿನ್‌ ಅವರ ವಿವಾಹ ಇದಾಗಿದೆ.

ಇವರ ಮದುವೆ ಬರುವ ಮೇ ತಿಂಗಳಲ್ಲಿ ಫಿಕ್ಸ್​ ಆಗಿತ್ತು. ಆದರೆ ಈಗಿನ ಪರಿಸ್ಥಿತಿಯಲ್ಲಿ ಮುಂದೆ ಏನಾಗುವುದೋ ಎಂದು ಅರಿಯದೇ ಮೊದಲೇ ಮದುವೆಗೆ ನಿರ್ಧರಿಸಿದ್ದಾರೆ. ಮದುವೆ ಸಮಾರಂಭದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದೆ.

ಯೂಕ್ರೇನ್​ನಲ್ಲಿ ಉದ್ವಿಗ್ನ ವಾತಾವರಣ ಇದೆ. ಭವಿಷ್ಯ ಹೇಗಿರುತ್ತದೋ ಗೊತ್ತಿಲ್ಲ. ಅದಕ್ಕಾಗಿ ಈಗಲೇ ಮದುವೆಯಾಗೋಣ ಎಂದು ನಿರ್ಧರಿಸಿರುವುದಾಗಿ ಜೋಡಿ ಹೇಳಿದೆ

 
 
 
 
 
 
 
 
 
 
 

Leave a Reply