ಆತಂಕಕಾರಿಯಾಗಿದೆ ಚೀನಾದ ಲ್ಯಾಬ್ ನಲ್ಲಿ ಸೋರಿಕೆಯಾಗಿರುವ ಇನ್ನೊಂದು ವೈರಸ್!!

ನವದೆಹಲಿ: ಜಗತ್ತಿನಾದ್ಯಂತ ಭೀಕರ ಮಾರಕ ಕರೊನವನ್ನು ಪಸರಿಸಿದ ಬೆನ್ನಲ್ಲೇ ಚೀನಾದಲ್ಲಿ ಇದೀಗ ಇನ್ನೊಂದು ಮಹಾಮಾರಿ ವೈರಸ್ ಸೋರಿಕೆಯಾಗಿದೆ ಎಂದು ಮಾಧ್ಯಮಗಳು ತಮ್ಮ ವರದಿಯಲ್ಲಿ ತಿಳಿಸಿವೆ. ಲ್ಯಾಬ್ ಒಂದರಿಂದ ಸೋರಿಕೆಯಾದ ಈ ವೈರಸ್ ಮಾನವರಲ್ಲಿ ನಪುಂಸಕತ್ವ ಉಂಟು ಮಾಡುವ ಸಾಧ್ಯತೆ ಹೊಂದಿದೆ ಎನ್ನಲಾಗಿದೆ.

ಆತಂಕಕಾರಿಯಾಗಿರುವ ಈ ವೈರಸ್ ಗೆ ಚೀನಾದಲ್ಲಿ ಈಗಾಗಲೇ 3,245 ಮಂದಿ ತುತ್ತಾಗಿದ್ದಾರೆ ಎಂಬ ಮಾಹಿತಿ ಮೂಲಗಳು ನೀಡಿವೆ. ಚೀನಾದ ಸರ್ಕಾರಿ ಒಡೆತನದ ಗ್ಲೋಬಲ್ ಟೈಮ್ಸ್ ನ ವರದಿಯ ಪ್ರಕಾರ, 11 ಸಾರ್ವಜನಿಕ ವೈದ್ಯಕೀಯ ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಈ ಹೊಸ ವೈರಸ್​ನ ಮೇಲುಸ್ತುವಾರಿಗೆ ನಿಯೋಜಿಸಲಾಗಿದ್ದು , ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದೆ.

Leave a Reply