ಯು. ಎ. ಇ. ಬ್ರಾಹ್ಮಣ ಸಮಾಜ, ದುಬೈ ವಿಂಶತಿ ಉತ್ಸವ

2003 ರಲ್ಲಿ ಸ್ಥಾಪಿತವಾದ ಯು. ಎ. ಇ. ಬ್ರಾಹ್ಮಣ ಸಮಾಜ, ತನ್ನ ಸಮುದಾಯ ಸೇವೆಯ 20ನೆಯ ವರ್ಷದ ಆಚರಣೆಯನ್ನು 20 ಕಾರ್ಯಕ್ರಮಗಳ ಆಯೋಜನೆಯ ಮೂಲಕ ವಿಭಿನ್ನವಾಗಿ ಆಚರಿಸುತ್ತಿದ್ದು, ಸಮಾರೋಪ ಸಮಾರಂಭ – ವಿಂಶತಿ ವೈಭವದ ಸವಿನಯ ಆಮಂತ್ರಣ ವನ್ನು ಐತಿಹಾಸಿಕ ಅಯೋಧ್ಯೆಯಲ್ಲಿ – ಗುರುವಾರ, ಮಾರ್ಚ್ 7 ರಂದು ವಿಧ್ಯುಕ್ತವಾಗಿ ಬಿಡುಗಡೆಗೊಳಿಸಲಾಯಿತು.

ಶ್ರೀ ರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ವಿಶ್ವಸ್ತ ಮಂಡಳಿ ಸದಸ್ಯ, ಅಧೋಕ್ಷಜ ಪೇಜಾವರ ಮಠಾಧೀಶ ಪರಮ ಪೂಜ್ಯ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು, ಕರೆಯೋಲೆಯನ್ನು ಮಂಗಳಾರತಿಯ ಸಂದರ್ಭದಲ್ಲಿ ಶ್ರೀ ರಾಮ ದೇವರ ಕರಕಮಲದಲ್ಲಿರಿಸಿ ಯಶಸ್ಸಿಗೆ ಪ್ರಾರ್ಥಿಸಿ, ಹರಸಿದ್ದಾರೆ. ಇಂತಹ ಅಪೂರ್ವ ಸೌಭಾಗ್ಯ ಬಹುಶ ಇದುವೇ ಪ್ರಥಮ.

ಅವರು ತಮ್ಮ ಅನುಗ್ರಹ ಸಂದೇಶದಲ್ಲಿ – ಯು. ಎ. ಇ. ಬ್ರಾಹ್ಮಣ ಸಮಾಜದ ಎರಡು ದಶಕಗಳ ಸಾಧನೆಯನ್ನು ಶ್ಲಾಘಿಸುತ್ತ, ನಮ್ಮ ಮುಂದಿನ ಪೀಳಿಗೆಗೆ, ಸನಾತನ ಸಂಪ್ರದಾಯಗಳ ಅರಿವನ್ನು ಮನದಟ್ಟು ಮಾಡುವ ನಿಟ್ಟಿನಲ್ಲಿ ಸಮಾಜ ಕಾರ್ಯಗತವಾಗಿರುದಕ್ಕೆ ಸಂತಸ ವ್ಯಕ್ತ ಪಡಿಸಿದರು. ಈ ಸಮಾಜ ಕೇವಲ ಯು.ಎ.ಇ.ಯಲ್ಲಿ ಮಾತ್ರವಲ್ಲ, ಭಾರತದಲ್ಲೂ ಅನೇಕ ಸಂಘ – ಸಂಸ್ಥೆ, ಮಠ- ಮಂದಿರ, ಗೋಶಾಲೆಗಳಿಗೂ ದೊಡ್ಡ ನೆರವು ನೀಡುತ್ತಿರುವದನ್ನು ಗುರುತಿಸಿದರು. ವಿಂಶತಿ ವೈಭವಕ್ಕೆ ಶುಭ ಹಾರೈಸುತ್ತ ಮುಂದಿನ ತಲೆಮಾರಿಗೂ ಅಷ್ಟೇ ನಿಷ್ಠೆಯಿಂದ ಸೇವೆ ಮಾಡುವ ಸೌಭಾಗ್ಯ ದಯಪಾಲಿಸಲಿ ಎಂದರು.

ಒಂದು ವರ್ಷದಲ್ಲಿ ಹಮ್ಮಿಕೊಂಡಿದ್ದ – 20 ಕಾರ್ಯಕ್ರಮಗಳ ಅದ್ಧೂರಿಯ ಸಮಾರೋಪ – ವಿಂಶತಿ ವೈಭವ ಏಪ್ರಿಲ್ 13 ರಂದು ಜುಮೇರಾದ ಬೆಕಲೋರಿಯಟ್ ಸ್ಕೂಲ್ ನಲ್ಲಿ ನಡೆಯಲಿದೆ. ಭೀಮ ವೇದಿಕೆಯಲ್ಲಿ, ವೀನಸ್ ಆತಿಥ್ಯದಲ್ಲಿ ದಿನಪೂರ್ತಿ ವೈವಿಧ್ಯಮಯ ಕಾರ್ಯಕ್ರಮಗಳ ಆಯೋಜನೆಗೆ ಬರದಿಂದ ಸಿದ್ಧಗಳು ನಡೆಯುತ್ತಿವೆ. ನೃತ್ಯ, ನಾಟಕ, ಗಾಯನ, ಸಂಗೀತ, ಯಕ್ಷಗಾನ, ಪ್ರದರ್ಶನಗಳ ಜೊತೆ, ಗೌರವ, ಅಭಿನಂನಂದನ, ಸಮ್ಮಾನಗಳೂ ನಡೆಯಲಿವೆ.

 
 
 
 
 
 
 
 
 
 
 

Leave a Reply